ಪುರಿ ಜಗನ್ನಾಥ ದೇವಾಲಯದಿಂದ ಎಫ್ಎಂ ಕೇಂದ್ರ!

ಬುಧವಾರ ನಡೆದ ದೇವಾಲಯದ ಆಡಳಿತ ಮಂಡಳಿ ಸಭೆಯಲ್ಲಿ ಸ್ವಂತ ಎಫ್ಎಂ ಕೇಂದ್ರ ಸ್ಥಾಪಿಸುವ ಕುರಿತು ಚರ್ಚೆ ನಡೆದಿದೆ. ಆದರೆ, ಅಂತಿಮ ತೀರ್ಮಾನವನ್ನು ತೆಗೆದುಕೊಂಡಿಲ್ಲ. ಸರ್ಕಾರದ ಅನುಮತಿ ಬಳಿಕ, ಆಡಳಿತ ಮಂಡಳಿ ಎಫ್ಎಂ ಕೇಂದ್ರ ಆರಂಭದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಜನರಿಗೆ ಪೂರಿ ಜನನ್ನಾಥ ದೇವಾಲಯದ ಮಹಿಮೆಯನ್ನು ಸಾರಿ ಭಕ್ತರನ್ನು ಆಕರ್ಷಿಸುವ ಉದ್ದೇಶದಿಂದ ಸ್ವಂತ ಎಫ್ಎಂ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಕೇಂದ್ರ ಸ್ಥಾಪಿಸಲು ಸುಮಾರು 5 ಕೋಟಿ ರೂ.ಗಳ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.
ಎಂಟು ಗಂಟೆ ಸೇವೆ : ದೇವಾಲಯದ ಸ್ವಂತ ಎಫ್ಎಂ ರೆಡಿಯೋ ದಿನಕ್ಕೆ ಎಂಟುಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ. ಬೆಳಗ್ಗೆ ಮತ್ತು ಸಂಜೆ ನಾಲ್ಕಗಂಟೆಗಳ ಕಾಲ ಎಫ್ಎಂ ಪ್ರಸಾರ ಜನರಿಗೆ ಲಭ್ಯವಾಗಲಿದೆ. ದೇಶದ ಸುಪ್ರಸಿದ್ಧ ಗಾಯಕರು ಹಾಡಿದ ಭಜನೆಗಳು ರೆಡಿಯೋನಲ್ಲಿ ಪ್ರಸಾರವಾಗಲಿದೆ.
ಭಜನೆಗಳು ಜಗನ್ನಾಥ, ಬಲಭದ್ರ ಮತ್ತು ಸುಮಿತ್ರಾ ದೇವರ ಮೇಲಿನವಾಗಿರುತ್ತವೆ. ರಾಜ್ಯದ ಪ್ರಸಿದ್ಧ ಸಂಗೀತಗಾರರಿಂದ ಈಗಾಗಲೇ ಭಜನೆಗಳನ್ನು ಹಾಡಿಸಿ, ಸಂಗ್ರಹಿಸುವ ಕಾರ್ಯ ಪ್ರಾರಂಭವಾಗಲಿದೆ. ಎಎಫ್ಎಂ ರೆಡಿಯೋ ಅಧಿಕೃತವಾಗಿ ಎಂದು ಉದ್ಘಾಟನೆಯಾಗಲಿದೆ ಎಂದು ಸದ್ಯದಲ್ಲೇ ತಿಳಿಯಲಿದೆ.
ಜುಲೈತಿಂಗಳಿನಲ್ಲಿ ದೇವಾಲಯದ ರಥಯಾತ್ರೆ, ವಾರ್ಷಿಕ ಉತ್ಸವಗಳು ನಡೆಯುವುದರಿಂದ ನಂತರ ಎಫ್ಎಂ ಕೇಂದ್ರ ಕಾರ್ಯಾರಂಭ ಮಾಡಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಮತ್ತು ಒಡಿಸ್ಸಾ ರಾಜ್ಯ ಸರ್ಕಾರ ಎಫ್ಎಂ ಕೇಂದ್ರಕ್ಕೆ ಇನ್ನೂ ಅನುಮತಿ ನೀಡಿಲ್ಲ.
ಸಾಮಾಜಿಕ ಜಾಲಗಳಲ್ಲೂ ಜಗನ್ನಾಥ : ಎಫ್ಎಂ ರೆಡಿಯೋ ಕೇಂದ್ರದ ಹೊರತಾಗಿ ದೇವಾಲಯದ ಟ್ವೀಟರ್ ಮತ್ತು ಫೇಸ್ ಬುಕ್ ಖಾತೆಗಳನ್ನು ತೆರೆದು, ದೇವಾಲಯದ ಕಾರ್ಯಕ್ರಮಗಳ ಮಾಹಿತಿಯನ್ನು ಜನರಿಗೆ ತ್ವರಿತವಾಗಿ ತಲುಪಿಸಲು ಮುಂದಾಗಿದೆ.












Click it and Unblock the Notifications