ಬೆಸ್ಕಾಂ ಚೀಫ್ ಜನರಲ್ ಮ್ಯಾನೇಜರ್ ಸಂದರ್ಶನ
ಬೆಂಗಳೂರಿನ ಜನರು ಇತರ ನಗರ ಮತ್ತು ಗ್ರಾಮಾಂತರ ಜನರಿಗೆ ಹೋಲಿಸಿದರೆ ನಿಜಕ್ಕೂ ಅದೃಷ್ಟವಂತರು. ಹಳ್ಳಿಯ ಜನರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಲಭಿಸುತ್ತಿದೆ! ಹಾಗಾಗಿ, ಕರೆಂಟ್ ಸರಿಯಾಗಿ ಕೊಡಲ್ಲ, ಕಟ್ ಆದ್ರೆ ಬೇಗ ರಿಪೇರಿ ಮಾಡಲ್ಲ, ಮೀಟರ್ ಸರಿಯಿಲ್ಲ ಅಂತ ವಿದ್ಯುತ್ ಕಂಪನಿಯ ವಿರುದ್ಧದ ಗೊಣಗಾಟವೂ ಸ್ವಲ್ಪ ಜಾಸ್ತಿಯೆ. ಹೆಚ್ಚಿನ ವಿದ್ಯುತ್ ಲಭಿಸುತ್ತಿರುವುದರಿಂದ ಅನುಕೂಲಗಳೂ ಜಾಸ್ತಿ, ತೊಂದರೆಗಳೂ ಜಾಸ್ತಿ.
ಮಳೆ ಬಂದ್ರೂ ಕಷ್ಟ, ಜೋರಾಗಿ ಗಾಳಿ ಬೀಸಿ ಮರ ಉರುಳಿದರೂ ಕಷ್ಟ. ಇನ್ನೇನು ನೆಚ್ಚಿನ ಧಾರಾವಾಹಿ ಬರಬೇಕು ಅಷ್ಟರಲ್ಲಿ ಕರೆಂಟ್ ಕಟ್ ಮಾಡಿದರು ಎಂದು ವಿದ್ಯುತ್ ಕಂಪನಿಯ ವಿರುದ್ಧ ಬೈಗುಳಗಳ ಸಹಸ್ರನಾಮಾವಳಿ ಶುರು. ಮುಂಗಾರು ಇನ್ನೇನು ಆರಂಭವಾಗಿದೆ, ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ತೊಂದರೆಗಳ ಸರಮಾಲೆಗಳೂ ಶುರುವಾಗಲಿವೆ. ನಾಗರಿಕರೂ ಸಾಕಷ್ಟು ಎಚ್ಚರದಿಂದ ಇರಬೇಕು.

ಆದರೆ, ನೈಸರ್ಗಿಕ ವಿಕೋಪ ಬಂದು ವಿದ್ಯುತ್ ಕಡಿತಗೊಂಡಾಗ, ಕಟ್ ಆಗಿ ಬಿದ್ದ ತಂತಿಯಿಂದ ವಿದ್ಯುತ್ ಹರಿದು ಅಪಘಾತ ಸಂಭವಿಸಿದಾಗ, ವಿದ್ಯುತ್ ಕಳ್ಳತನಗಳಾದಾಗ, ಕರೆಂಟ್ ದುರ್ಬಳಕೆಗಳಾದಾಗ ಅಥವಾ ಮತ್ತಾವುದೇ ಪರಿಸ್ಥಿತಿ ಒದಗಿಬಂದಾಗ ಬೆಸ್ಕಾಂ (Bangalore Electricity Supply Company) ಯಾವ ರೀತಿ ಕಾರ್ಯನಿರ್ವಹಿಸುತ್ತದೆ, ಸಾರ್ವಜನಿಕರಿಗೆ ಯಾವ ರೀತಿಯ ಸುರಕ್ಷತೆಗಳನ್ನು ಒದಗಿಸುತ್ತದೆ ಎಂಬ ಬಗ್ಗೆ ಒನ್ಇಂಡಿಯಾ ಕನ್ನಡ ಕೇಳಿದ ಪ್ರಶ್ನೆಗಳಿಗೆ ಬೆಸ್ಕಾಂನ ಚೀಫ್ ಜನರಲ್ ಮ್ಯಾನೇಜರ್ ಆನಂದ್ ನಾಯಕ್ ಅವರು ಉತ್ತರಿಸಿದ್ದಾರೆ.
ಅತ್ಯಂತ ದಕ್ಷ ಅಧಿಕಾರಿಗಳಲ್ಲಿ ಒಬ್ಬರು ಎಂದು ಹೆಸರು ಮಾಡಿರುವ ಮಣಿವಣ್ಣನ್ ಅವರು ಬೆಂಗಳೂರಿನ ಜನರಿಗೆ ಅತ್ಯುತ್ತಮ ಸೇವೆ ಒದಗಿಸುವ ಉದ್ದೇಶದಿಂದ ಬೆಸ್ಕಾಂನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಿದ್ದಾರೆ. ಕರ್ನಾಟಕದಲ್ಲಿ ಮುಂಗಾರು ಆರಂಭವಾಗಿದ್ದು, ಈ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆ ಸಂಭವಿಸದಂತೆ ಹೆಚ್ಚಿನ ನಿಗಾ ವಹಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನಾಯಕ್ ಅವರು ವಿವರಿಸಿದ್ದಾರೆ. (ಪ್ರಶ್ನೋತ್ತರಗಳು ಮುಂದಿವೆ ಓದಿ)
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications