ಖರ್ಗೆಗೆ ಸೀಟು ಸಿಗಬೇಕಿತ್ತು, ಆದ್ರೆ ನಾನೇನ್ಮಾಡ್ಲಿ

ನಾನು ಕೂಡಾ ದಲಿತನೇ, ಯಾವುದೇ ಒಂದು ಜನಾಂಗ, ಸಮುದಾಯಕ್ಕೆ ನೋವಾಗದಂತೆ ರಾಜ್ಯಭಾರ ಮಾಡುವ ಭರವಸೆಯನ್ನು ನೀಡುತ್ತೇನೆ. ಎಲ್ಲಾ ಸಮುದಾಯದ ಸಂರಕ್ಷಣೆ, ಅಭಿವೃದ್ಧಿ ನನ್ನ ಗುರಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ತೀರ್ಮಾನಕ್ಕೆ ಬದ್ಧನಾಗಿ ನಾನು ಸಿಎಂ ಸ್ಥಾನವನ್ನು ಪಡೆದಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ಚಾಮುಂಡಿ ಬೆಟ್ಟ ಭೇಟಿ: ಬೆಟ್ಟದ ತಾಯಿ ಚಾಮುಂಡೇಶ್ವರಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದೇನೆ. ರಾಜ್ಯದಲ್ಲಿ ಒಳ್ಳೆ ಮಳೆ ಬೆಳೆಯಾಗಲಿ, ರಾಜ್ಯದಲ್ಲಿ ಸೌಹಾರ್ದ ವಾತಾವರಣ ಇರಲಿ. ಪ್ರಾಮಾಣಿಕವಾಗಿ ರಾಜ್ಯ ನಡೆಸುವ ಶಕ್ತಿ ಕೊಡು ತಾಯಿ ಎಂದು ಬೇಡಿಕೆ ಸಲ್ಲಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.
ರೈತರ ನೋವು ನಲಿವಿಗೆ ಸ್ಪಂದಿಸುವುದು ನನ್ನ ಮೊದಲ ಆದ್ಯತೆ, ರಾಜ್ಯದ ವಿದ್ಯುತ್ ಸಮಸ್ಯೆ ಅದಕ್ಕೆ ಆಗಬೇಕಾದ ತುರ್ತು ಪರಿಹಾರ ಕಾರ್ಯ, ಕುಡಿಯುವ ನೀರಿನ ಸಮಸ್ಯೆ ಮುಂದಿನ ಆದ್ಯತೆಯಾಗಿರುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯಂತೆ ಭರವಸೆ ಈಡೇರಿಸುವ ಪ್ರಯತ್ನ ಮಾಡಲಾಗುವುದು. ಆದ್ಯತೆ ಮೇರೆಗೆ ವರ್ಷಕ್ಕೆ ಒಂದು ಭರವಸೆಯನ್ನು ಸಂಪೂರ್ಣ ಈಡೇರಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ದೀನ ದಲಿತರನ್ನು ಮೇಲ್ಪಂಕ್ತಿಗೆ ತರುವುದು ನನ್ನಗುರಿ, ಸಮಾಜದ ಎಲ್ಲಾ ವರ್ಗದ ಜನರನ್ನು ಸಮಚಿತ್ತದಿಂದ ಕಾಣುತ್ತಾ ರಾಜ್ಯವನ್ನು ಸುಸ್ಥತಿಗೆ ತರಲು ಯತ್ನಿಸುವುದಾಗಿ ಸಿದ್ದರಾಮಯ್ಯ ಹೇಳಿದರು.
ಸಾಹಿತಿಗಳ ಭೇಟಿ: ಸಿಎಂ ಆಗಿ ನಿಯೋಜನೆಗೊಂಡ ನಂತರ ಮೊದಲಿಗೆ ದೇಗುಲಗಳಿಗೆ ಭೇಟಿ ಕೊಡುವ ಸಂಪ್ರಾದಯವನ್ನು ಮುರಿದು ಸಾಹಿತಿಗಳ ಮನೆಗಳಿಗೆ ತೆರಳಿ ಸಿದ್ದರಾಮಯ್ಯ ಅಚ್ಚರಿ ಮೂಡಿಸಿದ್ದರು. ಹಿರಿಯ ಸಾಹಿತಿ ರಾಷ್ತ್ರಕವಿ ಜಿಎಸ್ ಶಿವರುದ್ರಪ್ಪ ಹಾಗೂ ಜ್ಞಾನಪೀಠ ಪ್ರಶಸ್ತಿ ವಿಜೇತ ಯು.ಆರ್ ಅನಂತಮೂರ್ತಿ ಅವರ ಮನೆಗೆ ಸಿದ್ದರಾಮಯ್ಯ ಅವರು ಈ ಮೊದಲು ಭೇಟಿ ನೀಡಿದ್ದರು.
ಭಾನುವಾರ ಕೂಡಾ ಸಾಹಿತಿಗಳ ಭೇಟಿ ಮುಂದುವರೆಸಿದ್ದಾರೆ. ಮೈಸೂರಿನ ಕುವೆಂಪುನಗರದಲ್ಲಿ ನೆಲೆಸಿರುವ ಸಾಹಿತಿ ದೇವನೂರು ಮಹಾದೇವ ಅವರನ್ನು ಭೇಟಿ ಮಾಡಿ ಸಿದ್ದರಾಮಯ್ಯ ಅವರು ಮಾತುಕತೆ ನಡೆಸಿದರು.
ದೇವನೂರು ಮಹಾದೇವ ನಾನು 30-40 ವರ್ಷಗಳ ಸ್ನೇಹಿತ, ಹೀಗಾಗಿ ನೋಡಿಕೊಂಡು ಹೋಗಲು ಬಂದಿದ್ದೇನೆ ಅಷ್ಟೇ ಎಂದು ಸಿದ್ದರಾಮಯ್ಯ ಹೇಳಿದರು.
ನಂತರ ಮಾತನಾಡಿದ ಸಾಹಿತಿ ದೇವನೂರು ಅವರು, 'ರಾಜ್ಯ ದುಃಸ್ಥಿತಿಗೆ ಇಳಿದಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆ ಧಕ್ಕೆ ತರುವ ಭ್ರಷ್ಟಾಚಾರ, ಗಣಿಗಾರಿಕೆ ನಿರ್ಮೂಲನೆ ಆಗಬೇಕಿದೆ. ನೊಂದವರಿಗೆ ತಾಯಿ ರೀತಿ, ಬಲ್ಲಿದರಿಗೆ ತಂದೆ ರೀತಿಯಲ್ಲಿ ಶಿಕ್ಷೆ ನೀಡುತ್ತಾ ರಾಜ್ಯವನ್ನು ಉತ್ತಮವಾಗಿ ನಡೆಸಿಕೊಂಡು ಹೋಗುವ ಭರವಸೆ ಇದೆ ಎಂದರು.












Click it and Unblock the Notifications