ಜೆಡಿಎಸ್ ಸೋತರೂ ಕುಮಾರಸ್ವಾಮಿ ಪ್ರತಿಪಕ್ಷ ನಾಯಕ

ಆದರೆ ಅದು ಪಿರಿಯಾಪಟ್ಟಣ ಫಲಿತಾಂಶವನ್ನು ಅವಲಂಬಿಸಿತ್ತು. ಏಕೆಂದರೆ ಬಿಜೆಪಿ-ಜೆಡಿಎಸ್ ಫಾರ್ಟಿ-ಫಾರ್ಟಿ ಸ್ತಾನಗಳನ್ನು ಗಳಿಸಿ ಸಮ-ಸಮ ಸ್ಥಾನದಲ್ಲಿತ್ತಾದರೂ ಒಟ್ಟಾರೆ ಮತ ಗಳಿಕೆಯಲ್ಲಿ ಬಿಜೆಪಿಗಿಂತ ಜೆಡಿಎಸ್ ಮುಂದಿದ್ದರಿಂದ ಕುಮಾರಸ್ವಾಮಿಗೆ ಸರಳವಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ಅಲಂಕರಿಸ್ದರು.
ಏಕೆಂದರೆ ಪಿರಿಯಾಪಟ್ಟಣ ಫಲಿತಾಂಶಕ್ಕೂ ಮುನ್ನ ಈಗಾಗಲೇ ಮತಗಳಿಕೆಯಲ್ಲಿ ಸಾಕಷ್ಟು ಮುಂದಿದ್ದ ಜೆಡಿಎಸ್ ಇಂದೂ ತನ್ನ ಮತ ಗಳಿಕೆಯನ್ನು ಬಾರಿ ಪ್ರಮಾನದಲ್ಲಿ ಹೆಚ್ಚಿಸಿಕೊಂಡಿದೆ. ಪಿರಿಯಾಪಟ್ಟಣ ಫಲಿತಾಂಶದಲ್ಲಿ ಜೆಡಿಎಸ್-ಬಿಜೆಪಿ ಮತ ಗಳಿಕೆ ಮಧ್ಯೆ ಅಜಗಜಾಂತರವಿದೆ. ಜೆಡಿಎಸ್ ಈಗಾಗಲೇ 25 ಸಾವಿರರ ಗಡಿಯತ್ತ ಸಾಗಿದ್ದರೆ ಬಿಜೆಪಿ ಕೇವಲ 2 ಸಾವಿರದ ಗಡಿ ದಾಟಲು ಹೆಣಗಾಡುತ್ತಿದೆ.
ಒಂದು ವೇಳೆ ಪಿರಿಯಾಪಟ್ಟಣದಲ್ಲಿ ಬಿಜೆಪಿ ಗೆದ್ದಿದ್ದರೆ ಕುಮಾರಸ್ವಾಮಿ ಆ ಪಟ್ಟದಿಂ ವಂಚಿತರಾಗುತ್ತಿದ್ದರು. ಏಕೆಂದರೆ ಬಿಜೆಪಿ ಟ್ಯಾಲಿ 41ಕ್ಕೆ ಏರಿ ಯಾವುದೇ ಗೊಂದಲವಿಲ್ಲದೆ ಬಿಜೆಪಿ ಶಾಸಕಾಂಗ ಪಕ್ಷದ ಅಭ್ಯರ್ಥಿಯೇ (ಜಗದೀಶ್ ಶೆಟ್ಟರ್) ಪ್ರತಿಪಕ್ಷ ನಾಯಕ ಸ್ಥಾನಕ್ಕೇರುತ್ತಿದ್ದರು.
ಆದರೆ ಪಿರಿಯಾಪಟ್ಟಣದಲ್ಲಿ 6ನೇ ಸುತ್ತಿನ ಮತ ಎಣಿಕೆ ನಂತರ ಏನಾಗಿದೆ ಅಂದರೆ ಇಲ್ಲಿನ ಮತದಾರ ಬಿಜೆಪಿಗೆ ಪಿರಿ ಪಿರಿಯುಂಟುಮಾಡಿದ್ದಾನೆ. ಒಂದು ವೇಳೆ ಜೆಡಿ ಎಸ್ ಸೋತು, ಕಾಂಗ್ರೆಸ್ ಪಕ್ಷವೇ ಗೆದ್ದರೂ ಪ್ರತಿಪಕ್ಷ ನಾಯಕ ಸ್ಥಾನ ಜೆಡಿಎಸ್ ಕುಮಾರಸ್ವಾಮಿಗೆ ಅಬಾಧಿತ.












Click it and Unblock the Notifications