ಮಲೆಗಳಲ್ಲಿ ಮದುಮಗಳ ನೆನಪು ನಿರಂತರ
ಬೆಂಗಳೂರು, ಜೂನ್ 4: ಒಂದು ನಾಟಕದ ಯಶಸ್ಸಿಗೆ ಕಥಾವಸ್ತು, ಕಲಾವಿದ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪ್ರೇಕ್ಷಕನ ಗಮನವನ್ನು ನಾಟಕ ಮುಗಿಯುವ ವರೆಗೆ ಹಿಡಿದಿಡಿಯುವುದು, ಎಂದು ಕನ್ನಡ ಮತ್ತು ಸಂಸ್ಕøತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಶ್ರೀಮತಿ ಉಮಾಶ್ರೀ ಅಭಿಪ್ರಾಯ ಪಟ್ಟಿದ್ದಾರೆ.
ಕರ್ನಾಟಕ ಕಲಾಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದ ‘ಮಲೆಗಳಲ್ಲಿ ಮದುಮಗಳು' ನಾಟಕ ಸರಣಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಚಿವರು ಮಾತನಾಡುತ್ತ, ಬೆಂಗಳೂರಿನಲ್ಲಿ ನಿತ್ಯ ಜನಜೀವನ ಒತ್ತಡದಿಂದ ಕೂಡಿದ್ದೂ, ಆಧುನಿಕ ಜೀವನಶೈಲಿಗೆ ಒಗ್ಗಿಹೋಗಿದ್ದರೂ, ಜನರು ಹಣ ಕೊಟ್ಟು ನಾಟಕ ನೋಡಲು ಮುಂದೆ ಬಂದಿರುವುದು ರಂಗಕರ್ಮಿಗಳಿಗೆ ಪ್ರೋತ್ಸಾಯದಾಯಕ ಬೆಳವಣಿಗೆಯಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.
ಮಲೆಗಳಲ್ಲಿ ಮದುಮಗಳು ಎಂಬ ಮನೋಜ್ಞ ಕಾದಂಬರಿಯ ನಾಟಕ ರೂಪಾಂತರವನ್ನು ಪ್ರಕೃತಿಯ ಮಧ್ಯೆ ಸತತ 20ಕ್ಕೂ ಹೆಚ್ಚು ಪ್ರದರ್ಶನ ನಡೆಸಿರುವುದು ಒಂದು ಸಾಧನೆಯೆ ಸರಿ ಎಂದ ಸಚಿವರು, ನಾಟಕದ ಪ್ರೇಕ್ಷಕ ವರ್ಗದಲ್ಲಿ ಯುವ ಪೀಳಿಗೆ ಹೆಚ್ಚು ಕಾಣಿಸಿಕೊಂಡಿರುವುದು ಆಶಾದಾಯಕವಾಗಿದೆ ಎಂದರು.
ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಬಸವರಾಜು ಅವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ಪ್ರೇರಣೆ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡಿದರು.
ಸಮಾರೋಪ ಕಾರ್ಯಕ್ರಮದಲ್ಲಿ ಹಂ.ಪ. ನಾಗರಾಜಯ್ಯ, ಶ್ರೀಮತಿ ಹಂಪನಾ, ಶಶಿಧರ್ ಅಡಪ, ನಾಟಕದ ನಿರ್ದೆಶಕರಾದ ಬಸವಲಿಂಗಯ್ಯ, ಕನ್ನಡ, ಸಂಸ್ಕೃತಿ ಇಲಾಖೆಯ ಆಯುಕ್ತರಾದ ರಾಮಕೃಷ್ಣ, ವಾರ್ತಾ ಇಲಾಖೆ ನಿರ್ದೇಶಕರಾದ ಎನ್ ಆರ್ ವಿಶುಕುಮಾರ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಸಚಿವೆ ಉಮಾಶ್ರೀ ಪ್ರಶಂಸೆ
ನಾಟಕದ ಪ್ರೇಕ್ಷಕ ವರ್ಗದಲ್ಲಿ ಯುವ ಪೀಳಿಗೆ ಹೆಚ್ಚು ಕಾಣಿಸಿಕೊಂಡಿರುವುದು ಒಳ್ಳೆಯ ಬೆಳವಣಿಗೆ, ಬೆಂಗಳೂರಿನಲ್ಲಿ ನಾಟಕ ಸಂಸ್ಕೃತಿ ಉಳಿಸಲು ಈ ರೀತಿ ಪ್ರಯೋಗ ಅವಶ್ಯ ಎಂದ ಉಮಾಶ್ರೀ

ಸಚಿವೆ ಉಮಾಶ್ರೀ
ನಿರ್ದೇಶಕ ಬಸವಲಿಂಗಯ್ಯ, ಕಮಲ ಹಂಪನಾ ಹಾಗೂ ಕಲಾವಿದರ ಜೊತೆ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವೆ ಉಮಾಶ್ರೀ

ಮದುಮಗಳು ನಾಟಕ ಸಾಧನೆ
ಮಲೆಗಳಲ್ಲಿ ಮದುಮಗಳು ನಾಟಕದಲ್ಲಿ 158 ಪಾತ್ರಗಳು, 58 ಸ್ಕ್ರೀನ್, 67 ಕಲಾವಿದರು ಭಾಗವಹಿಸಿದ್ದರು, ಪೀಟರ್ ಬ್ರೂಕ್ಸ್ ಅವರ ಮಹಾಭಾರತ ನಾಟಕವನ್ನು ಮೀರಿಸಿದ ಸಾಧನೆ ಮಾಡಿದೆ.

ಮಲೆಗಳಲ್ಲಿ ಮದುಮಗಳ ನೆನಪು
ರಾತ್ರಿ 8.30 ಕ್ಕೆ ಆರಂಭವಾಗಿ ಮರುದಿನ 5.30ಕ್ಕೆ ನಾಟಕ ಮುಗಿಯುತ್ತಿತ್ತು. ಸೋಮವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ನಾಟಕ ಕಲಾಗ್ರಾಮದಲ್ಲಿ ಪ್ರದರ್ಶನ ಕಂಡಿದೆ. ಒಟ್ಟು ನಾಲ್ಕು ಅಂಗಳದಲ್ಲಿ ನಾಟಕ ಪ್ರದರ್ಶನ ಕಂಡಿದೆ.

ಮಲೆಗಳಲ್ಲಿ ಮದುಮಗಳ ನೆನಪು
ಕುವೆಂಪು ವಿರಚಿತ ಸುಮಾರು 752 ಪುಟಗಳ ಬೃಹರ್ ಕಾದಂಬರಿಯನ್ನು ನಾಟಕ ರೂಪಕ್ಕೆ ತಂದವರು ಸಾಹಿತಿ ಕೆ.ವೈ ನಾರಾಯಣ ಸ್ವಾಮಿ, ನಿರ್ದೇಶಿಸಿದವರು ಸಿ ಬಸವಲಿಂಗಯ್ಯ.

ಮಲೆಗಳಲ್ಲಿ ಮದುಮಗಳ ನೆನಪು
ಮೈಸೂರಿನಲ್ಲಿ ಮೊದಲು ಪ್ರಯೋಗ ಕಂಡ ಈ ನಾಟಕವನ್ನು ಸುಮಾರು 600 ಜನ ವೀಕ್ಷಿಸಿದ್ದರು. ಕಲಾಗ್ರಾಮದಲ್ಲಿ ಪ್ರತಿ ಪ್ರದರ್ಶನದಲ್ಲೂ 1,100ಕ್ಕೂ ಅಧಿಕ ವೀಕ್ಷಕರು ಆಗಮಿಸಿದ್ದರು. ಮೂರು ವಿರಾಮಗಳ ಜೊತೆ ಸುಮಾರು 9 ಗಂಟೆ ನಡೆಯುವ ನಾಟಕಕ್ಕೆ ಸಂಗೀಯ ನೀಡಿದವರು ನಾದ ಬ್ರಹ್ಮ ಹಂಸಲೇಖ












Click it and Unblock the Notifications