ಚಿತ್ರಗಳಲ್ಲಿ: ಮುಂಗಾರು ಮಳೆ... ಹನಿಗಳ ಲೀಲೆ
ಬೆಂಗಳೂರು, ಜೂ.16: ಹವಾಮಾನ ಇಲಾಖೆ ಜೂನ್ 7ರೊಳಗೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ ಈ ಮುಂಚೆ ಅಂದಾಜು ಮಾಡಿತ್ತು. ಆದರೆ, ಜೂ.16ರ ವೇಳೆಗೆ ಕರ್ನಾಟಕದ ಅರ್ಧ ಭಾಗ ಮಾತ್ರ ಒದ್ದೆ ಮುದ್ದೆಯಾಗಿದೆ. ಕಳೆದ ಮೂರು ದಿನಗಳಿಂದ ಆರಬ್ಬಿ ಸಮುದ್ರದಲ್ಲಿ ತಟಸ್ಥವಾಗಿದ್ದ ಮುಂಗಾರು ಮಾರುತಗಳು ನಿಧಾನವಾಗಿ ಬಂಗಾಳಕೊಲ್ಲಿಯ ದಕ್ಷಿಣ ಭಾಗ, ಮಧ್ಯಭಾಗ ಮತ್ತು ಈಶಾನ್ಯ ಭಾಗದತ್ತ ಚಲಿಸಲಾರಂಭಿಸಿವೆ.
ಜೂನ್ 3ಕ್ಕೆ ಕೇರಳ ಪ್ರವೇಶಿಸಿದ ಮುಂಗಾರು ಜೂನ್ 5ರ ವೇಳೆಗೆ ಕರ್ನಾಟಕ ಪ್ರವೇಶಿಸಬೇಕಿತ್ತು. ಆದರೆ, ಅರಬ್ಬಿ ಸಮುದ್ರದಿಂದ ಬಂಗಾಳಕೊಲ್ಲಿ ಪ್ರವೇಶಿಸುವ ಮುಂಗಾರು ಮಾರುತಗಳು ತಟಸ್ಥವಾಗಿದ್ದರಿಂದ ರಾಜ್ಯಕ್ಕೆ ಮುಂಗಾರು ಪ್ರವೇಶ ಕೊಂಚ ವಿಳಂಬವಾಯಿತು.
ಮಲೆನಾಡು, ಕರಾವಳಿ ಒದ್ದೆ: ನಿರೀಕ್ಷೆಯಂತೆ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭರ್ಜರಿ ಮಳೆಯಾಗಿದೆ. ಸುಮಾರು 3.5 ಟಿಎಂಸಿ ಅಡಿ ನೀರು ಇಟ್ಟುಕೊಂಡಿರುವ ಗಾಜನೂರಿನ ತುಂಗಾ ಅಣೆಕಟ್ಟು ಭರ್ತಿಯಾಗಿದೆ. ಮಂಗಳೂರಿನ ಕಡಲ್ಕೊರೆತ ಮುಂದುವರೆದಿದೆ.
ಬೆಂಗಳೂರು, ಕನಕಪುರ, ಮಂಡ್ಯ, ಮೈಸೂರು ಭಾಗಗಳು ಸೇರಿದಂತೆ ರಾಜ್ಯದಲ್ಲಿ ಜೂನ್ ಮೊದಲ ವಾರ ಬೀಳಬೇಕಿದ್ದ ಮುಂಗಾರು ಮಳೆ ಸರಿಯಾಗಿ ಬಿದ್ದಿಲ್ಲ.
ಕುಡಿಯುವ ನೀರಿನ ಸಮಸ್ಯೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಸೂಚಿಸಲಾಗಿದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ದೆಹಲಿಯಲ್ಲಿ ಮಳೆ ಕೊಂಚ ಬ್ರೇಕ್ ತೆಗೆದುಕೊಂಡಿದ್ದು ಜೂ.29ರ ವೇಳೆಗೆ ಮತ್ತೆ ಆರ್ಭಟಿಸುವ ಸೂಚನೆ ಸಿಕ್ಕಿದೆ. ಶುಕ್ರವಾರ 5.5 ಮಿ.ಮೀ ಮಳೆಗೆ ದೆಹಲಿ ನೆತ್ತಿ ಕೊಂಚ ತಣ್ಣಗಾಗಿದೆ. ಮುಂಬೈನಂತೆ ದೆಹಲಿಯಲ್ಲೂ ಮಳೆಯಿಂದ ಟ್ರಾಫಿಕ್ ಜಾಮ್ ಹೆಚ್ಚಾಗುತ್ತಿದೆ. ಮಳೆ ಚಿತ್ರಗಳನ್ನು ನೋಡಿ..

ಮುಂಗಾರು ಮಳೆ ಆಗಮನ
ಕಾರ್ಮೋಡದಲ್ಲಿ ಸಾಗುತ್ತಿದೆ ವಿಮಾನ.. ಪ್ರತಿಕೂಲ ಹವಾಮಾನದ ನಡುವೆ ಸಾಗಿದೆ ಯಾನ

ಮಳೆ ಬಂತು ಮನೆ ಸೇರಿ
ಮೊದಲ ಮಳೆ ಅಗಮನಕ್ಕೂ ಮುನ್ನ ಮನೆ ಸೇರುವ ತವಕ

ದೆಹಲಿಯಲ್ಲಿ ಬಿಸಿಲ ಬೇಗೆ
ನವದೆಹಲಿ: ಮಳೆಯಲ್ಲಿ ನೆನೆಯುವ ಸುಖ ಅನುಭವಿಸುವ ಮುನ್ನ ಚಿಣ್ಣರಿಗೆ ಪೈಪ್ ನೀರು ಆಧಾರವಾಗಿತ್ತು.

ಭುವನೇಶ್ವರಲ್ಲಿ ಮಳೆ ಮಕ್ಕಳು
ಭುವನೇಶ್ವರ: ನಗರದ ಹೊರವಲಯದಲ್ಲಿ ಬಿಸಿಲು ಬೇಗೆಯಿಂದ ಬೆಂದ ಸ್ಲಂ ಮಕ್ಕಳು ನೀರಿನಲ್ಲಿ ಆಟವಾಡುತ್ತಾ ಆನಂದಿಸುತ್ತಿದ್ದಾರೆ.

ಮುಂಬೈನಲ್ಲಿ ಟ್ರಾಫಿಕ್ ಜಾಮ್
ಮುಂಬೈ: ರಸ್ತೆಯಲ್ಲಿ ತುಂಬಿದ ನೀರಿನ ಮಧ್ಯೆ EST ವಾಹನಗಳು, ಟ್ಯಾಕ್ಸಿಗಳು

ಚೆನ್ನೈನ ಮಳೆ
ಚೆನ್ನೈ: ಮಳೆ ನಡುವೆ ಟಿವಿಎಸ್ ನಲ್ಲಿ ಸಂಸಾರದ ಸವಾರಿ

ಶಾಲೆಗೆ ಹೊರಟ ಮಕ್ಕಳು
ಚೆನ್ನೈ: ಮಳೆ ನಡುವೆ ಶಾಲೆಗೆ ಹೊರಟ ಮಕ್ಕಳು

ಕೋಲ್ಕತ್ತಾದಲ್ಲಿ ಮಳೆ
ಕೋಲ್ಕತ್ತಾ: ಮಳೆಯ ನಡುವೆ ಸಾಗಿದೆ ನಿತ್ಯ ಜೀವನ. ಸುರಕ್ಷಿತ ಸ್ಥಳಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವ ಸೈಕಲ್ ಸವಾರ

ದೆಹಲಿ ಮಳೆ
ದೆಹಲಿ: ಕಳೆದ ವಾರ ಸುರಿದ ಮಳೆಯನ್ನು ಆನಂದಿಸುತ್ತಾ ಸಾಗಿರುವ ದೆಹಲಿ ಯುವ ಜನತೆ

ಮುಂಬೈನ ಮಳೆ
ಮುಂಬೈ: ಹಲವಾರು ಪ್ರದೇಶಗಳಲ್ಲಿ ಮಳೆ ಜನ ಜೀವನ ಅಸ್ತವ್ಯಸ್ತಗೊಳಿಸಿದೆ. ಆದರೂ ಮಳೆ ನಡುವೆ ನಿತ್ಯ ಜೀವನ ಸಾಗಿದೆ.

ಮುಂಬೈನಲ್ಲಿ ಭಾರಿ ಮಳೆ
ಮುಂಬೈ: ಮಳೆ ನಡುವೆ ನಿಂತ ವಾಹನಗಳು

ಕೋಲ್ಕತ್ತಾದಲ್ಲಿ ಮಳೆ
ರೈಲು ನಿಲ್ದಾಣದಲ್ಲಿ ಕಳೆದ ಶುಕ್ರವಾರ ಮಳೆ ನಡುವೆ ಸಾಗುತ್ತಿರುವ ಜನಸಂದಣಿ












Click it and Unblock the Notifications