ಬಿಜೆಪಿ ಗೆದ್ದಿದ್ದರೆ ಆಚ್ಚರಿಯಿಂದ ಕುಣಿಯುತ್ತಿದ್ದೆ

LK Advani: Karnataka BJP win would have surprised me
ನವದೆಹಲಿ, ಮೇ.13: ಈ ಬಾರಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದ್ದರೆ ಅದಕ್ಕಿಂತ ದೊಡ್ಡ ಅಚ್ಚರಿ ಮತ್ತೊಂದು ಕಾಣಲು ಸಾಧ್ಯವಿರುತ್ತಿರಲಿಲ್ಲ. ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಮಾಡಿಕೊಂಡರೆ ಅಂಥ ಪಕ್ಷಗಳನ್ನು ಜನ ತಿರಸ್ಕರಿಸುತ್ತಾರೆ ಎಂಬುದಕ್ಕೆ ಬಿಜೆಪಿ ಸೋಲು ದೊಡ್ಡ ಉದಾಹರಣೆ. ಇದು ಕಾಂಗ್ರೆಸ್ ಮತ್ತು ಬಿಜೆಪಿ ಎರಡಕ್ಕೂ ಎಚ್ಚರಿಕೆಯ ಗಂಟೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಕರ್ನಾಟಕದಲ್ಲಿ ಬಿಜೆಪಿ ಸೋಲು ನನಗೆ ಅಚ್ಚರಿ ತಂದಿಲ್ಲ. ನಿರೀಕ್ಷಿತವಾಗಿತ್ತು. ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ಸಮಯಸಾಧಕತನ ಅನುಸರಿಸಿದ್ದರಿಂದ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಗೆ ಈ ಸ್ಥಿತಿ ಬಂದಿತು. ಅವಕಾಶವಾದಿ ರಾಜಕೀಯ ಎಂದಿಗೂ ಅಪಾಯ ಇದರಿಂದ ಬಿಜೆಪಿ ದೊಡ್ಡ ಪಾಠ ಕಲಿಯಬೇಕಿದೆ ಎಂದು ಅಡ್ವಾಣಿ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿ ಎಂದಿಗೂ ದೂರ ಇಟ್ಟಿರಲಿಲ್ಲ. ಅವರನ್ನು ಪಕ್ಷದಿಂದ ಯಾರೂ ಹೊರ ಹಾಕಲಿಲ್ಲ. ಅವರನ್ನು ಸಂತೈಸಲು ಅವರ ತಪ್ಪುಗಳನ್ನು ಕಡೆಗಣಿಸುವ ಪ್ರಯತ್ನಗಳು ನಡೆದಿದ್ದು ನಿಜ. ಇಂಥ ವಿಚಾರಗಳಲ್ಲಿ ಪಕ್ಷವು ಕಠಿಣ ಕ್ರಮ ಕೈಗೊಳ್ಳದೆ ಉದಾಸೀನತೆ ತೋರಿದ್ದು ಪಕ್ಷಕ್ಕೆ ಮುಳುವಾಯಿತು.

ದಕ್ಷಿಣ ಭಾರತದ ಏಕೈಕ ಸರ್ಕಾರವನ್ನು ಸ್ಥಾಪಿಸಿದೆ ಎನ್ನುತ್ತಿದ್ದ ವ್ಯಕ್ತಿ ಬಿಜೆಪಿ ಹಾಗೂ ಜನರ ಮುಂದೆ ತಲೆತಗ್ಗಿಸುವಂತಾಯಿತು. ಯಡಿಯೂರಪ್ಪ ಅವರೇ ಹೊಸ ಪಕ್ಷ ಕಟ್ಟಲು ಬಿಜೆಪಿಯಿಂದ ಹೊರ ನಡೆದರು ಎಂದು ಆಡ್ವಾಣಿ ತಮ್ಮ ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ.

ನಿರೀಕ್ಷೆ ಹುಸಿಯಾಯಿತು: ನಮ್ಮ ಪಕ್ಷದೊಳಗೆ ನಡೆದ ಕೆಲವು ಆಂತರಿಕ ಭಿನ್ನಾಭಿಪ್ರಾಯ, ಗೊಂದಲ, ಭಿನ್ನಮತದಿಂದ ಚುನಾವಣೆಗೂ ಮುನ್ನವೇ ನಾವು ಸೋತಿದ್ದೆವು. ಈ ಸೋಲು ಪಕ್ಷದ ನಾಯಕರಿಗೆ ಯಾವ ಮುಜುಗರವನ್ನೂ ತಂದಿಲ್ಲ, ಅಚ್ಚರಿ ಉಂಟು ಮಾಡಿಲ್ಲ ಎಂದು ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ನಂತರ ಅಡ್ವಾಣಿ ಹೇಳಿದರು. ಐದು ವರ್ಷಗಳ ಅವಧಿಯಲ್ಲಿ ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವಲ್ಲಿ ವಿಫಲರಾದೆವು.

ಎಂದಿಗೂ ಯಾವ ಸಂದರ್ಭದಲ್ಲೂ ಪಕ್ಷವನ್ನು ಏಕ ವ್ಯಕ್ತಿ ಕೇಂದ್ರವನ್ನಾಗಿ ಮಾಡಬಾರದು. ಯಾವುದೇ ಪಕ್ಷ ಕಾರ್ಯಕರ್ತರ ಆಧಾರಿತ ಪಕ್ಷವಾಗಿರಬೇಕು. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದ್ದ ನಾವು ಜನರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಈ ಚುನಾವಣೆಯ ಸೋಲು ಮುಂದಿನ ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಮತ್ತೆ ಸಂಘಟಿಸಬೇಕಾದ ಅಗತ್ಯವಿದೆ. ಕಾರ್ಯಕರ್ತರು ದೃತಿಗೆಡಬಾರದು. ವಿಷಯ ಆಧಾರಿತದ ಮೇಲೆ ಲೋಕಸಭೆ ಚುನಾವಣೆಯಲ್ಲಿ ಪ್ರಚಾರ ನಡೆಯುವುದರಿಂದ ಯುಪಿಎ ಸರ್ಕಾರದಲ್ಲಿನ ಹಗರಣಗಳನ್ನು ಜನತೆಯ ಮುಂದಿಟ್ಟು ಮತಯಾಚಿಸಲಿದ್ದೇವೆ ಎಂದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+