ಚಿತ್ರಗಳಲ್ಲಿ: ಅರೆ ! ಎಲ್ನೋಡಿದ್ರು ಛತ್ರಿಗಳು ಐತ್ರಿ
ಕೋಲ್ಕತ್ತಾ, ಜೂ.14: ಕಾರ್ ಕಾರ್ ಎಲ್ನೋಡಿ ಕಾರ್ ಎಂಬ ಹಾಡಿನಂತೆ ಛತ್ರಿಗಳು ಸಾರ್ ಛತ್ರಿಗಳು ಕೋಲ್ಕತ್ತಾದಿಂದ ಬಂದ ಈ ಚಿತ್ರದಲ್ಲಿ ಛತ್ರಿ ಹಿಡಿದು ರೈಲ್ವೇ ನಿಲ್ದಾಣದಲ್ಲಿ ಸಾಗುತ್ತಿರುವ ಪ್ರಯಾಣಿಕರನ್ನು ಕಾಣಬಹುದು.
ಕೋಲ್ಕತ್ತಾದಲ್ಲಿ ಕಳೆದ ವಾರವೇ ಮುಂಗಾರು ಪ್ರವೇಶ ಪಡೆದರೂ ಅಷ್ಟು ಸದ್ದು ಮಾಡಿರಲಿಲ್ಲ. ಶುಕ್ರವಾರ ಬೆಳಗ್ಗಿನಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ರೈಲ್ವೇ ನಿಲ್ದಾಣದಲ್ಲಿ ಏಕಕಾಲಕ್ಕೆ ಒಂದೇ ಬಗೆಯ ಛತ್ರಿಗಳು ಗಗನ ಮುಖ ಮಾಡಿವೆ. ಪ್ರಯಾಣಿಕರು ಸರತಿ ಸಾಲಿನಲಿ ಇರುವೆಗಳ ಮಾದರಿಯಲ್ಲಿ ಛತ್ತಿ ಹಿಡಿದು ನಡೆಯುತ್ತಿರುವ ಚಿತ್ರ ಮತ್ತೆ ಮತ್ತೆ ನೋಡುವಂತಿದೆ.
ಭುವನ ಸುಂದರಿ ಸ್ಪರ್ಧೆ ನಡೆಸುವ ಸಂಸ್ಥೆ ಅಮೆರಿಕದ ವಿವಿಧ ಪ್ರಾಂತ್ಯದ ಸುಂದರಿಯರ ಚಿತ್ರವನ್ನು ಕಳಿಸಿಕೊಟ್ಟಿದ್ದಾರೆ. ಮಿಸ್ ಇಂಡಿಯಾನಾ, ಮಿಸ್ ಐಯೋವಾ, ಮಿಸ್ ಕಾನ್ಸಾಸ್, ಮಿಸ್ ಕೆಂಟುಕಿ ಅವರು ಸ್ಪರ್ಧೆಯ ಪ್ರಥಮ ಹಂತದಲ್ಲಿ ಬೆಕ್ಕಿನ ನಡಿಗೆ ಇಟ್ಟಿದ್ದು ಹೇಗೆ ಎಂಬುದನ್ನು ಇಲ್ಲಿ ಕಾಣಬಹುದು.
ಜಗದೇಕ ವೇಗ ಓಟಗಾರ ಜಮೈಕಾದ ಉಸೇನ್ ಬೋಲ್ಡ್ ಡೈಮೆಂಡ್ ಲೀಗ್ ಅಥ್ಲೀಟ್ ಸ್ಪರ್ಧೆಗೆ ಬಂದಿದ್ದು ಹೇಗೆ ನೋಡಿ...
ಉಳಿದಂತೆ ಮೂರನೇ ಪತ್ನಿಗೆ ವಿಚ್ಛೇದನ ನೀಡಲು ಸಿದ್ಧವಾಗಿರುವ ಮಾಧ್ಯಮ ದೊರೆ ರುಪರ್ಟ್ ಮುರ್ಡೋಕ್ ಹಾಗೂ ಪತ್ನಿ ವೆಂಡಿ ಚಿತ್ರ, ಅಮೇಥಿಯಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕೃಷಿಕರ ಜೊತೆ ಕೂತು ಚರ್ಚಿಸಿದ ಚಿತ್ರ, ಪಾಟ್ನದಲ್ಲಿನ ರೈಲು ದುರಂತ ನಕ್ಸಲರ ದಾಳಿ ಚಿತ್ರ, ಚಿಕ್ಕಮಗಳೂರಿನಲ್ಲಿ ಪೌರ ಕಾರ್ಮಿಕನ ರಕ್ಷಣೆ, ಗಗನದಲ್ಲಿ ಚೀನಿ ಗಗನಯಾತ್ರಿಗಳ ನರ್ತನ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ..

ಛತ್ರಿಗಳು ಸಾರ್ ಛತ್ರಿಗಳು
ಕೋಲ್ಕತ್ತಾ: ಛತ್ರಿ ಹಿಡಿದು ರೈಲ್ವೇ ನಿಲ್ದಾಣದಲ್ಲಿ ಸಾಗುತ್ತಿರುವ ಪ್ರಯಾಣಿಕರು

ಅಮೆರಿಕದ ಬಿಕಿನಿ ಬೆಡಗಿಯರು
ಚಿತ್ರದಲ್ಲಿ ಮಿಸ್ ಇಂಡಿಯಾನಾ ಎಮಿಲಿ ಹಾರ್ಟ್, ಮಿಸ್ ಐಯೋಮಾ ಯುಎಸ್ ಎ ರಿಚೆಲ್ ಓರ್, ಮಿಸ್ ಕಾನ್ಸಾಸ್ ಸ್ಟಾಸಿ ಕ್ಲಿಂಗಿನ್ ಸ್ಮಿತ್, ಕೆಂಟುಕಿಯ ಅಲ್ಲಿ ಲೆಗ್ಗೆಟ್, ಮಿಸ್ ಲೌಸಿಯಾನಾ ಕ್ರಿಸ್ಟಿನ್ ಗಿರಾಲ್ಟ್ ಇವರಲ್ಲಿ ಆಯ್ಕೆಯಾದವರು ಅಮೆರಿಕವನ್ನು ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪ್ರತಿನಿಧಿಸುತ್ತಾರೆ

ಎಫ್ 1 ಕಾರಿನಲ್ಲಿ ಬೋಲ್ಟ್
ನಾರ್ವೆ: ಇಲ್ಲಿನ ಬಿಸ್ಲೆಟ್ ಸ್ಟೇಡಿಯಂಗೆ ಜಗದೇಕ ವೇಗದ ಓಟಗಾರ ಜಮೈಕಾದ ಉಸೇನ್ ಬೋಲ್ಡ್ ಡೈಮೆಂಡ್ ಲೀಗ್ ಅಥ್ಲೀಟ್ ಸ್ಪರ್ಧೆಗೆ ಫಾರ್ಮೂಲಾ ಒನ್ ಕಾರು ಹತ್ತಿ ಬಂದಿದ್ದು ವಿಶೇಷ.

ಅಮೇಥಿಯಲ್ಲಿ ಯುವರಾಜ
ಅಮೇಥಿ: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸ್ಥಳೀಯ ಕೃಷಿಕರ ಜೊತೆಗೆ ಕುಲಿತು ಚರ್ಚಿಸುತ್ತಿರುವ ದೃಶ್ಯ ಸೆರೆಹಿಡಿದವರು ನಂದ್ ಕುಮಾರ್(ಪಿಟಿಐ)

ವಿಚ್ಛೇದನ ಬೇಕಂತೆ
ಲಾಸ್ ಏಂಜಲೀಸ್: ರುಪಾರ್ಟ್ ಮುರ್ಡೋಕ್ ಅವರು ತಮ್ಮ ಮೂರನೇ ಪತ್ನಿ ವೆಂಡಿ ಡೆಂಗ್ ಮುರ್ದೋಕ್ ಅವರಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಇಲ್ಲಿ ನೋಡುತ್ತಿರುವುದು 69ನೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಮಾರಂಭಕ್ಕೆ ಬಂದಾಗ ಕಂಡ ಚಿತ್ರ

ಕಾರ್ಮಿಕನ ರಕ್ಷಣೆ
ಚಿಕ್ಕಮಗಳೂರು: ಒಳ ಚರಂಡಿ ಕಾಲುವೆ ದುರಸ್ಥಿ ಸಂದರ್ಭದಲ್ಲಿ ಮಣ್ಣು ಕುಸಿದು ಹೂತು ಹೋಗಿದ್ದ ಕಾರ್ಮಿಕನನ್ನು ರಕ್ಷಣೆ ಮಾಡಿದ ಅಗ್ನಿ ಶಾಮಕದಳ ಸಿಬ್ಬಂದಿ

ತೆಲಂಗಾಣಕ್ಕಾಗಿ ಹೋರಾಟ
ಹೈದರಾಬಾದ್ : 'ಚಲೋ ಅಸೆಂಬ್ಲಿ' ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಜೊತೆ ಕೈ ಜೋಡಿಸಿದ ಮಹಿಳಾ ಪಡೆ

ಪಾಟ್ನದಲ್ಲಿ ನಕ್ಸಲ್ ದಾಳಿ
ಪಾಟ್ನ: ನಕ್ಸಲರು ದಾಳಿ ನಡೆಸಿದ ಬೋಗಿಗಳನ್ನು ವೀಕ್ಷಿಸುತ್ತಿರುವ ಪೊಲೀಸರು

ರೈಲಿನ ಮೇಲೆ ಗುಂಡಿನ ದಾಳಿ
ಜಮುಯಿ: ದನ್ ಬಾದ್ -ಪಾಟ್ನ ಇಂಟರ್ ಸಿಟಿ ಎಕ್ಸ್ ಪ್ರೆಸ್ ಒಳಭಾಗದ ದೃಶ್ಯ. ರಕ್ತದ ಕಲೆಗಳ ಜೊತೆ ಭೀತಿಯಲ್ಲಿ ಜನ

ಮಾವೋವಾದಿಗಳ ದಾಳಿ
ಪಾಟ್ನ:ಮಾವೋವಾದಿಗಳ ದಾಳಿ ನಂತರ ಭದ್ರತಾ ಸಿಬ್ಬಂದಿ ಸುತ್ತಲಿನ ಪ್ರದೇಶ ಪರೀಕ್ಷಿಸುತ್ತಿದ್ದಾರೆ.

ಗಗನದಲ್ಲಿ ಚೀನಿಯರು
ಟಿಯಾನ್ ಗಾಂಗ್-1: ಮಾನವ ಸಹಿತ ಖಗೋಳ ಯಾತ್ರೆ ಯಶಸ್ವಿಯಾದ ಖುಷಿಯಲ್ಲಿ ಚೀನಾದ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ಕಂಡು ಬಂದಿದ್ದು ಹೀಗೆ..ವ್ಯಾಂಗ್ ಯಾಪಿಂಗ್, ಜಾಂಗ್ ಜಿಯೊಗಾಂಗ್ , ನೈ ಹೈಶೆಂಗ್












Click it and Unblock the Notifications