ಕಚೇರಿಯಲ್ಲಿ ಮಹಿಳೆ ಘನತೆಗೆ ಧಕ್ಕೆ ತಂದೀರಿ ಜೋಕೆ!

ಈ ಮೂಲಕ ಸರಕಾರಿ ಕಚೇರಿಗಳಲ್ಲಿ ಪುರುಷರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ದೌರ್ಜನ್ಯಕ್ಕೆ ಒಳಪಡುತ್ತಿರುವ ಮಹಿಳೆಯರ ಸಹಾಯಕ್ಕೆ ಸರಕಾರ ಧಾವಿಸಿದಂತಾಗಿದೆ. ಹಾಗೆಯೆ, ದೌರ್ಜನ್ಯ ಎಸಗಿ ಶಿಕ್ಷೆಯಿಲ್ಲದೆ ಪಾರಾಗುತ್ತಿದ್ದವರಿಗೆ ಇದು ಎಚ್ಚರಿಕೆಯ ಗಂಟೆಯೂ ಆಗಿದೆ.
ಕರ್ನಾಟಕ ಸಿವಿಲ್ ಸರ್ವೀಸಸ್ (ಕ್ಲಾಸಿಫಿಕೇಷನ್, ಕಂಟ್ರೋಲ್ ಮತ್ತು ಅಪೀಲ್) ನಿಯಮಗಳು, 1957 ಅನ್ನು ತಿದ್ದುಪಡಿ ಮಾಡಿಲು ಕರ್ನಾಟಕ ಸಂಪುಟ ಅಸ್ತು ಎಂದಿದೆ. ಈ ನಿಯಮಗಳನ್ನು ತಿದ್ದುಪಡಿ ಮಾಡಿ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಸೇರಿಸಲಾಗುತ್ತಿದೆ.
ಈ ಮೊದಲು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಈ ನಿಯಮಗಳಲ್ಲಿ ಅಡಕ ಮಾಡಿರಲಿಲ್ಲ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸದನದಲ್ಲಿ ನುಡಿದರು. ವಿಶಾಖಾ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಈ ಕುರಿತಂತೆ ತೀರ್ಮಾನ ನೀಡಿರುವ ಹಿನ್ನೆಲೆಯಲ್ಲಿ ಈ ತಿದ್ದುಪಡಿ ಮಾಡಲು ಅಂಗೀಕರಿಸಲಾಗಿದೆ.
ಏನೇನು ಅಡಕವಾಗಿರಲಿದೆ? : ಅನಗತ್ಯ ದೈಹಿಕ ಸಂಪರ್ಕ ಮಾಡುವಂತಿಲ್ಲ, ಮಾತುಗಳು ಅಥವಾ ಸನ್ನೆಯ ಮುಖಾಂತರ ಸಹೋದ್ಯೋಗಿಗಳನ್ನು ಲೈಂಗಿಕವಾಗಿ ಹಿಂಸಿರುವಂತಿಲ್ಲ. ಮಹಿಳಾ ಉದ್ಯೋಗಿಗೆ ಯಾರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಶ್ಲೀಲ ಚಿತ್ರ ತೋರಿಸುವಂತಿಲ್ಲ ಮತ್ತು ತೋರಿಸಲು ಪ್ರಯತ್ನವನ್ನೂ ಮಾಡುವಂತಿಲ್ಲ. ಮಹಿಳೆಯರನ್ನು ಲೈಂಗಿಕ ವಸ್ತುಗಳಂತೆ ನೋಡುವಂತಿಲ್ಲ. ಮಹಿಳೆಯ ಘನತೆಗೆ ಧಕ್ಕೆ ತರುವ ಯಾವ ಕ್ರಿಯೆಯನ್ನೂ ಗಂಡಸರು ಮಾಡುವಂತಿಲ್ಲ.












Click it and Unblock the Notifications