ಯುಪಿ : ಠಾಣೆಯಲ್ಲೇ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಶಾಂತ್ ಕಬೀರ್ ನಗರ ಜಿಲ್ಲೆಯಲ್ಲಿ ಇಂತಹ ಅಮಾನವೀಯ ಕೃತ್ಯ ನಡೆದಿದೆ. ಪೊಲೀಸ್ ಠಾಣೆಗೆ ಆಗಮಿಸಿ ಪತಿಯನ್ನು ಬಿಡುಗಡೆಮಾಡುವಂತೆ ಕೋರಿದ ಮಹಿಳೆಯನ್ನು ಕೂಡಿಹಾಕಿದ ಇನ್ಸ್ ಪೆಕ್ಟರ್ ಮತ್ತು ಮೂವರು ಪೇದೆಗಳು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಬಹೀರಾ ಠಾಣೆಯ ಇನ್ಸ್ ಪೆಕ್ಟರ್ ಶಿವಾಜಿರಾವ್ ಮತ್ತು ಪೇದೆಗಳ ವಿರುದ್ಧ ತನಿಖೆ ನಡೆಸುವಂತೆ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಫಣೀಶ ಚೌಹಾಣ್ ಆದೇಶ ನೀಡಿದ್ದು, ಮಹಿಳೆಯನ್ನು ಆಸ್ಪತ್ರಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.
ಅತ್ಯಾಚಾರದ ನಂತರ ಮಹಿಳೆ ಮತ್ತು ಆಕೆಯ ಪತಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಪತಿಯು ಅವಮಾನ ತಾಳಳಾರದೆ ಕಣ್ಮರೆಯಾಗಿದ್ದಾನೆ. ಆತನನ್ನು ಹುಡುಕಿಕೊಂಡುವಂತೆ ಪತ್ನಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾಳೆ.
ಹಿಂದೆಯೂ ನಡೆದಿತ್ತು : ಕಳೆದ ಕೆಲವು ದಿನಗಳ ರಾಜ್ಯದ ಬರೇಲಿ ಎಂಬ ಪ್ರದೇಶದಲ್ಲಿಯೂ ಸಬ್ ಇನ್ಸ್ ಪೆಕ್ಟರ್ ಠಾಣೆಯಲ್ಲಿಯೇ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದರು. ತನಿಖೆಯಲ್ಲಿ ಇದು ಸಾಬೀತಾಗಿ ಸೇವೆಯಿಂದ ಆತನನ್ನು ಅಮಾನತುಗೊಳಿಸಿ ಬಂಧಿಸಲಾಗಿತ್ತು.
ಈ ಘಟನೆ ನೆನಪಿನಿಂದ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿದೆ. ಉತ್ತರ ಪ್ರದೇಶದ ಪೊಲೀಸರು ಸದಾ ವಿವಾದಾತ್ಮಕ ಕಾರಣಗಳಿಂದಾಗಿ ಸುದ್ದಿಯಾಗುತ್ತಾರೆ. ರಕ್ಷಣೆ ನೀಡಬೇಕಾದ ಪೊಲೀಸರು ಭಕ್ಷಕರಾದರೆ ಸಾರ್ವಜನಿಕರನ್ನು ರಕ್ಷಿಸುವುದು ಯಾರು?












Click it and Unblock the Notifications