ರೂಪಾಯಿಗಿಂತ ವೇಗವಾಗಿ ಕುಸಿದ ಚಿನ್ನ- ಬೆಳ್ಳಿ ದರ

ವಾಯಿದಾ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ಬೆಲೆ 1,000 ರೂ. ನಷ್ಟು ಕುಸಿದಿದ್ದರೆ ಬೆಳ್ಳಿ ಬೆಲೆ 2,000 ರೂ. ನಷ್ಟು ಕರಗಿದೆ. ವಿದೇಶಿ ಮಾರುಕಟ್ಟೆಯಲ್ಲಿನ ಆತಂಕಕಾರಿ ಸ್ಥಿತ್ಯಂತರಗಳು ಮತ್ತು ಬೇಡಿಕೆ ಕುಸಿತದಿಂದಾಗಿ ಚಿನ್ನ- ಬೆಳ್ಳಿ ಬೆಲೆಗಳು ಕರಗಿವೆ.
ಗಮನಾರ್ಹವೆಂದರೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿದಿದ್ದರಿಂದ ಚಿನ್ನದ ಬೆಲೆ ಮತ್ತಷ್ಟು ಕುಸಿಯುವುದನ್ನು ತಡೆದಂತಾಗಿದೆ. ಆದರೆ ವಿಶ್ವ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಳೆದೆರಡು ವರ್ಷಗಳಲ್ಲಿ ಇಂದು ಗರಿಷ್ಠ ಮಟ್ಟದಲ್ಲಿ ಕುಸಿದಿದೆ.
ಇಂದು Multi Commodity Exchangeನಲ್ಲಿ ಜುಲೈ ತಿಂಗಳಿಗೆ 10 ಗ್ರಾಂ ಚಿನ್ನಕ್ಕೆ 27,271 ರೂ.ಗೆ ನಿಂತಿತ್ತು. ಇನ್ನು, ಬೆಳ್ಳಿ 2,000 ರೂ ಕುಸಿತ ಕಂಡು ಕೆಜಿಗೆ 41,910 ರೂ. ನಷ್ಟಿದೆ.












Click it and Unblock the Notifications