ಧರ್ಮ ಬೋಧನೆ ಮಧ್ಯೆ ರೇಪ್: ಪೀರ್ ಬಾಬಾ ಬಂಧನ

Budgam Self styled Peer baba Gulzar Ahmed Bhat rapes girl students along with religious preaches arrested
ಶ್ರೀನಗರ, ಮೇ 22: ಧಾರ್ಮಿಕ ಶಿಕ್ಷಣಕ್ಕಾಗಿ ಬಂದಿದ್ದ ನಾಲ್ವರು ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳ ಮೇಲೆ ಸ್ವಯಂಘೋಷಿತ ಪೀರ್ ಬಾಬಾ ಬೋಧನೆಯ ಮಧ್ಯೆ ಸತತ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಬಡಗಾಂ ಜಿಲ್ಲೆಯ ಪೊಲೀಸರು ಆರೋಪಿ ಮೌಲ್ವಿಯನ್ನು ಬಂಧಿಸಿದ್ದಾರೆ.

ಗುಲಾಂ ಖಾದಿರ್ ಭಟ್ ಅವರ ಪುತ್ರ ಗುಲ್ಜಾರ್ ಅಹಮದ್ ಭಟ್ ಎಂಬ ವ್ಯಕ್ತಿ ಧಾರ್ಮಿಕ ಪ್ರವಚನಗಳನ್ನು ನೀಡುತ್ತಿದ್ದ. ಆತನ ಶಾಲೆಗೆ ಶಿಕ್ಷಣಾರ್ಥಿಗಳಾಗಿ ನಾವೂ ಸೇರಿದ್ದೆವು. ಆದರೆ ಅವಯ್ಯ ನಮ್ಮ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಬಾಧಿತ ಮಕ್ಕಳು ನಾಲ್ವರೂ ಪೊಲೀಸರಿಗೆ ಜಂಟೀ ದೂರು ನೀಡಿದ್ದರು. ಅದರನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಗುಲ್ಜಾರ್ ಅಹಮದ್ ಭಟ್ ನನ್ನು ಬಂಧಿಸಿದ್ದಾರೆ.

ಬಡಗಾಂ ಜಿಲ್ಲಾ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟರ್ ಎದುರು ಸಹ ಬಾಧಿತರ ದೂರನ್ನು ದಾಖಲಿಸಿಕೊಳ್ಳಲಲಾಗಿದೆ. ಅಲ್ಲಿಯೂ ಅವರು ಅದನ್ನೇ ಹೇಳಿದ್ದು, ಅಪ್ರಾಪ್ತ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ನಾಲ್ಕೂ ಮಕ್ಕಳು ಜಿಲ್ಲೆಯ ವಿವಿಧ ಭಾಗಗಳಲ್ಲಿ ವಾಸವಾಗಿದ್ದಾರೆ. ಗುಲ್ಜಾರ್ ಅಹಮದ್ ಭಟ್ 1993ರಲ್ಲಿ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾನೆ.

ಪೊಲೀಸ್ ತನಿಖೆಯಿಂದ ತಿಳಿದುಬಂದ ಅಂಶವೆಂದರೆ ಗುಲ್ಜಾರ್ ಅಹಮದ್ ಭಟ್ ಅನೇಕ ವರ್ಷಗಳಿಂದ ಈ ಧಾರ್ಮಿಕ ಶಾಲೆಯನ್ನು ನಡೆಸುತ್ತಿದ್ದಾನೆ. ಇದೊಂದು ವಸತಿ ಶಾಲೆಯಾಗಿದ್ದು, ವಿದ್ಯಾರ್ಥಿಗಳಿಗೆ ಊಟ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಆತನ ನೋಡಿಕೊಳ್ಳುತ್ತಾನೆ. ಶಾಲೆಯಲ್ಲಿ ನೂರಾಋಉ ಹೆಣ್ಣು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರು ಹೆಚ್ಚಿನ ತನಿಖೆಗೆ ಮುಂದಾಗಿದ್ದು, ಶಾಲೆಯಲ್ಲಿ ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದವೇ ಎಂದು ವಿಚಾರಿಸಲಾಗುತ್ತಿದೆ. ಶಾಲೆಯ ವಿದ್ಯಾರ್ಥಿನಿಯರನ್ನಷ್ಟೇ ಅಲ್ಲ. ಸುತ್ತಮುತ್ತಲ ಮಹಿಳೆಯರನ್ನೂ ಈತ ಪುಸಲಾಯಿಸಿ, ಅವರ ಮೇಲೆ ಅತ್ಯಾಚಾರವೆಸಗಿರುವುದಾಗಿ ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+