ಆಧಾರ್ LPG ಸಬ್ಸಿಡಿ ಪ್ರಕ್ರಿಯೆ ತಿಳಿಯುವುದು ಹೇಗೆ?
ತುಮಕೂರು, ಜೂನ್ 4: ಗ್ಯಾಸ್ ಸಬ್ಸಿಡಿ ಹಣ ಬ್ಯಾಂಕ್ ಖಾತೆಯಲ್ಲಿ ಜಮಾವಣೆಯಾಗುವ ಪ್ರಕ್ರಿಯೆಯನ್ನು ತಿಳಿಯುವುದು ಹೇಗೆ? ಇಲ್ಲಿದೆ ಉತ್ತರ. ಅಡುಗೆ ಅನಿಲದ ಸಬ್ಸಿಡಿ ಹಣ ಪಡೆಯಲು ಬ್ಯಾಂಕ್ ಖಾತೆಯಲ್ಲಿ ಆಧಾರ್ ಕಾರ್ಡ್ ದಾಖಲಿಸಿಕೊಂಡರೆ ಸಾಲದು.

ನಿಲೇಕಣಿ ಏನನ್ನುತ್ತಾರೆ?: ಆಧಾರ್ ಕಾರ್ಡ್ ಎಂಬ ತಮ್ಮ ಕೂಸು ಮೊನ್ನೆ ಅಂಬೆಗಾಲಿಟ್ಟು ಜನರ ಮನೆಯಂಗಳ ತಲುಪುತ್ತಿದ್ದನ್ನು ಕಣ್ಣಾರೆ ಕಂಡು ಆನಂದಿಸಲು ಆಧಾರ್ ಕಾರ್ಡ್ ಮುಖ್ಯಸ್ಥ ನಂದನ ನಿಲೇಕಣಿ ಮೊನ್ನೆ ತುಮಕೂರಿಗೆ ಬಂದಿದ್ದರು.
ಆರಂಭಿಕ ವಿಘ್ನಗಳ ಮಧ್ಯೆಯೂ ಪಟ್ಟು ಸಡಿಲಿಸದೆ ಕೇಂದ್ರದ ಮಹತ್ವಾಕಾಂಕ್ಷಿ ಆಧಾರ್ ಕಾರ್ಡ್ ಆಧಾರಿತ ಹಣಕಾಸು ನೆರವು ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಿದ Unique Identification Authority of India (UIDAI) ಅಧ್ಯಕ್ಷ, ಕನ್ನಡಿಗ ನಂದನ ನಿಲೇಕಣಿ ಅವರ ಮೊಗದಲ್ಲಿ ಅಂದು ಸಂತಸ ನೆಲೆಸಿತ್ತು.
ಆಧಾರ್ ಕಾರ್ಡ್ ಜತೆಗೆ ಬ್ಯಾಂಕ್ ಖಾತೆ ಹೊಂದಿರುವ ಅಡುಗೆ ಅನಿಲ ಗ್ರಾಹಕರಿಗೆ ನೇರವಾಗಿ ಸಬ್ಸಿಡಿ ಹಣ ವಿತರಿಸುವ ಕಾರ್ಯಯೋಜನೆಗೆ ತುಮಕೂರಿನಲ್ಲಿ ಚಾಲನೆ ದೊರೆತ ಸಮಯದಲ್ಲಿ ನಂದನ ನಿಲೇಕಣಿ ಅವರು ತಮ್ಮ ಕನಸಿನ ಕೂಸಿನ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.
6-9 ತಿಂಗಳಲ್ಲಿ ರಾಜ್ಯದ ಅಷ್ಟೂ ಜನರಿಗೆ (ತಾಜಾ ಮಾಹಿತಿಯಂತೆ 6.2 ಕೋಟಿ ಜನ) ಆಧಾರ್ ಕಾರ್ಡ್ ವಿತರಿಸುವುದು ಖಂಡಿತಾ ಎಂದು ಹೇಳಿದ್ದಾರೆ. ಈ ನಿಟ್ಟಿನಲ್ಲಿ ತಮ್ಮ ಅಧೀನದ UIDAI ಸಂಸ್ಥೆಯು ರಾಜ್ಯ ಸರಕಾರದ ಸಂಪೂರ್ಣ ನೆರವಿನೊಂದಿಗೆ ಜಾರಿಗೊಳಿಸುವುದಾಗಿ ನಿಲೇಕಣಿ ಹೇಳಿದ್ದಾರೆ.
ಸಿಎಂ ಸಿದ್ದು ಅಭಯ:
ದೇಶದಲ್ಲಿ ಈಗಾಗಲೇ 40 ಕೋಟಿ ಜನರು ಆಧಾರ್ ಯೋಜನೆಯಡಿ ನೋಂದಣೆ ಮಾಡಿಸಿಕೊಂಡಿದ್ದಾರೆ. ಇವರ ಪೈಕಿ 35 ಕೋಟಿ ಜನರಿಗೆ ಆಧಾರ್ ಕಾರ್ಡ್ ತಲುಪಿಸಿದ್ದೇವೆ. ರಾಜ್ಯದಲ್ಲೂ ಪೂರ್ಣ ಪ್ರಮಾಣದಲ್ಲಿ ಇದು ಜಾರಿಯಾಗಲಿದೆ ಎಂದು ನಿಲೇಕಣಿ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಸಿಎಂ ಸಿದ್ದರಾಮಯ್ಯ ಆಧಾರ್ ನೋಂದಣಿ ಶೇ. 100ರಷ್ಟು ಫಲಪ್ರದವಾಗಲು ರಾಜ್ಯ ಸರಕಾರ ಸಂಪೂರ್ಣ ನೆರವು ನೀಡಲಿದೆ ಎಂದು ಅಭಯ ನೀಡಿದ್ದಾರೆ.












Click it and Unblock the Notifications