ಅಂಕಿತ್ ಮದುವೆಗೆ ಪೊಲೀಸರೇ ಅತಿಥಿಗಳು

ಮುಂಬೈ, ಜೂ.3: ರಾಜಸ್ಥಾನ ರಾಯಲ್ಸ್ ತಂಡದ ಆಟಗಾರ, ಸ್ಪಾಟ್ ಫಿಕ್ಸಿಂಗ್ ಅರೋಪಿ ಅಂಕಿತ್ ಚವಾಣ್ ಅವರ ಮದುವೆಗೆ ಪೊಲೀಸರೇ ಪ್ರಮುಖ ಅತಿಥಿಗಳಾಗಿದ್ದರು. ಪೊಲೀಸರ ಅತಿಥಿಯಾಗಿರುವ ಅಂಕಿತ್ ವಿವಾಹ ಬಂಧನದ ನಂತರ ಮಧುಚಂದ್ರ ಕನಸು ಕಾಣಲು ಸಾಧ್ಯವಿಲ್ಲ ತಕ್ಷಣವೇ ಪೊಲೀಸರ ಬಂಧನಕ್ಕೆ ಒಳಪಡಬೇಕಿದೆ.

ಭಾನುವಾರ (ಜೂ.2) ತನ್ನ ಪ್ರಿಯತಮೆ ನೆಹಾ ಸಾಂಬಾರಿ ಅವರೊಂದಿಗೆ ದಾಂಪತ್ಯ ಬದುಕಿಗೆ ಅಂಕಿತ್ ಕಾಲಿರಿಸಿದ್ದಾರೆ. 27ರ ಹರೆಯದ ಚವಾಣ್ ಮುಂಬೈನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೆಹಾರನ್ನು ವಿವಾಹವಾದರು. ಅಂಕಿತ್ ಅವರ ಮದುವೆಗೆ ಕ್ರಿಕೆಟರ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಪೊಲೀಸ್ ಅಧಿಕಾರಿಗಳೇ ಅತಿಥಿಗಳಾಗಿ ವಿಜೃಂಭಿಸಿದರು ಎಂದು ತಿಳಿದು ಬಂದಿದೆ.

Cricketers snub but police attend Ankeet Chavan's wedding

ಸುಂದರ ವಿನ್ಯಾಸವುಳ್ಳ ಕುರ್ತಾ, ಗಾಢ ಬಣ್ಣದ ಧೋತಿ, ಕೆಂಪು ರುಮಾಲು ಧರಿಸಿದ್ದ ಚೌವಾಣ್ ಅವರು ಶಿವಾಜಿ ಪಾರ್ಕ್ ಬಳಿಯ ಕೊಹಿನೂರ್ ಬಾಂಕ್ವೆಟ್ ಹಾಲ್ ನಲ್ಲಿ ರಾಜನಂತೆ ಕಂಗೊಳಿಸುತ್ತಿದ್ದರು. ಆಪ್ತ ಗೆಳೆಯರು ಹಾಗೂ ಸಂಬಂಧಿಕರು ಮಾತ್ರ ಅವರ ಸುತ್ತಾ ಮುತ್ತಾ ಕಂಡು ಬಂದರು. ರಾಜಸ್ಥಾನ್ ರಾಯಲ್ಸ್ , ಮುಂಬೈ ತಂಡದ ಆಟಗಾರರು ಮದುವೆಗೆ ಆಗಮಿಸಿರಲಿಲ್ಲ.

ಸಾಂಬಾರಿ ಮತ್ತು ಚವಾಣ್ ಅವರ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅವರು ವಿವಾಹದ ನಿಶ್ಚಿತಾರ್ಥ ಇತ್ತೀಚೆಗೆ ನಡೆದಿತ್ತು. ಸ್ಪಾಟ್ ಫಿಕ್ಸಿಂಗ್ ಹಗರಣ ದಲ್ಲಿ ನ್ಯಾಯಾಂಗ ಬಂಧನಕ್ಕೊಳಗಾಗಿದ್ದ ಚವಾಣ್ ಗೆ ಎರಡು ದಿನಗಳ ಹಿಂದೆ ನ್ಯಾಯಾಲಯ ಒಂದು ವಾರದ ಮಟ್ಟಿಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 6ರಂದು ಅವರು ಮತ್ತೆ ಜೈಲು ಸೇರಬೇಕಾಗಿದೆ.

"ಜೂ.2 ರಂದು ಅಂಕಿತ್ ಅವರ ಮದುವೆ ಫಿಕ್ಸ್ ಆಗಿದ್ದು, ಆಹ್ವಾನ ಪತ್ರಿಕೆ ಹಂಚಿಕೆಯಾಗಿದೆ. ಈ ಸಮಯದಲ್ಲಿ ಅಂಕಿತ್ ಗೆ ಜಾಮೀನು ನೀಡದೆ ಜೈಲಿನಲ್ಲಿ ಕೂರಿಸಿದರೆ ವಧುವಿನ ಮನೆಯವರ ಗತಿ ಏನು?" ಎಂದು ಅಂಕಿತ್ ಪರ ವಕೀಲರು ಮಂಡಿಸಿದ ವಾದಕ್ಕೆ ನ್ಯಾಯಮೂರ್ತಿ ತಲೆದೂಗಿ ಜಾಮೀನು ಮಂಜೂರು ಮಾಡಿದ್ದರು.

ಜಾಮೀನು ಪಡೆಯಲು ಅಂಕಿತ್ 1 ಲಕ್ಷ ರು ಪಾವತಿಸಿದ್ದರು. ಹಾಗೂ ಜೂನ್ 6 ರೊಳಗೆ ದೆಹಲಿ ಪೊಲೀಸರಿಗೆ ಶರಣಾಗುವ ಷರತ್ತಿಗೆ ಒಪ್ಪಿಗೆ ಸೂಚಿಸಿದ್ದರು.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಶ್ರೀಶಾಂತ್, ಅಂಕಿತ್ ಹಾಗೂ ಅಜಿತ್ ಅವರನ್ನು ದೆಹಲಿ ಪೊಲೀಸರು ಮೇ.16ರನ್ನು ಬಂಧಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+