ಬೆಸ್ಕಾಂ ಮುಂದಿರುವ ಪ್ರಮುಖ ಚಾಲೇಂಜುಗಳು
ಪ್ರಶ್ನೆ : ಬೆಂಗಳೂರನ್ನು ವಿದ್ಯುತ್ ಸಂಪರ್ಕ ವ್ಯವಸ್ಥೆಯ ದಕ್ಷತೆ ಹೆಚ್ಚಿಸಲು ಏನೇನು ಕ್ರಮ ತೆಗೆದುಕೊಳ್ಳಲಾಗಿದೆ?
ಉತ್ತರ : ಬೆಂಗಳೂರಿಗೆ 24 ಗಂಟೆ ವಿದ್ಯುತ್ ಸರಬರಾಜು ಆಗುತ್ತಿದೆ. ನಂಬಿಕಾರ್ಹತೆ ಮತ್ತು ಗುಣಮಟ್ಟ ಹೆಚ್ಚಿಸುವ ಮೂಲಕ ಇಲ್ಲಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶದಿಂದ ಹೊಸ ತಂತ್ರಜ್ಞಾನಗಳನ್ನು ಬಳಸಲಾಗುತ್ತಿದೆ. ಬೆಂಗಳೂರಿನಲ್ಲಿ ನೂರು ವರ್ಷಗಳಿಗಿಂತಲೂ ಹಳೆಯ ವಿದ್ಯುತ್ ಸರಬರಾಜು ವ್ಯವಸ್ಥೆಯಿದ್ದು, ಆ ವ್ಯವಸ್ಥೆಯನ್ನು ಉತ್ತಮಪಡಿಸುವತ್ತ ನಿರಂತರ ಕಾರ್ಯ ನಡೆದಿದೆ.
ಇದರ ಜೊತೆಗೆ, ವಿದ್ಯುತ್ ತಂತಿಗಳನ್ನು ಬದಲಾಯಿಸಿ ಭೂಮಿಯೊಳಗೆ ಕೇಬಲ್‌ಗಳನ್ನು ಅಳವಡಿಸುವ ಕಾರ್ಯವನ್ನು ಬೆಸ್ಕಾಂ ಕೈಗೆತ್ತಿಕೊಂಡಿದೆ. ಅಲ್ಲದೆ, ಜನನಿಬಿಡ ಪ್ರದೇಶದಲ್ಲಿರುವ ಕಂಡಕ್ಟರುಗಳನ್ನು ತೆಗೆದು ಸುರಕ್ಷಿತವಾದ ಸಾಧನಗಳನ್ನು ಅಳವಡಿಸುವ ಮತ್ತು ಸುರಕ್ಷತೆ ಮತ್ತು ನಗರದ ಸೌಂದರ್ಯವನ್ನು ಹೆಚ್ಚಿಸುವ ಕಾರ್ಯ ಭರದಿಂದ ಸಾಗಿದೆ.

ಎಲ್ಲ ಸರ್ವೀಸ್ ಸ್ಟೇಷನ್‌ಗಳಲ್ಲಿ ಅತ್ಯಾಧುನಿಕ ಸಲಕರಣೆಗಳನ್ನು ಮತ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಇದ್ದ 60 ಸರ್ವೀಸ್ ಸ್ಟೇಷನ್‌ಗಳಿದ್ದವು. ಈಗ ಅವುಗಳ ಸಂಖ್ಯೆ 160ಕ್ಕೆ ಏರಿಸಲಾಗಿದೆ. ಇದರಿಂದ ಯಾವುದೇ ಪ್ರದೇಶದಲ್ಲಿ ಎಂಥದೇ ತೊಂದರೆ ಇದ್ದರೆ ಕೂಡಲೆ ಪರಿಹಾರ ದೊರಕಿಸಿಕೊಡಲು ಅನುಕೂಲವಾಗಿದೆ. ದಿನದ 24 ಗಂಟೆಗಳ ಕಾಲ 080 22873333 ಸಂಖ್ಯೆಯ ಮುಖಾಂತರ 30 ಎಕ್ಸಿಕ್ಯೂಟಿವ್‌ಗಳು ಗ್ರಾಹಕರ ಕರೆಗಳನ್ನು ಸ್ವೀಕರಿಸುತ್ತಾರೆ.
ಪ್ರಶ್ನೆ : ಬೆಸ್ಕಾಂ ಮುಖ್ಯಸ್ಥರಾಗಿ ನಿಮ್ಮ ಮುಂದಿರುವ ಪ್ರಮುಖ ಚಾಲೇಂಜ್‌ಗಳೇನು?
ಉತ್ತರ : ಪ್ರಮುಖ ಚಾಲೇಂಜ್ ಎಂದರೆ ವಿದ್ಯುತ್ ಸಂಪರ್ಕ ಅಡಚಣೆಯನ್ನು ನಿವಾರಿಸಿ ಗ್ರಾಹಕರಿಗೆ ನಿರಂತರ ವಿದ್ಯುತ್ ಸಂಪರ್ಕವನ್ನು ಒದಗಿಸುವುದು. ಇದನ್ನು ಸಾಧಿಸಬೇಕಾದರೆ ಮೂಲಸಂಪರ್ಕ ವ್ಯವಸ್ಥೆಯನ್ನು ಉತ್ತಮಪಡಿಸಿ ದೋಷಗಳನ್ನು ಕಡಿಮೆ ಮಾಡುವುದು ಅಗತ್ಯವಾಗಿದೆ. ಗ್ರಾಹಕರ ದೂರುಗಳನ್ನು ಸ್ವೀಕರಿಸಿ ಆದಷ್ಟು ವೇಗವಾಗಿ ಪರಿಹಾರ ಒದಗಿಸುವುದು ನಮ್ಮ ಆದ್ಯತೆಯಾಗಿದೆ. ಈಗ ಮಳೆಗಾಲ ಶುರುವಾಗಿರುವುದರಿಂದ ಸಂಭವಿಸುವ ನೈಸರ್ಗಿಕ ದುರಂತಗಳನ್ನು ಎದುರಿಸಲು ಆಪತ್ತು ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸಲಾಗುತ್ತಿದೆ.












Click it and Unblock the Notifications