242 ಕೋಟಿ ಕಳ್ಳತನದ ಮೂಲ ಪುಣೆ ಮತ್ತು ಬೆಂಗಳೂರು

million
ಮುಂಬೈ, ಮೇ 13 : ಅಮೆರಿಕದಲ್ಲಿ ಬೆಳಕಿಗೆ ಬಂದಿದ್ದ 242 ಕೋಟಿಯ ಕಳ್ಳತನಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿವೆ. ಎಟಿಎಂ ಕಾರ್ಡ್‌ಗಳ ಮಾಹಿತಿ ಕದ್ದಿದ್ದು ಬೆಂಗಳೂರು ಹಾಗೂ ಪುಣೆಯಲ್ಲಿನ ಕಂಪನಿಗಳಿಂದ ಎಂಬ ಭಯಾನಕ ಮಾಹಿತಿ ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು ಮೂಲದ ಎನ್‌ಸ್ಟೇಜ್ ಮತ್ತು ಪುಣೆ ಮೂಲದ ಎಲೆಕ್ಟ್ರಾ ಕಾರ್ಡ್ ಸಿಸ್ಟಮ್ಸ್ ಕಂಪನಿಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿ ಗ್ರಾಹಕರ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕಳ್ಳರು ಪಡೆದಿದ್ದರು. ಇದದ ಆಧಾರರ ಮೇಲೆ ಭಾರತದ ಬ್ಯಾಂಕ್ ಗಳ ಹಣವನ್ನು ಕದ್ದಿದ್ದರು ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಪ್ರಕರಣವೇನು : ಡೆಬಿಟ್ ಕಾರ್ಡ್‌ಗಳ ಮಾಹಿತಿಯನ್ನು ಹ್ಯಾಕ್ ಮಾಡಿ 242 ಕೋಟಿಯನ್ನು ಕದ್ದಿರುವ ಜಾಲವೊಂದನ್ನು ನ್ಯೂಯಾರ್ಕ್ ಪೊಲೀಸರು ಕೆಲವು ದಿನಗಳ ಹಿಂದೆ ಭೇದಿಸಿದ್ದರು. ಇದನ್ನು ಶತಮಾನದ ಅತಿ ದೊಡ್ಡ ಕಳ್ಳತನ ಎಂದೇ ಭಾವಿಸಲಾಗಿತ್ತು.

ವಿಶ್ವಾದ್ಯಂತ 27ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಈ ಜಾಲ ಕಾರ್ಯನಿರ್ವಹಿಸುತ್ತಿದೆ ಎಂದು ತನಿಖೆ ವೇಳೆ ಬಹಿರಂಗೊಂಡಿತ್ತು. ನಕಲಿ ಮ್ಯಾಗ್ನೆಟಿಕ್ ಸ್ವೈಪ್ ಕಾರ್ಡ್‌ಗಳನ್ನು ಬಳಸಿ ವಿವಿಧ ರಾಷ್ಟ್ರಗಳ ಎಟಿಎಂಗಳಿಂದ 242 ಕೋಟಿಯನ್ನು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿತ್ತು.

ಕ್ರೆಡಿಟ್ ಕಾರ್ಡ್ ಪ್ರೊಸೆಸ್ಸಿಂಗ್ ಸಂಸ್ಥೆಗಳನ್ನು ಹ್ಯಾಕ್ ಮಾಡುವ ಮೂಲಕ ಕಳ್ಳರು ಎಟಿಎಂಗಳಿಂದ ಹಣ ದೋಚುತ್ತಿದ್ದರು. ಕ್ಷಿಪ್ರಗತಿಯ ಕಾರ್ಯಚರಣೆ ನಡಸುತ್ತಿದ್ದ ಇವರು ಕೇವಲ 10 ಗಂಟೆಗಳಲ್ಲಿ 215 ಕೋಟಿಯನ್ನು ಕೊಳ್ಳೆಹೊಡೆದಿದ್ದರು ಎಂದು ಆರೋಪಿಸಲಾಗಿತ್ತು.

ಕಳ್ಳರು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲು ಬಳಸಿದ್ದು ಭಾರತ ಹಾಗೂ ಅಮೆರಿಕದ 2 ಕಾರ್ಡ್ ಪ್ರೊಸೆಸಿಂಗ್ ಸಂಸ್ಥೆಗಳಿಂದ ಎಂದು ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 8 ಮಂದಿಯನ್ನು ಬಂಧಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿಯು ಈಗಾಗಲೇ ಕೊಲೆಗೀಡಾಗಿದ್ದು ಪ್ರಕರಣದ ಬಗ್ಗೆ ತೀವ್ರ ಕುತೂಹಲ ಹುಟ್ಟುಹಾಕಿದೆ. ನ್ಯೂಯಾರ್ಕ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+