ದನಿ ಎತ್ತಲಾಗದ ಅಬಲೆಯರ ಮೇಲೆ ಅತ್ಯಾಚಾರ

ಲೈಂಗಿಕ ದೌರ್ಜನ್ಯ ನಡೆದಿರುವುದು ಜೈಪುರದ ವಸತಿ ಚಿಕಿತ್ಸಾ ಕೇಂದ್ರವೊಂದರಲ್ಲಿ. ಅಪ್ರಾಪ್ತ ವಯಸ್ಕ ಹುಡುಗಿಯರು ಚಿಕಿತ್ಸಾ ಕೇಂದ್ರದಲ್ಲಿ ವಸತಿಯಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸಾ ಕೇಂದ್ರದ ವಾರ್ಡನ್, ಅಕೌಂಟಂಟ್, ಆತನ ಹೆಂಡತಿ, ಭದ್ರತಾ ಸಿಬ್ಬಂದಿ ಮತ್ತು ಒಬ್ಬ ಆಡಳಿತ ಅಧಿಕಾರಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.
ಚಿಕಿತ್ಸಾ ಕೇಂದ್ರವನ್ನು ಆವಾಜ್ ಫೌಂಡೇಷನ್ ಎನ್‌ಜಿಓ ಮತ್ತು ರಾಜಸ್ತಾನದ ಸಮಾಜ ಕಲ್ಯಾಣ ಇಲಾಖೆಯ ಸಹಾಯದೊಂದಿಗೆ ನಡೆಸುತ್ತಿದೆ. ಆವಾಜ್ ಅಂದ್ರೆ ಧ್ವನಿ. ಆದರೆ, ಇಲ್ಲಿ ದನಿಯನ್ನೇ ಎತ್ತಲಾಗದ ಅಮಾಯಕ ಮತ್ತು ಅನಾಥ ಹುಡುಗಿಯರನ್ನು ಕಾಮತೃಷೆಗೆ ಬಳಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಕಳೆದ ಒಂದು ವರ್ಷದಿಂದ ಹುಡುಗಿಯರನ್ನು ಲೈಂಗಿಕವಾಗಿ ದುರ್ಬಳಸಿಕೊಳ್ಳಲಾಗುತ್ತಿತ್ತು ಮತ್ತು ಕಳೆದ ತಿಂಗಳು ಇಬ್ಬರ ಮೇಲೆ ಅತ್ಯಾಚಾರ ಎಸಗಲಾಗಿದೆ. ಕೊನೆಗೆ ಲೈಂಗಿಕ ಕಿರುಕುಳವನ್ನು ಸಹಿಸಿಕೊಳ್ಳಲಾಗದೆ ಹುಡುಗಿಯರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸಿಕ್ಕ ತಕ್ಷಣ ಪೊಲೀಸರು ವಿವಿಧ ಪ್ರದೇಶದ ಮೇಲೆ ದಾಳಿ ಮಾಡಿ ಐವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಜೈಪುರದ ಪೊಲೀಸ್ ಆಯುಕ್ತ ಬಿಜು ಜಾರ್ಜ್ ಜೋಸೆಫ್ ಹೇಳಿದ್ದಾರೆ.












Click it and Unblock the Notifications