ಸಿದ್ದು ಸುದ್ದಿಗೋಷ್ಠಿಯಲ್ಲಿ ಬಡವರ ಬದುಕು ಬಂಗಾರವಾಯ್ತು

'ಸಮಾಜವಾದವನ್ನು ಜಗತ್ತಿಗೆ ಸಾರಿದ ಬಸವಣ್ಣನ ಜಯಂತಿಯಂದೇ ನಾನು ಅಧಿಕಾರಿ ವಹಿಸಿಕೊಂಡಿರುವು ಕಾಕತಾಳೀಯ. ಆದರೆ ಅದು ನನಗೆ ಅತೀವ ಸಂಸತ ತಂದಿದೆ' ಎಂದು ಮಾತಿಗಿಳಿದ ಸಿದ್ದು, 'ತಮ್ಮ ನೂತನ ಸರಕಾರದ ಮೊದಲ ದಿನ ಮೊದಲ ನಿರ್ಣಯವಾಗಿ ಒಟ್ಟಾರೆಯಾಗಿ ರಾಜ್ಯದ 1 ಕೋಟಿ 38 ಲಕ್ಷ ಜನರಿಗೆ 4,409 ಕೋಟಿ ರೂ. ಪರಿಹಾರ ನೀಡಲಾಗುವುದು' ಎಂದು ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ಣಯಗಳು:
* ಐದು ವರ್ಷಗಳ ಸರಕಾರದ ಅವಧಿಗೆ ಕಾಯದೆ, ವಿಳಂಬ ಮಾಡದೆ ತಮ್ಮ ಪಕ್ಷವು ಚುನಾವಣೆ ವೇಳೆ ಪ್ರಣಾಳಿಕೆಯಲ್ಲಿ ನೀಡಿದ್ದ ಅಷ್ಟೂ ಭರವಸೆಗಳನ್ನು ಈಡೇರಿಸುತ್ತೇವೆ.
* ಮೊಟ್ಟ ಮೊದಲ ನಿರ್ಣಯವಾಗಿ BPL ಪಡಿತರ ಚೀಟಿ ಹೊಂದಿರುವ ಬಡ ಕುಟುಂಬವೊಂದಕ್ಕೆ 1 ರೂಪಾಯಿಯಂತೆ ತಿಂಗಳಿಗೆ 30 ಕೆಜಿ ಅಕ್ಕಿಯನ್ನು ಮುಂದಿನ ಜೂನ್ ತಿಂಗಳಿಂದಲೇ ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.
* ಹಿಂದಿನ ಯಡಿಯೂರಪ್ಪ ಕಾಲದಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ಅಷ್ಟೇ ಅಲ್ಲ. ಸಹಾಯಧನ ಪ್ರಮಾಣವನ್ನು ಲೀಟರಿಗೆ 2 ರೂ. ನಿಂದ 4 ರೂ. ಗೆ ಏರಿಸಲಾಗಿದ್ದು, ಇಂದಿನಿಂದಲೇ ಜಾರಿಗೆ ಬರುತ್ತದೆ. ಇದರಿಂದ 7.5 ಲಕ್ಷ ಹೈನುಗಾರರಿಗೆ ಪ್ರಯೋಜನವಾಗಲಿದೆ.
* ಆಶ್ರಯ ಯೋಜನೆಯಡಿ ಬಡವರಿಗಾಗಿ ಮನೆ ನಿರ್ಮಾಣಕ್ಕೆ ನೀಡುವ ಸಹಾಯಧನವನ್ನು ರೂ. 75 ಸಾವಿರದಿಂದ 1.2 ಲಕ್ಷಕ್ಕೆ ಏರಿಸಲಾಗಿದೆ. ಕಟ್ಟಡ ಸಾಮಗ್ರಿ ದರ ಹೆಚ್ಚಾಗಿರುವುದೇ ಇದಕ್ಕೆ ಕಾರಣ. ಇದೂ ತಕ್ಷಣದಿಂದಲೇ ಜಾರಿಗೆ ಬರುತ್ತದೆ. ಈ ವರ್ಷ 3 ಲಕ್ಷ ಮನೆ ನಿರ್ಮಾಣ ಗುರಿಯಿದೆ.
* ಅಂಬೇಡ್ಕರ್ ಪರಿಶಿಷ್ಟ ಜಾತಿ/ ವರ್ಗ ಅಭಿವೃದ್ಧಿ ನಿಗಮದಲ್ಲಿ ಈಗಾಗಲೇ ಫಲಾನುಭವಿಗಳು ಪಡೆದಿರುವ ಅಷ್ಟೂ ಸಾಲವನ್ನು ಮನ್ನಾ ಮಾಡುತ್ತಿದ್ದೇನೆ.
* ದೇವರಾಜು ಅರಸು ನಿಗಮದ ಸಾಲ ಮನ್ನಾ
* ಭಾಗ್ಯಜ್ಯೋತಿ, ಕುಠೀರ ಜ್ಯೋತಿ ಯೋಜನೆಯಡಿ ಫಲಾನುಭವಿ ಗ್ರಾಮೀಣರು ಉಳಿಸಿಕೊಂಡಿರುವ ಎಲ್ಲ ವಿದ್ಯುತ್ ಬಿಲ್ಲುಗಳ ಬಾಕಿ ಇಂದಿನಿಂದಲೇ ಮನ್ನಾ.
* ಗೋಹತ್ಯೆ ನಿಷೇಧ ಕಾಯಿದೆ ಸಂಬಂಧ ಯಾವುದೇ ಗೊಂದಲಕ್ಕೆ ಅವಕಾಶ ನೀಡದಂತೆ 1964 ಕಾಯಿದೆಯಂತೆ ಮುಂದುವರಿಯುತ್ತೇವೆ.
(ಏನಿದು ಗೂಹತ್ಯೆ ನಿಷೇಧ ರಾಜಕೀಯ: 1964ರ ಗೋಹತ್ಯೆ ನಿಷೇಧ ಕಾಯಿದೆಯಲ್ಲಿ ರೋಗಗ್ರಸ್ತ, ನಿರುಪಯೋಗಿ ಗೋವುಗಳನ್ನು ಮಾತ್ರವೇ ಹತ್ಯೆ ಮಾಡುವುದಕ್ಕೆ ಅನುಮತಿ ನೀಡಲಾಗಿತ್ತು. ಸುಸ್ಥಿತಿಯಲ್ಲಿರುವ ಗೋವುಗಳನ್ನು ಸಾಯಿಸಬಾರದು ಎಂದಿತ್ತು. ಆದರೆ ಹಿಂದಿನ ಬಿಜೆಪಿ ಸರಕಾರ ಎಲ್ಲ ರೀತಿಯ ಗೂವುಗಳ ವಧೆಯನ್ನು ನಿಷೇಧಿಸಿತ್ತು. ಅದನ್ನು ವಾಪಸ್ ಪಡೆಯುವುದಾಗಿ ಸಿದ್ದು ಈಗ ಸ್ಪಷ್ಟಪಡಿಸಿದ್ದಾರೆ.)
* ನ್ಯಾ. ಸಂತೋಷ್ ಹೆಗ್ಡೆ ಅವರು ಈ ಹಿಂದೆ ಸಲ್ಲಿಸಿರುವ ಲೋಕಾಯುಕ್ತ ವರದಿ ಸಂಪೂರ್ಣವಾಗಿ ಅಧ್ಯಯನ ಮಾಡಿ ಕಾನೂನು ಇಲಾಖೆಯ ಸಲಹೆಯ ಮೇರೆಗೆ ಮುಂದುವರಿಯುತ್ತೇವೆ.
* ನಿಗಮ/ ಮಂಡಳಿ ಅಧ್ಯಕ್ಷರುಗಳು ಹೊಸ ಸರಕಾರ ಬಂದ ಹಿನ್ನೆಲೆಯಲ್ಲಿ ತಕ್ಷಣ ರಾಜೀನಾಮೆ ಸಲ್ಲಿಸುತ್ತಾರೆ. ಅದಾದನಂತರ ಮುಂದಿನ ನೇಮಕಾತಿಗಳನ್ನು ಮಾಡುತ್ತೇವೆ.
* BBMP ವ್ಯಾಪ್ತಿಯ ಮನೆ ತೆರಿಗೆಯ ರಿಯಾಯಿತಿ ಅವಧಿ ಜೂ. 30ರವರೆಗೆ ವಿಸ್ತರಣೆ. (ಮನೆ ತೆರಿಗೆ ಕಟ್ಟಿದವರಿಗೆ ಶೇ. 5 ರಿಬೇಟ್ ನೀಡುವ ಯೋಜನೆ)
* ಹಿಂದಿನ ಸರಕಾರದ ಜನಪರ ಯೋಜನೆಗಳನ್ನು ಮುಂದುವರಿಸುತ್ತೇವೆ. ಜನಪರವಲ್ಲದ ಖಜಾನೆಗೆ ಹೊರೆಯಾಗುವ ಯೋಜನೆಗಳನ್ನು ಮುಲಾಜಿಲ್ಲದೆ ಕೈಬಿಡುತ್ತೇವೆ.












Click it and Unblock the Notifications