ಪ್ರಧಾನಿ ಮನಮೋಹನ್ ಸಿಂಗ್ ಖರ್ಚು ವೆಚ್ಚ ಬಹಿರಂಗ

ಹತ್ತು ಹಲವು ಹಗರಣಗಳಿಂದ ಮುಳುಗುತ್ತಿರುವ ಯುಪಿಎ ಸರ್ಕಾರದ ಬಗ್ಗೆ ಜನರಿಗೆ ಸರಿಯಾದ ಮನವರಿಕೆ ಮಾಡಿಕೊಡುವ ಉದ್ದೇಶ ಹಾಗೂ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದೊಂದಿಗೆ ಈ ವಿವರಗಳನ್ನು ಪ್ರಧಾನಿ ಸಚಿವಾಲಯ ಪ್ರಕಟಿಸಿದೆಯಂತೆ.
2004ರಿಂದ 2013ರ ಅಂತರದಲ್ಲಿ ಈ ಪ್ರಮಾಣದ ಹಣ ಖರ್ಚಾಗಿದೆ. ಬ್ರೆಜಿಲ್ ಮತ್ತು ಮೆಕ್ಸಿಕೋ ಪ್ರವಾಸದಲ್ಲಿ ಅತ್ಯಂತ ಹೆಚ್ಚು ಹಣ ವೆಚ್ಚವಾಗಿದೆ. ಕೇವಲ 8 ದಿನಗಳ ಪ್ರವಾಸಕ್ಕಾಗಿ 26.9 ಕೋಟಿ ವೆಚ್ಚವಾಗಿದೆ ಎಂದು ಪ್ರಧಾನಿ ಕಚೇರಿ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಲಾಗಿದೆ. 2004 ರಿಂದ 2013ರ ಅಂತರದಲ್ಲಿ 67 ದೇಶಗಳಿಗೆ ಪ್ರಧಾನಿ ಸಿಂಗ್ ಭೇಟಿ ನೀಡಿದ್ದಾರೆ. ಇನ್ನೂ 5 ಪ್ರವಾಸಗಳಿಗೆ ಎಷ್ಟು ವೆಚ್ಚವಾಗಿದೆ ಎಂಬ ಲೆಕ್ಕ ಸಿಕ್ಕಿಲ್ಲ.
ಪ್ರಧಾನಿ ವೇತನ ಬಹಿರಂಗ: ಇದರ ಜೊತೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರ ವೇತನ ಮತ್ತು ಭತ್ಯೆಗಳ ಕುರಿತಂತೆಯೂ ಮಾಹಿತಿ ಹೊರಬಿದ್ದಿದೆ. ಸಿಂಗ್ ಅವರಿಗೆ 50 ಸಾವಿರ ವೇತನ, ಹೆಚ್ಚುವರಿಯಾಗಿ 3000, ದಿನಭತ್ಯ 60 ಸಾವಿರ (ದಿನಕ್ಕೆ 2 ಸಾವಿರ), ಕ್ಷೇತ್ರ ಭತ್ಯೆ 45 ಸಾವಿರವಾಗಿದೆ. ಒಟ್ಟಾರೆಯಾಗಿ ತಿಂಗಳಿಗೆ 1,60,000 ವೇತನ ಸಿಗುತ್ತದೆ.
ಆರ್ ಟಿಐ ಕಾಯ್ದೆಯ ಸೆಕ್ಷನ್ 4 ರಂತೆ ಪ್ರಧಾನಿ ಕಾರ್ಯಾಲಯ ವೆಬ್ ಸೈಟ್ ನಲ್ಲಿ ಈ ಎಲ್ಲಾ ಮಾಹಿತಿಗಳನ್ನು ಪ್ರಕಟಿಸಿದೆ. ದೇಶದ ಪ್ರತಿಯೊಬ್ಬ ನಾಗರಿಕನೂ ಪ್ರಧಾನಿ ಅವರ ವಿದೇಶ ಪ್ರವಾಸ ಮತ್ತು ಅವರಿಗೆ ಸಿಗುವ ವೇತನ ಮತ್ತು ಭತ್ಯೆಗಳನ್ನು ತಿಳಿದುಕೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ಸುಮಾರು 13 ವರ್ಷಗಳ ಅವಧಿಯಲ್ಲಿ ಅತಿ ಹೆಚ್ಚು ಅಂದರೆ 8 ಬಾರಿ ಅಮೆರಿಕಕ್ಕೆ ಸಿಂಗ್ ಹೋಗಿ ಬಂದಿದ್ದಾರೆ.
ಫ್ರಾನ್ಸ್ ಹಾಗೂ ಬ್ರಿಟನ್ ಗೆ ತಲಾ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಮೇ ತಿಂಗಳಿನಲ್ಲಿ ಪ್ರಧಾನಿ ಕೈಗೊಂಡಿದ್ದ ಜಪಾನ್ ಹಾಗೂ ಥಾಯ್ಲೆಂಡ್ ಪ್ರವಾಸದ ವಿವರಗಳು ಈ ಪಟ್ಟಿಯಲ್ಲಿಲ್ಲ. ಭಾರತೀಯ ವಾಯುಪಡೆಗೆ ಸೇರಿದ ಬೋಯಿಂಗ್ ವಿಮಾನದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಾಮಾನ್ಯವಾಗಿ ವಿದೇಶಕ್ಕೆ ಹಾರುತ್ತಾರೆ.












Click it and Unblock the Notifications