ಅಸಹಜ ಸಂಭೋಗ: ಜೈಲುಪಾಲಾದ ಮಾಜಿ ಮಂತ್ರಿ

ಬಹುಜನ ಸಮಾಜವಾದಿ ಪಕ್ಷದ ಮಾಜಿ ಸಚಿವ ಚೌಧರಿ ಬಷೀರ್ ಈ ಕಥಾನಕದ ಹೀರೋ ಕಮ್ ವಿಲನ್. ಈತ ತನ್ನ ಧರ್ಮಪತ್ನಿಯ ಜತೆ ನಿಸರ್ಗಕ್ಕೆ ವಿರುದ್ಧವಾದ ಅಸಹಜ ಸಂಭೋಗ ಮಾಡಿದ, ಆಕೆ ಗರ್ಭವತಿಯಾದಾಗ ಸೆಕ್ಸ್ ಪೀಡನೆಯಲ್ಲಿ ತೊಡಗಿದ್ದ ಮತ್ತು ಆಕೆಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದ ಮೇಲೆ ನಿನ್ನೆ ಗುರುವಾರ ಜೈಲು ಸೇರಿದ್ದಾರೆ.
ಫಿರೋಜಾಬಾದಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದ ಸದರಿ ಬಿಎಸ್ಪಿ ಮಾಜಿ ಸಚಿವನ ವಿರುದ್ಧ ಆತನ ಮೂರನೆಯ ಪತ್ನಿ ನಗ್ಮಾ ಅವರು ಧೈರ್ಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ.
'2012ರ ನವೆಂಬರಿನಲ್ಲಿ ನಮ್ಮ ಮದುವೆ ನಡೆಯಿತು. ಆಗಿನಿಂದ ಚೌಧರಿ ಬಷೀರ್ ನಮಗೆ ವರದಕ್ಷಿಣೆ ಕಿರುಕುಳ ನೀಡತೊಡಗಿದ. ಮತ್ತೊಬ್ಬ ಮಹಿಳೆಯ ಜತೆಯೂ ಸಂಬಂಧ ಹೊಂದಿದ್ದ. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ ನನಗೆ ಹೊಡೆದೂ ಬಡಿದು ಮಾಡಲಾರಂಭಿಸಿದ' ಎಂದು ಬಾಧಿತ ಮಹಿಳೆ ನಗ್ಮಾ ದೂರಿದ್ದಾರೆ.
'ಅಷ್ಟೇ ಅಲ್ಲ. ನನ್ನ ಜತೆ ಅವನು ಪಶುವಿನಂತೆ ವರ್ತಿಸುತ್ತಿದ್ದ. ಲೈಂಗಿಕ ಕಿರುಕುಳ ನೀಡುತ್ತಿದ್ದ. ನಿಸರ್ಗಕ್ಕೆ ವಿರುದ್ಧವಾದ ಅಸಹಜ ಸಂಭೋಗ ಮಾಡುತ್ತಿದ್ದ. ಇದರಿಂದ ನನ್ನ ಗುಪ್ತಾಂಗಗಳು ಗಾಯಗೊಂಡಿವೆ' ಎಂದೂ ಆಕೆ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.
ಚೌಧರಿ ಬಷೀರ್ ಈ ಹಿಂದೆ ಕಾನ್ಪುರ ಶಾಸಕಿ ಜಗಾಲಾ ಎಂಬುವವರನ್ನೂ ಈ ಹಿಂದೆ ಮದುವೆಯಾಗಿದ್ದಾರೆ. ಮೊದಲು ಸಮಾಜವಾದಿ ಪಕ್ಷದಲ್ಲಿದ್ದ ಚೌಧರಿ ಬಷೀರ್, ನಂತರ ಪಕ್ಷ ತೊರೆದು BSPಗೆ ಸೇರ್ಪಡೆಯಾಗಿದ್ದರು.












Click it and Unblock the Notifications