ತವರಲ್ಲೇ ಉಳಿದ ಪತ್ನಿ: ಗ್ರಂಥಪಾಲಕ ಆತ್ಮಹತ್ಯೆ

Mangalore University librarian Siddalingappa Kumbar commit suicide
ಮಂಗಳೂರು, ಜೂನ್ 28: ಅವರು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದ ಪ್ರತಿಭಾವಂತ. ಕೆಲಸ ಮಾಡುತ್ತಿದ್ದುದು ಜ್ಞಾನದೇಗುಲದಲ್ಲಿಯೇ. ಆದರೆ ಪತ್ನಿಯ ಮೋಹ ಅವರನ್ನು ಪರಲೋಕವಾಸಿಯನ್ನಾಗಿಸಿದೆ. ಅವರ ಹೆಸರು ಡಾ. ಸಿದ್ದಲಿಂಗಪ್ಪ ಎಸ್ ಕುಂಬಾರ.

ನೇಣಿಗೆ ಶರಣಾದ ದುರ್ದೈವಿ 46 ವರ್ಷದ ಡಾ. ಸಿದ್ದಲಿಂಗಪ್ಪ ಅವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಗ್ರಂಥಪಾಲಕರಾಗಿ ಉದ್ಯೋಗದಲ್ಲಿದ್ದರು. ಕೊಣಾಜೆಯಲ್ಲಿ ಮಂಗಳೂರು ವಿವಿ ವಸತಿಸಮುಚ್ಚದಲ್ಲಿ ಪತ್ನಿ ಜತೆ ವಾಸವಾಗಿದ್ದರು.

ಪತ್ನಿ ರೇವಮ್ಮ ಜತೆ ಮನಸ್ತಾಪ ಮಾಡಿಕೊಂಡಿದ್ದರು. ಇತ್ತೀಚೆಗೆ ತವರಿಗೆ ಹೋಗಿದ್ದ ಪತ್ನಿ ಬಿಜಾಪುರದಲ್ಲೇ ಉಳಿದಿದ್ದರು. ಆದರೆ ಸಿದ್ದಲಿಂಗಪ್ಪ ತಮ್ಮ ಮಕ್ಕಳೊಂದಿಗೆ ಮಂಗಳೂರಿಗೆ ವಾಪಸಾಗಿದ್ದರು. ಆದರೆ ವಿದ್ಯಾವಂತ ಸಿದ್ದಲಿಂಗಪ್ಪ ಅವರು ಗುರವಾರ ಯಾವುದೋ ಮಾಯದಲ್ಲಿ ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾರೆ. ಬುಧವಾರವೇ ಕಚೇರಿಗೆ ಗೈರುಹಾಜರಾಗಿದ್ದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.

ಈ ಮಧ್ಯೆ, ಗುರುವಾರ ಸಂಜೆಯ ವೇಳೆಗೆ ವಿವಿ ಕ್ಯಾಂಪಸ್ಸಿನ ಗುಡ್ಡಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಡಾ. ಸಿದ್ದಲಿಂಗಪ್ಪ ಶವ ಪತ್ತೆಯಾಗಿದೆ. ತಾವು ಉದ್ಯೋಗದಲ್ಲಿದ್ದ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿಯೇ ಪಿಎಚ್‌. ಡಿ ಪದವಿಯನ್ನು ಪೂರೈಸಿದ್ದರು.

ವಿಶ್ವವಿದ್ಯಾನಿಲಯದ ಗ್ರಂಥಾಲಯದಲ್ಲಿ 1991 ರಿಂದ 2007 ರವರೆಗೆ ಅಸಿಸ್ಟೆಂಟ್ ಲೈಬ್ರೇರಿಯನ್ ಆಗಿದ್ದ ಅವರು 2007ರಿಂದ ಉಪ ಗ್ರಂಥಪಾಲಕರಾಗಿ ಸೇವೆ ಸಲ್ಲಿಸುತ್ತಿದ್ದರು. ಧಾರವಾಡ ವಿಶ್ವವಿದ್ಯಾನಿಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದ ಪ್ರತಿಭಾವಂತ ವಿದ್ಯಾರ್ಥಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+