ಭಾರತಕ್ಕೆ ಮೋದಿ ಏಕೆ ಮುಖ್ಯ: ಇನ್ಫಿ ಮೂರ್ತಿ

ಬಿಜೆಪಿ ನಾಯಕ ಮೋದಿ ಅವರ ಕಾರ್ಯಕ್ಷಮತೆ, ಉದ್ಯಮಿಗಳ ಜೊತೆಗಿನ ಒಡನಾಟ, ಸರ್ವಾಂಗೀಣ ಅಭಿವೃದ್ಧಿ ಎಲ್ಲರಿಗೂ ಮಾದರಿಯಾಗಿದೆ. ಈ ರೀತಿ ಆಡಳಿತಗಾರರು ಎಲ್ಲಾ ರಾಜ್ಯಕ್ಕೂ ಬೇಕು ಎಂದು ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಮೋದಿಯಂಥ ನಾಯಕರಿದ್ದರೆ ದೇಶವನ್ನು ಅಭಿವೃದ್ಧಿಪಡಿಸಲು ನಮ್ಮಂಥ ಸಂಸ್ಥೆಗಳಿಗೆ ಅನುಕೂಲವಾಗುತ್ತದೆ. ಮೂಲ ಸೌಕರ್ಯ ಕೊರತೆ ಅನುಭವಿಸಿ ಹಲವಾರು ರಾಜ್ಯಗಳಲ್ಲಿ ಐಟಿ ಕಂಪನಿಗಳು ಕಷ್ಟ ಅನುಭವಿಸುತ್ತಿವೆ. ಮೇಲ್ಮಟ್ಟದಿಂದ ಕೆಳಮಟ್ಟದವರೆಗೂ ಭ್ರಷ್ಟಾಚಾರ ತುಂಬಿದ್ದರೆ ಅಭಿವೃದ್ಧಿ ಕಾರ್ಯ ಕುಂಠಿತಗೊಳ್ಳದೆ ಮತ್ತೇನಾಗುತ್ತದೆ ಎಂದು ನಾರಾಯಣ ಮೂರ್ತಿ ಪ್ರಶ್ನಿಸಿದ್ದಾರೆ.
ಎಕಾನಾಮಿಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಮೂರ್ತಿ ಅವರು ಮೋದಿ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯ ವ್ಯಕ್ತಪಡಿಸಿದರು. ಮೋದಿ ಹಾಗೂ ರಾಹುಲ್ ನಡುವೆ ಪ್ರಧಾನಿಯಾಗಲು ಯಾರು ಸೂಕ್ತ? ಎಂಬ ಪ್ರಶ್ನೆಗೆ ಜಾಣತನದಿಂದ ಉತ್ತರಿಸಿದ ಮೂರ್ತಿ, ದೇಶದ ಸಮಗ್ರ ಅಭಿವೃದ್ಧಿಯನ್ನು ಸಾಕಾರಗೊಳಿಸುವ ಸಾಮರ್ಥ್ಯ ಮೋದಿ ಹಾಗೂ ರಾಹುಲ್ ಇಬ್ಬರಿಗೂ ಇದೆ ಎಂದರು.
NaMo is one of the finest administrators of the country and the nation is witness to his excellence: Infosys founder NR Narayana Murthy
— India Today (@IndiaToday) May 13, 2013
Why Narendra Modi crucial for India, reveals Narayana Murthy - Oneindia News www.oneindia.com/2013/05/13/why… via @oneindia
— Dr.Sudhakar Reddy S(@sudhakarreddys) May 14, 2013
N.R.Narayana Murthy’s observation on Narendra Modi and Gujarat under him (Video) deshgujarat.com/2013/05/14/n-r…
— DeshGujarat (@DeshGujarat) May 13, 2013
ಆದರೆ, ಯುಪಿಎ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿದ ಮೂರ್ತಿ, ಯುಪಿಎ ಮೈತ್ರಿ ಸರ್ಕಾರ ನಡೆಸುತ್ತಿದೆ ಎಂಬುದು ತಿಳಿದಿದೆ. ಸೋನಿಯಾ ಹಾಗೂ ಮನಮೋಹನ್ ಸಿಂಗ್ ಅವರಿಬ್ಬರು ನಾಯಕರಾಗಿ ಆಡಳಿತ ಮುನ್ನಡೆಸುತ್ತಿದ್ದಾರೆ.
ಪಕ್ಷಕ್ಕೆ ಸೋನಿಯಾ ಅಧಿನಾಯಕಿಯಾದರೆ, ಸಿಂಗ್ ಸರ್ಕಾರ ನಡೆಸುತ್ತಿದ್ದಾರೆ. ಗೊಂದಲ ಇನ್ನೂ ಪರಿಹಾರವಾಗಿಲ್ಲ. ತ್ವರಿತವಾಗಿ ನಿರ್ಣಯಗಳನ್ನು ತೆಗೆದುಕೊಳ್ಳುವಲ್ಲಿ ಯುಪಿಎ ಸರ್ಕಾರ ವಿಫಲವಾಗಿದೆ. ಇದರ ಪರಿಣಾಮ ಜನತೆ ಬೇಸತ್ತಿದ್ದಾರೆ ಎಂದರು.












Click it and Unblock the Notifications