ಕೃಷ್ಣಮಠ ಮುಜರಾಯಿಗೆ: ಕರಾವಳಿ ಕಾಂಗೈನಲ್ಲಿ ಅಪಸ್ವರ
ಉಡುಪಿ,
ಮೇ 24: ಉಡುಪಿ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ 'ಹಸ್ತಾಂ'ತರಿಸಬೇಕು ಎಂಬ ಕೂಗಿಗೆ ಕರಾವಳಿ ಕಾಂಗ್ರೆಸ್ಸಿನಲ್ಲಿ ಅಪಸ್ವರ ಕೇಳಿಬಂದಿದೆ. id="toptextpromo">ಕಾಂಗ್ರೆಸ್
ಆಡಳಿತದಲ್ಲಿ ಶ್ರೀಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ 'ಹಸ್ತಾಂ'ತರಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿರುವುದನ್ನು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಬಿ ಜನಾರ್ಧನ ಪೂಜಾರಿ ಅವರು ತೀವ್ರ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಮ್ಮ
ಸರಕಾರ ಮೊದಲು ಅನ್ನ, ನೀರು, ಶಿಕ್ಷಣಕ್ಕೆ ಮಣೆ ಹಾಕಲಿ. ಅದು ಬಿಟ್ಟು ಮಠಗಳತ್ತ ಪ್ರದಕ್ಷಿಣೆ ಹಾಕುವುದು ಬೇಡ. ದೇವಸ್ಥಾನ /ಮಠಗಳ ವಿಷಯದಿಂದ ಸರಕಾರ ದೂರವಿರಲಿ. ಅನ್ನ, ನೀರು, ಶಿಕ್ಷಣದ ಮೂಲಕ ಜನತೆಗೆ ಹತ್ತಿರವಾಗಲಿ ಎಂದು ತಮ್ಮದೇ ಶೈಲಿಯಲ್ಲಿ ಸಿಎಂ ಸಿದ್ದುಗೆ ಪೂಜಾರಿ ಗುದ್ದು ನೀಡಿದ್ದಾರೆ.











Click it and Unblock the Notifications