ಯಶವಂತ್ ಸಿನ್ಹಾ ಉಲ್ಟಾ ಹೊಡೆದಿದ್ದು ಏಕೆ?

Yashwant Sinha slams media for ‘creating’ Advani-Modi rift
ನವದೆಹಲಿ, ಜೂ.10: ಅತ್ತ ಪಣಜಿಯಲ್ಲಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೇರಿಸುತ್ತಿದ್ದಂತೆ ಮನೆಯಿಂದ ಹೊರಕ್ಕೆ ಬಂದ ಯಶವಂತ ಸಿನ್ಹಾ ಮೊದಲೇ ಟೈಪಿಸಿದ್ದ ಚೀಟಿಯನ್ನು ಹೊರ ತೆಗೆದು ಓದತೊಡಗಿದರು. ಅಡ್ವಾಣಿ- ಮೋದಿ ಹಾಗೂ ನನ್ನ ನಡುವೆ ಕಂದಕ ಉಂಟು ಮಾಡಿದ್ದು ಮಾಧ್ಯಮಗಳು ಎಂದು ನೇರವಾಗಿ ಹೇಳಿ ವಿವಾದಕ್ಕೆ ನಾಂದಿ ಹಾಡಿದರು.

ನರೇಂದ್ರ ಮೋದಿ ಅವರಿಗೆ ಉನ್ನತ ಹುದ್ದೆ ಸಿಗಬೇಕು ಎಂದು ಬೆಂಬಲಿಸಿದ್ದವರಲ್ಲಿ ನಾನೇ ಮೊದಲಿಗ. ಜನ ಹಾಗೂ ಕಾರ್ಯಕರ್ತರು ಇದನ್ನೇ ಬಯಸಿದರು. ಮೋದಿ ಅವರಿಗೆ ಸಮಾನರಾದ ನಾಯಕರು ಕಾಂಗ್ರೆಸ್ ಆಗಲಿ, ನಮ್ಮ ಮಿತ್ರಪಕ್ಷಗಳಲ್ಲಿಯಾಗಲಿ ಯಾರೂ ಇಲ್ಲ. ನಾವು ಮಾಧ್ಯಮಗಳಿಗೆ ಹೆಚ್ಚಿನ ಸಲಿಗೆ ನೀಡುವುದೇ ತಪ್ಪಾಗುತ್ತಿದೆ ಎನಿಸುತ್ತದೆ. ನನ್ನ ಬಗ್ಗೆ ಇಲ್ಲಸಲ್ಲದ ಕಥೆಗಳನ್ನು ಸೃಷ್ಟಿಸಿದ್ದಾರೆ ಎಂದು ಯಶವಂತ ಸಿನ್ಹಾ ತಮ್ಮ ಪತ್ರ ಓದಿದರು.

ಈ ಸಂದರ್ಭದಲ್ಲಿ ಟೈಮ್ಸ್ ನೌ ವರದಿಗಾರ್ತಿ ಅಡ್ಡಿಪಡಿಸಿದಾಗ, ದಯವಿಟ್ಟು ತಡಿಯಮ್ಮ ಇನ್ನೂ ಸುಮಾರು ಓದುವುದು ಇದೇ ನಂತರ ಮಾತನಾಡೋಣ ಎಂದು ಪತ್ರ ಓದುವುದನ್ನು ಮುಂದುವರೆಸಿದರು. [ಚಿತ್ರಗಳಲ್ಲಿ: ಮೋದಿಗೆ ಚುನಾವಣೆ ಸಾರಥ್ಯ]

ಅಡ್ವಾಣಿ ಅವರು ಬಿಜೆಪಿಯ ಪರಮೋಚ್ಚ ನಾಯಕ ಎಂಬುದರಲ್ಲಿ ಯಾವುದೇ ಸಂಶಯಬೇಡ. ಪಕ್ಷದಲ್ಲಿ ಎಲ್ಲರೂ ಅವರೊಂದಿಗೆ ಚರ್ಚಿಸಿದ ನಂತರವಷ್ಟೇ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ. ಮೋದಿ ಆಯ್ಕೆ ಬಗ್ಗೆ ಕೂಡಾ ಅಡ್ವಾಣಿ ಅವರನ್ನು ಕೇಳಲಾಗಿತ್ತು. ರಾಜನಾಥ್ ಸಿಂಗ್ ಅವರು ಅಡ್ವಾಣಿ ಅವರ ಒಪ್ಪಿಗೆ ಪಡೆದ ಮೇಲೆ ಮೋದಿ ಅವರನ್ನು ಉನ್ನತ ಹುದ್ದೆಗೇರಿಸಿದ್ದು ಇದರಲ್ಲಿ ಸಂಶಯಬೇಡ.

ನಾನು ಗೋವಾದಲ್ಲಿ ನಡೆದ ಕಾರ್ಯಕಾರಿ ಸಭೆಗೆ ಹೋಗಲಿಲ್ಲ ಎಂದ ಮಾತ್ರಕ್ಕೆ ಅಡ್ವಾಣಿ ಪರ, ಮೋದಿ ವಿರುದ್ಧ ಎಂದು ಮಾಧ್ಯಮಗಳು ಜರೆದಿರುವುದು ಸರಿಯಲ್ಲ. ನಾನು ಪಣಜಿಗೆ ಹೋಗದಿರುವ ವೈಯಕ್ತಿಕ ಕಾರಣಗಳಿತ್ತು ಎಂದು ಯಶವಂತ್ ಸಿನ್ಹಾ ಹೇಳಿದರು.

ಎಲ್ ಕೆ ಅಡ್ವಾಣಿ, ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್, ಉಮಾಭಾರತಿ ಅವರು ಬೇರೆ ಬೇರೆ ಕಾರಣ ನೀಡಿ ಪಣಜಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಗೈರು ಹಾಜರಾಗಿದ್ದರು.

ಯಶವಂತ ಸಿನ್ಹಾ ಅವರಿಗೆ ಸಮಾನ ವಯಸ್ಕ ನಾಯಕರಂತೆ ಅಸ್ತಿತ್ವದ ಪ್ರಶ್ನೆ ಕಾಡುತ್ತಿದೆ. ಇದಕ್ಕಾಗಿ ನಮ್ಮ ಮೇಲೆ ಆರೋಪ ಹೊರೆಸುವುದು ಎಷ್ಟು ಸರಿ ಎಂದು ಟೈಮ್ಸ್ ನೌ ಅರ್ನಾಬ್ ಗೋಸ್ವಾಮಿ ಅವರು ತಕ್ಷಣವೇ ಕಿಡಿಕಾರಿದ್ದರು.

ಒಂದು ರೀತಿಯಲ್ಲಿ ಇದು ನಿಜವೂ ಹೌದು, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಯಶವಂತ್ ಸಿನ್ಹಾ, ಜಸ್ವಂತ್ ಸಿಂಗ್, ಬಿಜೆಪಿಗೆ ಮರಳಿರುವ ಫೈರ್ ಬ್ರ್ಯಾಂಡ್ ಉಮಾಭಾರತಿ, ಯಶವಂತ್ ಸಿನ್ಹಾ ಅವರು ನರೇಂದ್ರ ಮೋದಿ ಎಂಬ 'ಬಿಸಿನೆಸ್' ಮೆಂಡೆಂಡ್ ರಾಜಕಾರಣಿ ಕೈ ಕೆಳಗೆ ಕೆಲಸ ಮಾಡಲು ಸಾಧ್ಯವೇ? ಎಂಬ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+