ಚಿತ್ರಗಳಲ್ಲಿ: ಹೇಮಾವತಿ ಮನೆಗೆ ಸಚಿವ ಖಾದರ್

ಬೆಂಗಳೂರು, ಜೂ.4: ಕರ್ನಾಟಕದ ಆರೋಗ್ಯ ಸಚಿವ ಯುಟಿ ಖಾದರ್ ಅವರು 35 ವರ್ಷ ವಯಸ್ಸಿನ ಹೇಮಾವತಿ ಅವರ ಪೋಷಕರ ಜೊತೆ ಮಾತುಕತೆ ನಡೆಸಿದ್ದಾರೆ.ಹೇಮಾವತಿಯನ್ನು ಕಳೆದ 4 ವರ್ಷಗಳಿಂದ ಒಂದೇ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಸದ್ಯಕ್ಕೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಟೆನಿಸ್ ಅಂಗಳದ ಅನಭಿಷಕ್ತ ದೊರೆ ಸ್ವಿಸ್ ನ ರೋಜರ್ ಫೆಡರರ್ ಗೆ ಮತ್ತೊಮ್ಮೆ ಫ್ರೆಂಚ್ ಓಪನ್ ಟೂರ್ನಿ ಕೈ ಕೊಟ್ಟಿದೆ. ಫ್ರಾನ್ಸಿನ ಜೊ ವೈಲ್ ಫ್ರೆಡ್ ತ್ಸೊಂಗಾ ವಿರುದ್ಧ ಸೋತು ಸುಣ್ಣವಾಗಿ ಹೊರ ನಡೆದಿದ್ದಾರೆ.

ಮಂಗಳವಾರ ನಡೆದ ಕ್ವಾಟರ್ ಫೈನಲ್ ಪಂದ್ಯದಲ್ಲಿ ತ್ಸೊಂಗಾ 7-5, 6-3, 6-3 ನೇರ ಸೆಟ್ ಗಳಿಂದ ರೋಜರ್ ಫೆಡರರ್ ಅವರನ್ನು ಸೋಲಿಸಿದ್ದಾರೆ. ಉಳಿದಂತೆ ರಷ್ಯಾದ ಸ್ವೆಟ್ಲಾನಾ ಕುಜ್ನೆತ್ಸೊವಾ ಅವರನ್ನು ಅಮೆರಿಕದ ಸೆರೆನಾ ವಿಲಿಯಮ್ಸ್ 6-1,3-6,6-3 ರಲ್ಲಿ ಸೋಲಿಸಿದರು. ರೋಲ್ಯಾಂಡ್ ಗರಾಸ್ ಸ್ಟೇಡಿಯಂನಿಂದ ನೇರವಾಗಿ ನಿಮಗಾಗಿ ಚಿತ್ರಗಳು ಇಲ್ಲಿದೆ.

ಉಳಿದಂತೆ, ಮಿಸ್ ಕೊರಿಯಾ ಸೌಂದರ್ಯ ಸ್ಪರ್ಧೆ, ಬೆಂಗಳೂರಿನಲ್ಲಿ ಹಿಂಸೆಗೊಳಗಾದ ಯುವತಿ ಹೇಮಾವತಿ ಚಿತ್ರ, ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಸಿಬಿಐ ಮುಂದೆ ಕೂತಾಗ ಕಂಡಿದ್ದು ಹೀಗೆ, ಆಗ್ರಾದ ಮಹಿಳೆ ನೀರು ಹೊತ್ತು ಸಾಗುವ ಚಿತ್ರ, ಕಾರ್ಡಿಫ್ ನಲ್ಲಿ ಧೋನಿ ಹುಡುಗರ ಸಂಭ್ರಮ ಎಲ್ಲವೂ ಇಂದಿನ ಪ್ಯಾಕೇಜಿನಲ್ಲಿದೆ

ಗೆಲುವಿನ ಖುಷಿಯಲ್ಲಿ ತ್ಸೊಂಗಾ

ಗೆಲುವಿನ ಖುಷಿಯಲ್ಲಿ ತ್ಸೊಂಗಾ

ಪ್ಯಾರೀಸ್ : ಮಾಜಿ ನಂ.1 ಆಟಗಾರ ರೋಜರ್ ಫೆಡರರ್ ಸೋಲಿಸಿದ ಸಂಭ್ರಮದಲ್ಲಿ ತ್ಸೊಂಗಾ

ಛೇ ಕೆಂಪು ಮಣ್ಣು ಆಗಿ ಬರಲ್ಲ

ಛೇ ಕೆಂಪು ಮಣ್ಣು ಆಗಿ ಬರಲ್ಲ

ಪ್ಯಾರೀಸ್ : ಕ್ವಾಟರ್ ಫೈನಲ್ ನಲ್ಲಿ ಸೋತ ರೋಜರ್ ಫೆಡರರ್

 ಸೆರೆನಾ ವಿಲಿಯಮ್ಸ್ ಅಬ್ಬರ

ಸೆರೆನಾ ವಿಲಿಯಮ್ಸ್ ಅಬ್ಬರ

ಪ್ಯಾರೀಸ್ : ಅಮೆರಿಕದ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ಟೆನಿಸ್ ಕ್ವಾಟರ್ ಫೈನಲ್ಸ್ ನಲ್ಲಿ ರಷ್ಯಾದ ಕುರ್ನೆ ತ್ಸೊವಾ ಅವರನ್ನು ಮೂರು ಸೆಟ್ ಗಳಲ್ಲಿ 6-1, 3-6, 6-3 ಸೋಲಿಸಿದ ಸಂಭ್ರಮದಲ್ಲಿ ಅಬ್ಬರಿಸಿದ್ದು ಹೀಗೆ

ಗೆಲುವಿನ ಖುಷಿಯಲ್ಲಿ ಸೆರೆನಾ

ಗೆಲುವಿನ ಖುಷಿಯಲ್ಲಿ ಸೆರೆನಾ

ಪ್ಯಾರೀಸ್ : ಫ್ರೆಂಚ್ ಓಪನ್ ಟೆನಿಸ್ ಕ್ವಾಟರ್ ಫೈನಲ್ಸ್ ನಲ್ಲಿ ಸೆರೆನಾ ವಿಲಿಯಮ್ಸ್ ಹೊಡೆತದ ಭಂಗಿ

ಸೋತ ರಷ್ಯಾದ ಆಟಗಾರ್ತಿ

ಸೋತ ರಷ್ಯಾದ ಆಟಗಾರ್ತಿ

ಪ್ಯಾರೀಸ್: ಸೋಲಿನ ಕಹಿಯುಂಡ ರಷ್ಯಾದ ಕುಜ್ನೆ ತ್ಸೊವಾ

ಮಲ್ಲೇಶ್ವರಂನ ಕೋಣೆಯಲ್ಲಿ ಬಂದಿ

ಮಲ್ಲೇಶ್ವರಂನ ಕೋಣೆಯಲ್ಲಿ ಬಂದಿ

ಬೆಂಗಳೂರು: ಹೇಮಾವತಿಯನ್ನು ಕಳೆದ 4 ವರ್ಷಗಳಿಂದ ಒಂದೇ ಕೋಣೆಯಲ್ಲಿ ಕೂಡಿ ಹಾಕಲಾಗಿತ್ತು. ಸದ್ಯಕ್ಕೆ ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

ಸಚಿವ ಯುಟಿ ಖಾದರ್ ಭೇಟಿ

ಸಚಿವ ಯುಟಿ ಖಾದರ್ ಭೇಟಿ

ಕರ್ನಾಟಕದ ಆರೋಗ್ಯ ಸಚಿವ ಯುಟಿ ಖಾದರ್ ಅವರು 35 ವರ್ಷ ವಯಸ್ಸಿನ ಹೇಮಾವತಿ ಅವರ ಪೋಷಕರ ಜೊತೆ ಮಾತುಕತೆ ನಡೆಸಿದ್ದಾರೆ.

ಪಿ.ಕೆ ಬನ್ಸಾಲ್ ವಿಚಾರಣೆ

ಪಿ.ಕೆ ಬನ್ಸಾಲ್ ವಿಚಾರಣೆ

ನವದೆಹಲಿ: ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಅವರು ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ವಿಚಾರಣೆಗೊಳಪಟ್ಟರು.

ಕಾರ್ಡಿಫ್ ನಿಂದ ಬಂದ ಚಿತ್ರ

ಕಾರ್ಡಿಫ್ ನಿಂದ ಬಂದ ಚಿತ್ರ

ಕಾರ್ಡಿಫ್: ಶಿಖರ್ ಧವನ್ ಅವರ ಕಿಚಾಯಿಸುತ್ತಿರುವ ಸಹ ಆಟಗಾರರು. ಆಸ್ಟ್ರೇಲಿಯಾ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯವನ್ನು ಧೋನಿ ಪಡೆ ಭರ್ಜರಿಯಾಗಿ ಗೆದ್ದುಕೊಂಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧ ಜೂ.6 ರಂದು ಮೊದಲ ಪಂದ್ಯವನ್ನು ಆಡಲಿದೆ.

ನೀರು ಹೊತ್ತ ಮಹಿಳೆ

ನೀರು ಹೊತ್ತ ಮಹಿಳೆ

ಆಗ್ರಾ: ಫತೆಫುರ್ ಸಿಕ್ರಿಯಲಿ ನೀರಿನ ಬವಣೆ ಶುರುವಾಗಿದೆ. ಮಹಿಳೆಯರು ದೂರದಿಂದ ನೀರು ಹೊತ್ತು ಸಾಗುತ್ತಿದ್ದಾರೆ.

ಮಿಸ್ ಕೊರಿಯಾ ಸ್ಪರ್ಧೆ

ಮಿಸ್ ಕೊರಿಯಾ ಸ್ಪರ್ಧೆ

ಸಿಯೋಲ್ : 21 ವರ್ಷದ ಕಾಲೇಜು ವಿದ್ಯಾರ್ಥಿ ಯೂ ಯೆ ಬಿನ್(ಮಧ್ಯ) 2013ರ ಮಿಸ್ ಕೊರಿಯಾ ಪ್ರಶಸ್ತಿ ಕಿರೀಟ ಮುಡಿಗೇರಿಸಿಕೊಂಡಿದಾರೆ. ಭುವನ ಸುಂದರಿ ಸ್ಪರ್ಧೆಯಲ್ಲಿ ದಕ್ಷಿಣ ಕೊರಿಯಾವನ್ನು ಈಕೆ ಪ್ರತಿನಿಧಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+