ಪೋಷಕರ ಬುದ್ದಿವಾದದಿಂದ ಬೇಸತ್ತು ಆತ್ಮಹತ್ಯೆ

ಪದ್ಮನಾಭನಗರದ ಜೆಎಸ್ ಎಸ್ ಕಾಲೇಜಿನಲ್ಲಿ ಅಶ್ವಿನಿ (17) ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಪರೀಕ್ಷೆಯಲ್ಲಿ ಫೇಲ್ ಆಗಿದ್ದು ಮನೆಯಲ್ಲಿದ್ದಳು.
ಪೋಷಕರ ಬಳಿ ಹಣಕ್ಕಾಗಿ ಈಕೆ ಯಾವಾಗಲೂ ಬೇಡಿಕೆ ಇಡುತ್ತಿದ್ದಳು. ಬಡವರಾದ ತಂದೆ-ತಾಯಿ ಹೆಚ್ಚು ಖರ್ಚುಮಾಡಬೇಡ ಎಂದು ಗುರುವಾರ ಮಗಳಿಗೆ ಬುದ್ಧವಾದ ಹೇಳಿದ್ದಾರೆ.
ಗುರುವಾರ ಸಂಜೆ ತಂದೆ-ತಾಯಿ ಮನೆಗಯಿಂದ ಹೊರ ಹೋಗಿದ್ದ ಸಂದರ್ಭದಲ್ಲಿ ಈಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಂದೆ-ತಾಯಿ ಮನೆಗೆ ಹಿಂತಿರುಗಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಯಾವಾಗಲೂ ಹಣಕ್ಕಾಗಿ ಪೀಡಿಸುತ್ತಿದ್ದಳು ಆದ್ದರಿಂದ ಕಡಿಮೆ ಖರ್ಚು ಮಾಡುವಂತೆ ಮಗಳಿಗೆ ಬುದ್ಧಿವಾದ ಹೇಳಿದ್ದೆ, ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅಶ್ವಿನಿ ತಾತಿ ಗೌರಮ್ಮ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸುಬ್ರಮಣ್ಯ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications