ಮೋದಿಗೆ ದೊಡ್ಡ ಪಟ್ಟ: ಯಾರು ಏನು ಹೇಳಿದರು?
ಪಣಜಿ, ಜೂ.9:: ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡಿರುವುದು ಬಿಜೆಪಿ ತೆಗೆದುಕೊಂಡಿರುವ ಉತ್ತಮ ನಿರ್ಧಾರ ಎಂದು ಕರ್ನಾಟಕ ಜನತಾ ಪಕ್ಷದ(ಕೆಜೆಪಿ) ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭಾನುವಾರ ಹೇಳಿದ್ದಾರೆ. ಜೆಡಿಯುನಿಂದ ಹಿಡಿದು ಕಾಂಗ್ರೆಸ್ ವಕ್ತಾರರ ತನಕ, ಫೇಸ್ ಬುಕ್ ಫ್ಯಾನ್ ಪೇಜ್ ನಿಂದ ಹಿಡಿದು ಟ್ವಿಟ್ಟರ್ ತನಕ 'ನಮೋ' ಮೇನಿಯಾ ಆರಂಭಗೊಂಡಿದೆ.
ಪಣಜಿಯಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿಗೆ ಬಿಜೆಪಿಯ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಘೋಷಣೆಯಾಗುತ್ತಿದಂತೆ, ಪ್ರತಿಕ್ರಿಯೆಗಳ ಮಹಾಪೂರ ಹರಿದು ಬಂದಿದ್ದು ಯಾರು ಏನು ಹೇಳಿದರು ಎಂಬುದನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ. ರಾಜಕೀಯ ಮುಖಂಡರ ಹೇಳಿಕೆಗಳು, ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಮೋದಿ ನೀಡಿದ ತಕ್ಷಣ ಟ್ವೀಟ್ ಪ್ರತಿಕ್ರಿಯೆಗಳು ಕೂಡಾ ನಿಮ್ಮ ಮುಂದಿದೆ.
Bjp sources to CNN IBN: Modi to be made campaign committee chief, but no decision on PM face for now. #ibnews
— Rajdeep Sardesai (@sardesairajdeep) June 9, 2013
Most imp message of today: a transition from Vajpayee-Advani era to the Modi era. It could be a new BJP
— Sagarika Ghose (@sagarikaghose) June 9, 2013
Spoke to Advani ji on the phone. He gave me his blessings. Honoured and extremely grateful to receive his blessings.
— Narendra Modi (@narendramodi) June 9, 2013
#NarendraModi beats LK Advani, becomes BJP election campaign chief j.mp/13oDPTV via @oneidia
— karnataka.com (@karnatakacom) June 9, 2013
India is a great country. There SHOULD NOT be a rift between LKA and NaMo. There CANNOT be a rift between Krishna and Arjun
— Kiran Bedi (@thekiranbedi) June 9, 2013

ಕೆಜೆಪಿ ಅಧ್ಯಕ್ಷ ಯಡಿಯೂರಪ್ಪ
ಮೋದಿ ಅವರಿಗೆ ಈ ಸ್ಥಾನಕ್ಕೆ ತಕ್ಕ ಹಾಗೂ ಯೋಗ್ಯ ವ್ಯಕ್ತಿಯಾಗಿದ್ದು. ತಡವಾದರು ಬಿಜೆಪಿ ಉತ್ತಮ ನಿರ್ಧಾರ ಕೈಗೊಂಡಿದೆ.
ನರೇಂದ್ರ ಮೋದಿ ಅವರು ತಮಗೆ ನೀಡಿರುವ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಲ್ಲಿದ್ದಾರೆ. ಮೋದಿ ಅವರು ಕೈಗೊಳ್ಳುವ ಕಾರ್ಯಗಳು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ.
ಕರ್ನಾಟಕ ಸಿಎಂ ಸಿದ್ದರಾಮಯ್ಯ
ನರೇಂದ್ರ ಮೋದಿ ಅವರಿಂದ ಯಾವುದೇ ಪವಾಡ ನಡೆಯುವುದಿಲ್ಲ. ಮೋದಿ ಅವರು ಆರೆಸ್ಸೆಸ್ ಹಿನ್ನೆಲೆಯುಳ್ಳವರು ಕೋಮುವಾದಿ. ಮೋದಿ ಅವರನ್ನು ಲೋಕಸಭೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿರುವುದು ಕಾಂಗ್ರೆಸ್ ಗೆ ಲಾಭಕರ ಎಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸ್ಮೃತಿ ಇರಾನಿ, ಬಿಜೆಪಿ
2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅಧಿಕಾರಕ್ಕೆ ಬರಲಿದೆ ಎನ್ನುವುದಕ್ಕೆ ಇದು ನಾಂದಿಯಾಗಿದೆ. ಮೋದಿ ಅವರ ಮಾರ್ಗದರ್ಶನದಲ್ಲಿ ಮಹಿಳೆ, ಮಕ್ಕಳು ಹಾಗೂ ದೇಶ ಸುರಕ್ಷಿತವಾಗಿರಲಿದೆ ಎಂಬ ನಂಬಿಕೆ ನನಗಿದೆ.

ದೇವೇಶ್ ಚಂದ್ರ ಠಾಕೂರ್, ಜೆಡಿಯು
ಎನ್ ಡಿಎ ಮಿತ್ರ ಪಕ್ಷಗಳಾದ ಶಿವಸೇನಾ, ಅಕಾಲಿ ದಳ ಮೋದಿಗೆ ಬೆಂಬಲ ವ್ಯಕ್ತಪಡಿಸಿದರೂ ಜೆಡಿಯು ಭಿನ್ನರಾಗ ಹಾಡಿದೆ.
ಮೋದಿ ಅವರು ಬಿಜೆಪಿ ಪ್ರಚಾರ ಸಮಿತಿಗೆ ಮುಖ್ಯಸ್ಥರಾಗಿದ್ದಾರೆ ಅವರಿಗೆ ಶುಭ ಹಾರೈಕೆಗಳು. ಇದಕ್ಕೂ ಎನ್ ಡಿಎಗೂ ಏನು ಸಂಬಂಧವಿಲ್ಲ. ಪ್ರಧಾನಿ ಪಟ್ಟ ಎನ್ ಡಿಎ ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಹಾಗೂ ಇನ್ನೂ ಕಾಲ ಕೂಡಾ ಬಂದಿಲ್ಲ ಎಂದು ನಿತೀಶ್ ಕುಮಾರ್ ಅವರ ನೇತೃತ್ವದ ಜೆಡಿಯು ಮುಖ್ಯಸ್ಥ ದೇವೇಶ್ ಚಂದ್ರ ಠಾಕೂರ್ ಪ್ರತಿಕ್ರಿಯಿಸಿದ್ದಾರೆ.

ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ
ಮೋದಿ ಅವರ ಆಯ್ಕೆ ಬಗ್ಗೆ ಅಪಸ್ವರ ಬೇಡ. ಇದು ಸರ್ವಾನುಮತದಿಂದ ಆದ ಆಯ್ಕೆ. 2014ರ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚಿನ ಯಶಸ್ಸ್ತು ಗಳಿಸುವ ನಿರೀಕ್ಷೆ ಇದೆ ಇದಕ್ಕಾಗಿ ನಾವು ಮೋದಿ ಅವರ ಸಾರಥ್ಯದಲ್ಲಿ ಚುನಾವಣೆ ಎದುರಿಸೋಣ

ಗೋವಾ ಸಿಎಂ ಮನೋಹರ್ ಪಾರಿಕ್ಕಾರ್
ಇದು ಬಿಜೆಪಿ ಧನಾತ್ಮಕ ಚಿಂತನೆಯ ಫಲ. ಮೋದಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆ ಐದು ನಿಮಿಷಗಳ ಕಾಲ ಎಡಬಿಡದೆ ಚಪ್ಪಾಳೆ ತಟ್ಟಲಾಯಿತು. ಇದು ಎಲ್ಲರ ಮೆಚ್ಚುಗೆಯ ಆಯ್ಕೆ ಎಂಬುದರ ಸಂಕೇತ. ಪ್ರಧಾನಿ ಅಭ್ಯರ್ಥಿ ಆಯ್ಕೆಯನ್ನು ಸಂಸದರು, ಎನ್ ಡಿಎ ಮಿತ್ರ ಪಕ್ಷಗಳು ಆಯ್ಕೆ ಮಾಡುತ್ತಾರೆ ಅವಸರ ಬೇಡ ಎಂದರು.

ಸಂಜಯ್ ರೌತ್, ಶಿವಸೇನಾ
ಎನ್ ಡಿಎ ಮಿತ್ರಪಕ್ಷವಾಗಿ ನಾವು ಬಿಜೆಪಿ ಕಾರ್ಯಕಾರಿ ಸಭೆಯಲ್ಲಿ ತೆಗೆದುಕೊಂಡು ನಿರ್ಣಯವನ್ನು ಸ್ವಾಗತಿಸುತ್ತೇವೆ. ಪ್ರಚಾರ ಸಮಿತಿಗೆ ಮೋದಿ ಆಯ್ಕೆ ಸೂಕ್ತವಾಗಿದೆ. ಎನ್ ಡಿಎಗೆ ಎಲ್ಲಾ ರೀತಿ ಬೆಂಬಲ ನೀಡುತ್ತೇವೆ

ರಾಜೀವ್ ಶುಕ್ಲಾ ,ಕಾಂಗ್ರೆಸ್
ಕಾಂಗ್ರೆಸ್ ಗೆ ಮೋದಿ ಕಂಡರೆ ಭಯ ಇಲ್ಲ. ಬಿಜೆಪಿ ಬಗ್ಗೆ ಮರುಕ ಹುಟ್ಟುತ್ತಿದೆ. ಪ್ರಚಾರ ಸಮಿತಿ ಮುಖ್ಯಸ್ಥನ ಆಯ್ಕೆಗೆ ಇಷ್ಟು ಗೊಂದಲವಾದರೆ ಇವರು ದೇಶ ಮುನ್ನಡೆಸಲು ಹೇಗೆ ಸಮರ್ಥರಾಗುತ್ತಾರೆ ಎಂಬ ಕುತೂಹಲವೂ ಹೆಚ್ಚಿದೆ.

ನಿತಿನ್ ಗಡ್ಕರಿ, ಬಿಜೆಪಿ ಮಾಜಿ ಅಧ್ಯಕ್ಷ
ನರೇಂದ್ರ ಮೋದಿ ಅವರಿಗೆ ಅಡ್ವಾಣಿಜೀ ಹಾರೈಕೆ ಸಿಕ್ಕಿದೆ ಎಂದ ಮೇಲೆ ಯಾವುದೇ ತೊಡಕು ಗಳಿಲ್ಲ. ಮಾಧ್ಯಮಗಳಿಂದ ಗೊಂದಲ ಸೃಷ್ಟಿಯಾಗಿದೆ. ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದ್ದು, ರಾಜನಾಥ್ ಅವರು ಅಡ್ವಾಣಿ ಅವರ ಜೊತೆ ಮಾತನಾಡಿ ಒಪ್ಪಿಗೆ ಪಡೆದಿದ್ದಾರೆ.
|
ವಿಜಯ್ ಗೋಯಲ್, ಬಿಜೆಪಿ
ಪಣಜಿಯಲ್ಲಿ ನರೇಂದ್ರಮೋದಿ ಅವರನ್ನು ಅಭಿನಂದಿಸಿ ವಿಜಯ್ ಗೋಯಲ್ ಅವರು ಚಿತ್ರ ಸಮೇತ ಟ್ವೀಟ್ ಮಾಡಿದರು.
|
ಬಿಜೆಪಿ ಶಾಸಕ ಕೃಷ್ಣಾರೆಡ್ಡಿ
ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷ ಮೋದಿ ಅವರೊಡನೆ ಮಾತುಕತೆ ನಡೆಸಿದ ಖುಷಿಯಲ್ಲಿ ಎಂಎಲ್ ಎ ಕೃಷ್ಣರೆಡ್ಡಿ ಟ್ವೀಟ್
|
ಬಿಜೆಪಿ ವಕ್ತಾರರಿಂದ
ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಅವರು ಮೋದಿ ಅವರ ಆಯ್ಕೆ ಬಗ್ಗೆ ತಕ್ಷಣವೇ ಟ್ವೀಟ್ ಮಾಡಿದ
|
ಪ್ರಭು ಚಾವ್ಲಾ
NOT 4 PM ಎಂದು ಪನ್ ಮಾಡಿದ ಪ್ರಭು ಚಾವ್ಲಾ ಅವರ ಟ್ವೀಟ್
|
ರಾಜದೀಪ್ ಸರ್ದೇಸಾಯಿ
ರಾಜದೀಪ್ ಸರ್ದೇಸಾಯಿ ಮತ್ತೊಂದು ಕುತೂಹಲಕಾರಿ ಟ್ವೀಟ್
|
ಬರ್ಖಾದತ್, ಎನ್ ಡಿಟಿವಿ
ಮೋದಿ ಆಯ್ಕೆ ಬಗ್ಗೆ ಬರ್ಖಾದತ್ ಹೇಳಿದ್ದಿಷ್ಟು












Click it and Unblock the Notifications