ಮೋದಿ ಯುಗ ಆರಂಭ, ಅಡ್ವಾಣಿ ಯುಗಾಂತ್ಯ

ಪಣಜಿ, ಜೂ.9: ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆ ನಂತರ ಅಧ್ಯಕ್ಷ ರಾಜನಾಥ್ ಸಿಂಗವರು ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರಾಗಿ ಘೋಷಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ನೇತೃತ್ವ ಯಾರು ವಹಿಸಬೇಕು ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿದ್ದು, ಹಿರಿಯ ನಾಯಕ ಅಡ್ವಾಣಿ ಅವರನ್ನು ಕಡೆಗಣಿಸಲಾಗಿದೆ.

ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ರಾಷ್ಟ್ರೀಯ ನಾಯಕರಾಗಿ ಘೋಷಿಸುವ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿದ್ದರ ಬಗ್ಗೆ ಎನ್ ಡಿಎ ಮಿತ್ರ ಪಕ್ಷಗಳು ಅಪಸ್ವರ ಎತ್ತಿದ್ದು ಬಿಟ್ಟರೆ ಎಲ್ಲವೂ ಮೋದಿ ಮೇನಿಯಾ ಅಗಿತ್ತು.

ರಾಜಸ್ಥಾನ, ಛತ್ತೀಸ್ ಗಢ, ಮಧ್ಯಪ್ರದೇಶ, ದೆಹಲಿಯಲ್ಲಿನ ವಿಧಾನಸಭೆ ಚುನಾವಣೆ ಗೆಲ್ಲಿಸುವ ಹೊಣೆ ಈಗ ನರೇಂದ್ರಮೋದಿ ಅವರ ನೇತೃತ್ವದ ಚುನಾವಣಾ ಪ್ರಚಾರ ಸಮಿತಿ ಮೇಲಿದೆ. ಇದಾದ ನಂತರವಷ್ಟೇ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಬಗ್ಗೆ ಮಾತನಾಡಬಹುದು.

ಗುಜರಾತಿನ ಅತ್ಯಂತ ಯಶಸ್ವಿ ಜನನಾಯಕ ನರೇಂದ್ರ ಮೋದಿ ಅವರು ದೊಡ್ಡ ಮಟ್ಟದ ಹುದ್ದೆಗೆ ಏಕೆ ಅರ್ಹರಾಗಿದ್ದಾರೆ. ಪ್ರಧಾನಿ ಹುದ್ದೆ ನಿಭಾಯಿಸಲು ಸಮರ್ಥರೇ? ಅಡ್ವಾಣಿ ಯುಗಾಂತ್ಯಕ್ಕೆ ಇದು ನಾಂದಿಯೇ? ಮುಂದಿನ ನಡೆಯೇನು? ಚಿತ್ರಸರಣಿಯಲ್ಲಿ ನೋಡಿ...

ಸಂಸದೀಯ ಮಂಡಳಿ ಸೇರಿದ್ದು

ಸಂಸದೀಯ ಮಂಡಳಿ ಸೇರಿದ್ದು

ಗುಜರಾತ್ ನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿ ನೇಮಿಸಿದ್ದು ದೊಡ್ಡ ಪ್ಲಸ್ ಪಾಯಿಂಟ್. ಇದು ರಾಷ್ಟ್ರ ರಾಜಕಾರಣಕ್ಕೆ ಮೋದಿ ಸಿದ್ಧ ಎಂಬುದರ ಮುನ್ಸೂಚನೆ ನೀಡಿತು

ಉದ್ಯಮಿಗಳ ಬೆಂಬಲ

ಉದ್ಯಮಿಗಳ ಬೆಂಬಲ

ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಾರತಕ್ಕೆ ಏಕೆ ಮುಖ್ಯ, ಮೋದಿ ಇಲ್ಲದೆ ಅಭಿವೃದ್ಧಿ ಹೇಗೆ ಕುಂಠಿತವಾಗುತ್ತದೆ ಎಂಬುದರ ಬಗ್ಗೆ ಇನ್ಫೋಸಿಸ್ ಸಂಸ್ಥೆ ಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ ಅವರು ವಿವರಣೆ ನೀಡಿ ಮೋದಿ ಅವರ ಆಡಳಿತವನ್ನು ಹಾಡಿ ಹೊಗಳಿದ್ದು ಭಾರಿ ಚರ್ಚೆಯಾಯಿತು.

ದೇಶದ ಉದ್ಯಮಿಗಳ ಜೊತೆ ಉತ್ತಮ ಬಾಂಧವ್ಯ ಉಳ್ಳ ಮೋದಿಗೆ ಎನ್ನಾರೈ ಉದ್ಯಮಿಗಳು ಕೂಡಾ ಸಾಥ್ ನೀಡಿದ್ದಾರೆ.
ಹೂಡಿಕೆದಾರರ ಅಚ್ಚುಮೆಚ್ಚು

ಹೂಡಿಕೆದಾರರ ಅಚ್ಚುಮೆಚ್ಚು

ವೈಬ್ರೈಂಟ್ ಗುಜರಾತ್ ಮೂಲಕ ದೇಶ ವಿದೇಶದ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಿ ಕ್ರಾಂತಿ ಮಾಡಿದ ಮೋದಿ ಅವರು ಉದ್ಯಮಿಗಳಿಗೂ ಅಚ್ಚುಮೆಚ್ಚು.

ಮುಖೇಶ್ ಅಂಬಾನಿ,ರತನ್ ಟಾಟಾ, ಅನಿಲ್ ಅಂಬಾನಿ ಸೇರಿದಂತೆ ಹಲವು ಪ್ರಮುಖ ಉದ್ಯಮಿಗಳು ಗುಜರಾತಿನ ಸಿಎಂ ಮೋದಿ ಅವರನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಸರ್ಕಾವಿರುವ ರಾಜ್ಯಗಳಲ್ಲೂ ಮೋದಿ ಪರ ಅಲೆ ಶುರುವಾಗಿದೆ
ಪ್ರಚಾರ ವೈಖರಿಗೆ ಜೈ

ಪ್ರಚಾರ ವೈಖರಿಗೆ ಜೈ

ಅಮೆರಿಕಾಧ್ಯಕ್ಷ ಬರಾಕ್ ಒಬಾಮರಂತೆ ನರೇಂದ್ರ ಮೋದಿ ಕೂಡಾ ಪ್ರಚಾರ ಕಲೆ, ಭಾಷಣ ಕಲೆ ಅರಿತ ನಿಪುಣ ರಾಜಕಾರಣಿ. 3ಡಿ ತಂತ್ರಜ್ಞಾನ ಬಳಸಿ ಏಕಕಾಲಕ್ಕೆ ಅನೇಕ ಕಡೆಗಳಲ್ಲಿ ಕಾಣಿಸಿಕೊಂಡ ಮೋದಿ ಪ್ರಚಾರ ವಿಧಾನ ಇನ್ನೂ ಬೇರೆ ನಾಯಕರಿಗೆ ಒಗ್ಗಿಲ್ಲ. ಜನರ ಜೊತೆ ಸದಾ ಕಾಲ ಉತ್ತಮ ಸಂವಹನ ಹೊಂದಿರುವ ಮೋದಿ ಜನಪ್ರಿಯತೆ ಎಲ್ಲಾ ರಂಗಕ್ಕೂ ಹಬ್ಬಿದೆ.

ಪಕ್ಷ ಸಂಘಟನೆಗೆ ಬೇಕು

ಪಕ್ಷ ಸಂಘಟನೆಗೆ ಬೇಕು

ಬಿಜೆಪಿಯಿಂದ ಹೊರಬಿದ್ದಿರುವ ರಾಮ್ ಜೇಠ್ಮಲಾನಿ, ಶತ್ರುಘ್ನ ಸಿನ್ಹಾ ಹಾಗೂ ಯಶವಂತ್ ಸಿನ್ಹಾ ಅವರು ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಲು ಸೂಕ್ತ ಎಂದು ಅನೇಕ ಬಾರಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ದೆಹಲಿಯಲ್ಲಿ ಈ ಹಿಂದೆ ನಡೆದ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲೂ ಮೋದಿ ಪರ ಹಲವು ನಾಯಕರು ನಿಂತಿದ್ದರು. ಅಡ್ವಾಣಿ, ಉಮಾಭಾರತಿ ಹೊರತು ಪಡಿಸಿ ಎಲ್ಲರೂ ಮೋದಿ ನಾಯಕತ್ವವನ್ನು ಒಪ್ಪಿದ್ದಾರೆ.

ಎನ್ ಡಿಎ ಒಪ್ಪುವುದೇ?

ಎನ್ ಡಿಎ ಒಪ್ಪುವುದೇ?

ಎನ್ ಡಿಎ ಮುಖ್ಯ ಮೈತ್ರಿ ಪಕ್ಷಗಳು ಮೋದಿ ಪ್ರಧಾನಿ ಹುದ್ದೆಗೆ ಬೇಡ ಎನ್ನಲು ಕಾರಣವಾಗಿದ್ದ ಗೋಧ್ರಾ ಹತ್ಯಾಕಾಂಡ ಈಗ ಬರೀ ನೆನಪಾಗಿದೆ. ಆದರೆ, ಇತ್ತೀಚೆಗೆ ಗುಜರಾತಿನಲ್ಲಿ ಮುಸ್ಲಿಂ ಬಾಂಧವರು ಮೋದಿ ಪರ ತೋರಿಸಿರುವ ಒಲವು ಮೈತ್ರಿಪಕ್ಷಗಳ ಸದ್ದಡಗಿಸಿದೆ.

ಸ್ಥಳೀಯ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಶೇ 90 ರಷ್ಟು ಮುಸ್ಲಿಂ ಜನಾಂಗ ಹೊಂದಿರುವ ದ್ವಾರಕ ಜಿಲ್ಲೆಯಲ್ಲಿ 27 ಸೀಟು ಗೆದ್ದ ಮೋದಿ ಬಗ್ಗೆ ಎನ್ ಡಿಎ ಮಿತ್ರ ಪಕ್ಷಗಳು ಕೂಡಾ ಮೃದು ಧೋರಣೆ ತಾಳುವಂತೆ ಮಾಡಿದೆ.
ಜೆಡಿಯು ಭಿನ್ನರಾಗ

ಜೆಡಿಯು ಭಿನ್ನರಾಗ

ಮೋದಿ ಅವರು ಬಿಜೆಪಿ ಪ್ರಚಾರ ಸಮಿತಿಗೆ ಮುಖ್ಯಸ್ಥರಾಗಿದ್ದಾರೆ ಅವರಿಗೆ ಶುಭ ಹಾರೈಕೆಗಳು. ಇದಕ್ಕೂ ಎನ್ ಡಿಎಗೂ ಏನು ಸಂಬಂಧವಿಲ್ಲ. ಪ್ರಧಾನಿ ಪಟ್ಟ ಎನ್ ಡಿಎ ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಹಾಗೂ ಇನ್ನೂ ಕಾಲ ಕೂಡಾ ಬಂದಿಲ್ಲ ಎಂದು ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯು ಮುಖ್ಯಸ್ಥ ದೇವೇಶ್ ಚಂದ್ರ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.

ಎಲ್ಲಾ ಜನಾಂಗದ ಬೆಂಬಲ

ಎಲ್ಲಾ ಜನಾಂಗದ ಬೆಂಬಲ

ಮೋದಿ ಮುಸ್ಲಿಂ ವಿರೋಧಿ ನಾಯಕ ಎಂದು ಬಿಂಬಿಸಲಾಗಿತ್ತು. ಆದರೆ, ಇತ್ತೀಚೆಗೆ ಜಮಾಯತ್ ಉಲಮಾ-ಇ-ಹಿಂದ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮ್ಮದ್ ಮದನಿ ಅವರು ಬಹಿರಂಗ ಸಭೆಯಲ್ಲಿ ಮೋದಿ ಪರ ಹೇಳಿಕೆ ನೀಡಿದರು. ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಗುಜರಾತಿನಲ್ಲಿ ಮುಸ್ಲಿಮರು ಹೆಚ್ಚು ಸುರಕ್ಷಿತ ಹಾಗೂ ಸಂತಸದಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ಹೇಳಿದ್ದರು.

ಮೊದಲ ಹೆಜ್ಜೆ ಶುರು

ಮೊದಲ ಹೆಜ್ಜೆ ಶುರು

ಮೋದಿಯನ್ನು ಗುಜರಾತಿಗೆ ಸೀಮಿತಗೊಳಿಸದೆ ರಾಷ್ಟ್ರೀಯ ನಾಯಕರನ್ನಾಗಿಸಲು ಇದ್ದ ಇನ್ನೊಂದು ಕೊರತೆ ಈಗ ನಿವಾರಣೆಯಾಗಿದೆ. ಮಹಾರಾಷ್ಟ್ರ, ಪಶ್ಚಿಮ ಬಂಗಾಳದಲ್ಲೂ ಮೋದಿ ಅಲೆ ಶುರುವಾಗಿದೆ.

ಮಹಾರಾಷ್ಟ್ರ ನವನಿರ್ಮಾಣ್ ಸೇನಾ(ಎಂಎನ್ ಎಸ್) ನಾಯಕ ರಾಜ್ ಠಾಕ್ರೆ ಅವರು ಮೋದಿ ಬೆನ್ನ ಹಿಂದೆ ನಿಂತಿದ್ದಾರೆ. ಎಂಎನ್ ಎಸ್ ಮೋದಿ ಹಾದಿಯಲ್ಲಿ ಸಾಗಿದೆ. ಮೋದಿ ದೇಶವನ್ನು ಮುನ್ನಡೆಸಲು ಸಿದ್ಧವಾಗಿದ್ದಾರೆ ಇಂದು ಅಧಿಕೃತವಾಗಿ ಬಿಜೆಪಿ ಘೋಷಣೆಯಾಗಿದೆ
ದೇಶದ ಏಕತೆ ಮಂತ್ರ ಕಾರಣ

ದೇಶದ ಏಕತೆ ಮಂತ್ರ ಕಾರಣ

ಸರ್ದಾರ್ ಪಟೇಲ್ ಅವರ ಕನಸನ್ನು ನನಸು ಮಾಡಬೇಕು. ಕಾಂಗ್ರೆಸ್ ಮುಕ್ತ ಭ್ರಷ್ಟಾಚಾರ ರಹಿತ ಭಾರತ ನಿರ್ಮಾಣ ಮಾಡಲು ನನಗೆ ಸಹಾಯ ಮಾಡಿ ಎಂದು ಮೋದಿ ಹೇಳಿದ್ದಾರೆ.

ಹಿರಿಯ ನಾಯಕರು ನನ್ನ ಬೆನ್ನ ಹಿಂದೆ ನಿಂತಿದ್ದಾರೆ. ರಾಜನಾಥ್ ಸಿಂಗ್ ಹಾಗೂ ಎಲ್ ಕೆ ಅಡ್ವಾಣಿ ಅವರು ನನ್ನನ್ನು ಹರಸಿದ್ದಾರೆ ಎಂದು ಮೋದಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+