ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಟಾಲಮ್ಮದೇವಿ ಗ್ರಾಮೋತ್ಸವ ಕಂಡವರೇ ಧನ್ಯರು

By ಮಲೆನಾಡಿಗ
|
Google Oneindia Kannada News

ಬೆಂಗಳೂರು, ಜೂ.5: ಬೆಂಗಳೂರಿನ ಕನಕನ ಪಾಳ್ಯದ ದೇವಾಲಯಗಳ ಸಮುಚ್ಚಯದ ಬಳಿ ಕನಕನ ಪಾಳ್ಯ, ಸಿದ್ದಾಪುರ, ಯಡಿಯೂರು, ಬೈರಸಂದ್ರ, ನಾಗಸಂದ್ರ ಬಡಾವಣೆಗಳ ಗ್ರಾಮ ದೇವತೆಗಳ ಉತ್ಸವ ಅದ್ದೂರಿಯಾಗಿ ಬುಧವಾರ (ಜೂ.5) ಸಂಪನ್ನವಾಯಿತು.

ವಿವಿಧ ಬಡಾವಣೆಗಳಿಂದ ಸುಮಂಗಲಿಯರು ಪಟಾಲಮ್ಮ ದೇವಿಯ ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಪಲ್ಲಕ್ಕಿ ಹೊತ್ತು ಸಾಗಿ ಪಟಾಲಮ್ಮ ದೇಗುಲದ ಬಳಿ ಸೇರಿದರು.

ಸೌತ್ ಎಂಡ್ ವೃತ್ತದ ಬಳಿ ಇರುವ ಅನೆಬಂಡೆಯ ಮುಂಭಾಗದ ಪುರಾತನ ದೇವಾಲಯ ಪಟಾಲಮ್ಮ ದೇವಿಯ ಮೂಲ ದೇವಸ್ಥಾನ. ನೆಲಮಟ್ಟದಿಂದ ಕೆಳಗಿರುವ ಉದ್ಭವ ಮೂರ್ತಿಗಳಾದ ಮಹಾಕಾಳಿ, ಲಕ್ಷ್ಮಿ ಹಾಗೂ ಸರಸ್ವತಿ ದೇವತೆಗಳ ರೂಪವೇ ಪಟಾಲಮ್ಮ(ಪಾತಾಳದಮ್ಮ) ಎಂಬ ಪ್ರತೀತಿ ಇದೆ.

ಕನಕಪಾಳ್ಯ, ಸಿದ್ದಾಪುರ, ಯಡಿಯೂರು, ಭೈರಸಂದ್ರ ಹಾಗೂ ನಾಗಸಂದ್ರ ಎಂಬ ಐದು ಗ್ರಾಮಗಳ ಜನತೆ ಪ್ರತಿ ಮೂರು ವರ್ಷಕ್ಕೊಮ್ಮೆ ಪಟಾಲಮ್ಮ ದೇವಿಯ ಉತ್ಸವವನ್ನು ಮೂರು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ. ಅದರಂತೆ ಈ ವರ್ಷ ಕೂಡಾ ಭಯ ಭಕ್ತಿಗಳಿಂದ ಆಚರಣೆ ಎಂದು ಪಟಾಲಮ್ಮ ದೇವಿ ಟ್ರಸ್ಟ್ ನ ಕೆ.ಎಂ. ನಾಗರಾಜ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.ಹೇಗಿತ್ತು ಉತ್ಸವ ಮುಂದೆ ನೋಡಿ...

ಹೇಗಿತ್ತು ಉತ್ಸವ

ಹೇಗಿತ್ತು ಉತ್ಸವ

ಸೋಮವಾರ ಸಂಜೆ ಗಣಪತಿ, ಆಂಜನೇಯ ಹಾಗೂ ಈಶ್ವರನಿಗೆ ಬೆಲ್ಲದ ಆರತಿಯ ಮೂಲಕ ಊರ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಮಂಗಳವಾರ (ಮೇ 25) ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಸುಮಂಗಲಿಯರು ಪವಿತ್ರ ಗಂಗೆಯನ್ನು ಕೊಡದಲ್ಲಿ ಹೊತ್ತು ತಂದರು.

ಆರತಿ ಮಹೋತ್ಸವ

ಆರತಿ ಮಹೋತ್ಸವ

ಬೆಳಗ್ಗೆ 10 ಗಂಟೆಗೆ ಪಟಾಲಮ್ಮ ದೇಗುಲದಲ್ಲಿ ಮಹಾ ಮಂಗಳಾರತಿ ಹಾಗೂ ಅಗ್ನಿಕೊಂಡ ಪ್ರವೇಶ ನೆರವೇರಿತು. ಸಂಜೆ ಗ್ರಾಮದ ಇತರ ದೇವತೆಗಳಾದ ಗೆರಲಮ್ಮ, ಚಪಲಮ್ಮ(ಸಫಲಮ್ಮ), ಪ್ಲೇಗಮ್ಮ ದೇವತೆಯರಿಗೆ ಆರತಿ ಮಾಡಲಾಯಿತು.

ಅಡ್ಡಪಲ್ಲಕ್ಕಿ ಉತ್ಸವ

ಅಡ್ಡಪಲ್ಲಕ್ಕಿ ಉತ್ಸವ

ಬುಧವಾರ (ಜೂ.5) ಊರ ಹಬ್ಬದ ಕೊನೆಯ ದಿನ. ಮಲ್ಲಿಗೆ ಹೂವಿನಿಂದ ಅಲಂಕೃತ ಅಡ್ಡಪಲ್ಲಕ್ಕಿಯಲ್ಲಿ ಪಟಾಲಮ್ಮ ದೇವಿಯನ್ನು ಶೃಂಗರಿಸಿ, ತಾಳವಾದ್ಯ, ನಾದಸ್ವರಗಳೊಂದಿಗೆ ಬೆಳಿಗ್ಗೆ ಕನಕಪಾಳ್ಯದ ದೇವಸ್ಥಾನಗಳ ಸಮುಚ್ಛಯದಿಂದ ಉತ್ಸವ ಪ್ರಾರಂಭವಾಯಿತು.

ಸಿದ್ದರಾಮಯ್ಯ ಗೈರು

ಸಿದ್ದರಾಮಯ್ಯ ಗೈರು

ಕೈಕೊಟ್ಟ ಸಿಎಂ: ನವದೆಹಲಿಯಲ್ಲಿ ಭದ್ರತಾ ಮಂಡಳಿ ಸಭೆ ತೆರಳಿದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಜಾತ್ರೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ. ಬಿಜೆಪಿ ಸಂಸದ ಅನಂತ್ ಕುಮಾರ್ ಪ್ರಮುಖ ಆಕರ್ಷಣೆಯಾಗಿದ್ದರು.

ಮೆರವಣಿಗೆ

ಮೆರವಣಿಗೆ

ಜಯನಗರ ಬಡಾವಣೆಯ ಮುಖ್ಯ ಬೀದಿಗಳಲ್ಲಿ ಸಾಗುವ ಮೆರವಣಿಗೆ ಆನೆಬಂಡೆ ರಸ್ತೆಯಲ್ಲಿರುವ ಪಟಾಲಮ್ಮ ದೇವಸ್ಥಾನ ತಲುಪಿತು. ಇದೇ ಕಾಲಕ್ಕೆ ಯಡಿಯೂರು, ನಾಗಸಂದ್ರ, ಭೈರಸಂದ್ರ ಕಡೆಗಳಲ್ಲೂ ಮೆರವಣಿಗೆ ಸಾಗಿತ್ತು

ಜಾನಪದ ಕುಣಿತ

ಜಾನಪದ ಕುಣಿತ

ಶಿವಮೊಗ್ಗ ಜಿಲ್ಲೆಯ ಸಾಗರದ ಡೊಳ್ಳು ಕುಣಿತ, ಬೆಂಗಳೂರಿನ ಕಂಸಾಳೆ, ರಾಮನಗರದ ಪಟಾ ಕುಣಿತ, ಮಳವಳ್ಳಿಯ ಸೋಮನ ಕುಣಿತ, ತುಮಕೂರಿನ ನಂದಿ ಕೋಲು, ಮಂಡ್ಯದ ಗಾರುಡಿ ಗೊಂಬೆ, ಚಾಮರಾಜನಗರದ ಗೊರವರ ಕುಣಿತ ಹಾಗೂ ನಗಾರಿ,

ಜಾನಪದ ಮೆರವಣಿಗೆ

ಜಾನಪದ ಮೆರವಣಿಗೆ

ಕಾಸರಗೋಡಿನ ಚಂಡೆ ಮೇಳ ಹಾಗೂ ಆಲಂಕಾರಿಕ ಛತ್ರಿ ಮೆರವಣಿಗೆ, ಬಿಜಾಪುರದ ಕೀಲು ಕುದುರೆ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಆಗಮಿಸುವ 12 ವಿವಿಧ ಜಾನಪದ ತಂಡಗಳು ಉತ್ಸವದಲ್ಲಿ ಭಾಗವಹಿಸಿದ್ದವು.

ಭಕ್ತ ಸಮೂಹ

ಭಕ್ತ ಸಮೂಹ

ಆನೆ ಬಂಡೆ ರಸ್ತೆಯಲ್ಲಿರುವ ಪಟಾಲಮ್ಮ ದೇಗುಲದ ಬಳಿ ಅಪಾರ ಸಂಖ್ಯೆಯಲ್ಲಿ ನೆರದಿದ್ದ ಭಕ್ತಾದಿಗಳು

English summary
South Bangaloreans witnessed a huge gathering of devotees at Sri Patalamma Temple near South End circle, Kanakanapalya Bangalore. It was closing ceremony of 3-day long Grama Devata utsav of Kanakanapalya, Siddapura, Yedyiyur, Bhairasandra and Nagasandra off Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X