ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ನೋಂದಣಿ ಮತ್ತಷ್ಟು ಸುಲಭ

|
Google Oneindia Kannada News

aadhar
ಬೆಂಗಳೂರು, ಜೂ. 11 : ಮಹಾನಗರ ಬೆಂಗಳೂರಿನಲ್ಲಿ ಆಧಾರ್ ನೋಂದಣಿಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆದ್ದರಿಂದ ನಗರದಲ್ಲಿ ನೂತನವಾಗಿ ಪೂರ್ವ ನಿಗದಿ ಆಧಾರ್ ನೋಂದಣಿ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ. ಜೂ 15ರ ನಂತರ ಈ ಕೇಂದ್ರಗಳು ಪ್ರಾರಂಭವಾಗಲಿವೆ.

ಬೆಂಗಳೂರು ನಗರದಲ್ಲಿ ಉದ್ಯೋಗಕ್ಕೆ ತೆರಳುವ ಜನರು ಹೆಚ್ಚು, ಇವರು ಸಮಯ ಸಿಗುವುದಿಲ್ಲ. ಆಧಾರ್ ಗಾಗಿ ಗಂಟೆಗಟ್ಟಲೇ ನೋಂದಣಿ ಕೇಂದ್ರದ ಮುಂದೆ ನಿಲ್ಲಬೇಕು ಎಂದು ದೂರುತ್ತಿದ್ದರು. ಈ ಸಮಸ್ಯೆ ನಿವಾರಿಸಲು ಪೂರ್ವ ನಿಗದಿ ನೋಂದಣಿ ಕೇಂದ್ರ ಸ್ಥಾಪಿಸಲಾಗುತ್ತದೆ.

ಸರ್ಕಾರದ ಇ - ಆಡಳಿತ ಕೇಂದ್ರ (ಸಿಇಜಿ) ಇಂತಹ ಕೇಂದ್ರಳನ್ನು ನಗರದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಿದೆ. ಮಲ್ಲೇಶ್ವರಂ, ಕಂಠೀರವ ಕ್ರೀಡಾಂಗಣದ ಸಮೀಪ ಸ್ಥಳ ಗುರುತಿಸಲಾಗಿದ್ದು, ಜೂ 15ರ ನಂತರ ಈ ಸ್ಥಳಗಳಲ್ಲಿ ಆಧಾರ್ ನೋಂದಣಿ ಕಚೇರಿ ಪ್ರಾರಂಭವಾಗಲಿದೆ.

ಏನಿದು ವ್ಯವಸ್ಥೆ : ಆಧಾರ್ ಅರ್ಜಿದಾರರು ಆನ್‌ಲೈನ್ ಮೂಲಕ ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದ. 15 ನಿಮಿಷಗಳ ಮೊದಲು ನೋಂದಣಿ ಕೇಂದ್ರಕ್ಕೆ ತೆರಳಿ, ನಿಮ್ಮ ವಿವರಗಳನ್ನು ನೀಡಿ, ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.

ಹೆಸರು ನೋಂದಾವಣೆ ಹೇಗೆ : www.karunadu.gov.in/nammaaadhaar/home ವೆಬ್ ಸೈಟ್ ಗೆ ಭೇಟಿ ನೀಡಿ ಸಾರ್ವಜನಿಕರು ತಮ್ಮ ಹೆಸರನ್ನು ನೋಂದಾವಣೆ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಹೆಸರು, ವಯಸ್ಸು, ಮೊಬೈಲ್ ನಂ ಮುಂತಾದ ಮಾಹಿತಿಗಳನ್ನು ನೀಡಬೇಕು.

ಪೂರ್ವನಿಗದಿಯ ಮಾಹಿತಿಯು ನಿಮಗೆ ಎಸ್ಎಂಎಸ್ ಮತ್ತು ಇ ಮೇಲ್ ರೂಪದಲ್ಲಿ ಬರಲಿದೆ. ಅರ್ಜಿದಾರರು ಈ ಮಾಹಿತಿಯನ್ನು ಪ್ರಿಂಟ್ ಔಟ್ ತೆಗೆದುಕೊಂಡು, ನಿಗದಿಪಡಿಸಿದ ಆಧಾರ್ ಕೇಂದ್ರಗಳಿಗೆ ಹೋಗಬಹುದಾಗಿದೆ. ಸದ್ಯ ಈ ಯೋಜನೆ ಪ್ರಾಥಮಿಕ ಹಂತದಲ್ಲಿದ್ದು, ಜೂನ್ 15ರ ನಂತರ ಪ್ರಾರಂಭವಾಗಲಿದೆ. (ಆನ್ ಲೈನ್: ಆಧಾರ್ ಕಾರ್ಡ್ ಮಾಹಿತಿ ಬದಲಾವಣೆ ಹೇಗೆ)

ಎಷ್ಟು ಕೇಂದ್ರಗಳು : ಆರಂಭಿಕ ಹಂತದಲ್ಲಿ ನಗರದಲ್ಲಿ ಐದು ಪೂರ್ವನಿಗದಿ ಆಧಾರ್ ನೋಂದಣಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಇ ಆಡಳಿತ ಕೇಂದ್ರದ ಕಾರ್ಯನಿರ್ವಹಣಾಧಿಕಾರಿ ಡಿ.ಎಸ್.ರವೀಂದ್ರ ಹೇಳಿದ್ದಾರೆ. ಮಲ್ಲೇಶ್ವರಂ ಮತ್ತು ಕಂಠೀರವ ಕ್ರೀಡಾಂಗಣದ ಸಮೀಪ ಮೊದಲ ಕೇಂದ್ರಗಳು ಆರಂಭವಾಗಲಿವೆ.

ರಾಜ್ಯದಲ್ಲಿ ಆಧಾರ್ ನೋಂದಣಿ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ರಾಜ್ಯದ ಇತರ ಕೆಲವು ನಗರಗಳಲ್ಲೂ ಈ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

English summary
Karnataka e-administration Department begins pr-registration system for aadhar card registration. In Bangalore city pr-registration counter set up at Five places. people visit to government website and register their names. and they visit aadhar counter 15 minutes before and submit all records. your counter details will reach you through SMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X