ಮುಖ್ಯಮಂತ್ರಿಯಾಗಿ ಸಿದ್ದು ಅವಧಿ ಕೇವಲ ಒಂದೇ ವರ್ಷ!

ಅದಕ್ಕಾಗಿಯೇ ಇರಬೇಕು ಸಿದ್ದರಾಮಯ್ಯ ಬಹಳ ಫಾಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲೇವಡಿ ಮಾಡಿದ್ದಾರೆ.
ಎರಡೆರಡು ಬಾರಿ ಕೇಂದ್ರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರನ್ನು ಭೇಟಿ ಮಾಡಿದರೂ ಅಕ್ಕಿ ಸಿಗುತ್ತಿಲ್ಲ. ಕೇಂದ್ರ ಸರಕಾರದಿಂದ ಸ್ಪಷ್ಟ ಭರವಸೆ ಸಿಕ್ಕ ನಂತರ ಸಿದ್ದರಾಮಯ್ಯ ಒಂದು ರೂಪಾಯಿಗೆ ಅಕ್ಕಿ ಸ್ಕೀಂ ಅನ್ನು ಘೋಷಿಸಬೇಕಿತ್ತು.
ಏಕ ವ್ಯಕ್ತಿಯಾಗಿ, ತುರಾತುರಿಯಲ್ಲಿ ನಿರ್ಧಾರ ತೆಗೆದುಕೊಂಡರೆ ಎಡವಟ್ಟಾಗುತ್ತದೆ. ಜುಲೈ ಒಂದರಿಂದಲೂ ಈ ಅಕ್ಕಿ ಸ್ಕೀಂ ಕಾರ್ಯಗತವಾಗುವುದು ಅನುಮಾನ ಎಂದು ಶೆಟ್ಟರ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಶೆಟ್ಟರ್, ಯಶಸ್ವಿನಿ ಯೋಜನೆಯನ್ನು ಸ್ಥಗಿತಗೊಳಿಸಲು ಸಿದ್ದು ಸರಕಾರ ನಿರ್ಧರಿಸಿರುವುದು ನೋವಿನ ಸಂಗತಿ.
ಮೊರಾರ್ಜಿ ದೇಸಾಯಿ ಶಾಲೆ ಸ್ಥಾಪನೆ ವಿಚಾರದಲ್ಲೂ ಸರಕಾರ ರಾಜಕೀಯ ಮಾಡುತ್ತಿದೆ. ಇದು ಕಾಂಗ್ರೆಸ್ ಸರಕಾರಕ್ಕೆ ಶೋಭೆ ತರುವ ವಿಚಾರವಲ್ಲ ಎಂದು ಶೆಟ್ಟರ್ ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications