ನರೇಂದ್ರ ಮೋದಿಗೆ ಸಿಕ್ಕಿತು ಅಡ್ವಾಣಿ ಆಶೀರ್ವಾದ

Narendra Modi gets Advani's blessings
ಬೆಂಗಳೂರು, ಜೂ. 9 : "ಅಡ್ವಾಣಿ ಅವರೊಂದಿಗೆ ಫೋನಿನಲ್ಲಿ ಮಾತನಾಡಿದೆ. ಅವರು ನನ್ನನ್ನು ಆಶೀರ್ವದಿಸಿದ್ದಾರೆ. ಅವರ ಆಶೀರ್ವಾದವನ್ನು ಗೌರವದಿಂದ ಸ್ವೀಕರಿಸುತ್ತೇನೆ ಮತ್ತು ಅವರಿಗೆ ಆಭಾರಿಯಾಗಿರುತ್ತೇನೆ" ಎಂದು ಬಿಜೆಪಿಯ ಲೋಕಸಭೆ ಚುನಾವಣಾ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೇಲಿನ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಮತ್ತು ಲಾಲ್ ಕೃಷ್ಣ ಅಡ್ವಾಣಿ ನಡುವೆ ಇನ್ನು ಯಾವುದೇ ಭಿನ್ನಮತವಿಲ್ಲ. ಎಲ್ಲವೂ ಸುಸೂತ್ರವಾಗಿದೆ ಎಂಬ ಸಂದೇಶವನ್ನೂ ಅವರು ಸಾರಿದ್ದಾರೆ. ಎಲ್ಲೆಡೆಯಿಂದ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳ ಸುರಿಮಳೆ ಹರಿದುಬರುತ್ತಿದೆ.

ನರೇಂದ್ರ ಮೋದಿಯವರನ್ನು ಪ್ರಧಾನಿ ಹುದ್ದೆಗೆ ವಿರೋಧಿಸುತ್ತಿರುವ ಎಲ್ ಕೆ ಅಡ್ವಾಣಿ ಅವರು ಗೋವಾದ ರಾಷ್ಟ್ರೀಯ ಕಾರ್ಯಕಾರಣಿಯಿಂದ ಹೊರಗುಳಿದಿದ್ದು ವಿವಾದಕ್ಕೆ ಕಾರಣವಾಗಿತ್ತು. ಕೆಲ ನಾಯಕರು ಬಹಿರಂಗವಾಗಿ ಮೋದಿ ಅವರನ್ನು ಅನುಮೋದಿಸುತ್ತಿದ್ದರೆ, ಕೆಲವರು ಅಂತರಂಗದಲ್ಲಿ ಅಡ್ವಾಣಿ ಅವರು ಪ್ರಧಾನಿ ಅಭ್ಯರ್ಥಿಯಾಗಲೆಂದು ಆಶಿಸುತ್ತಿದ್ದರು.

ಅಡ್ವಾಣಿ ಅವರ ಬೆಂಬಲಕ್ಕೆ ನಿಂತು, ನಾನಾ ಕಾರಣ ನೀಡಿ ಕಾರ್ಯಕಾರಣಿಯಿಂದ ಹೊರಗುಳಿದಿದ್ದ ಹಿರಿಯ ನಾಯಕ ಯಶವಂತ ಸಿನ್ಹಾ ಅವರು ಕೂಡ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಾರೆ. ನಾನು ಇಂಥವರೇ ಪ್ರಧಾನಿ ಅಭ್ಯರ್ಥಿಯಾಗಬೇಕೆಂದು ಹೇಳಿದ್ದಿಲ್ಲ. ಆದರೆ, ಅಡ್ವಾಣಿಯವರು ಅತ್ಯಂತ ಹಿರಿಯರಾಗಿದ್ದರಿಂದ, ಅವರು ನಾಯಕತ್ವ ಸ್ವೀಕರಿಸಲು ಮುಂದೆ ಬಂದರೆ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಮೋದಿ ಅವರನ್ನು ಬಹಿರಂಗವಾಗಿ ಟೀಕಿಸಿದ್ದ ಮತ್ತು ಗೋವಾ ಸಭೆಗೆ ಬರದಿರುವ ಮತ್ತೊಬ್ಬ ನಾಯಕಿ ಉಮಾ ಭಾರತಿ ಕೂಡ ನರೇಂದ್ರ ಮೋದಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯಾವುದೇ ವಿರೋಧ ವ್ಯಕ್ತಪಡಿಸಲು ನಾನು ಸಿದ್ಧವಿಲ್ಲ. ಬಿಜೆಪಿ ಸಂಸದೀಯ ಸಮಿತಿ ಏನು ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧವಾಗಿರುತ್ತೇನೆ ಎಂದು ಅವರು ಹೇಳಿಕೆ ನೀಡಿದ್ದಾರೆ.


ಬ್ಯಾನರಿನಲ್ಲಿ ಅಡ್ವಾಣಿ ಚಿತ್ರವಿಲ್ಲ : ಈ ನಡುವೆ ಅಡ್ವಾಣಿ ಕುರಿತಂತೆ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಗೋವಾದಲ್ಲಿ ಸಂಜೆ ಮೋದಿ ಅವರು ಮಾಡಬೇಕಿರುವ ಭಾಷಣ ಸಭೆಯಲ್ಲಿ ತೂಗುಹಾಕಲಾಗಿದ್ದ ಬ್ಯಾನರ್ ಒಂದರಲ್ಲಿ ಅಡ್ವಾಣಿ ಅವರ ಚಿತ್ರವೇ ಇರದಿರುವುದು ವಿವಾದಕ್ಕೆ ಕಾರಣವಾಗಿದೆ. ಅದರಲ್ಲಿ ನರೇಂದ್ರ ಮೋದಿ, ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರ ಚಿತ್ರ ಮಾತ್ರವಿದ್ದು, ಅಡ್ವಾಣಿ ಕಾಣೆಯಾಗಿದ್ದಾರೆ. ಅಡ್ವಾಣಿ ಅವರನ್ನು ಬಿಜೆಪಿ ಕಡೆಗಣಿಸಿದೆಯೆ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+