ಕರ್ನಾಟಕ ಸಚಿವ ಸ್ಥಾನ : ಸಿಕ್ಕಿದ್ರೆ ಸೀರುಂಡೆ
ಬೆಂಗಳೂರು, ಮೇ.12: ಸಚಿವ ಸಂಪುಟ ರಚನೆ, ವಿಸ್ತರಣೆ ತುಂಬಾ ಕಷ್ಟದ ಕೆಲಸ ಎಂದು ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಸಿದ್ದರಾಮಯ್ಯ ಅವರಿಗೆ ಸಿಕ್ಕಿರುವುದರಿಂದ ಉಳಿದ 33 ಸ್ಥಾನಗಳಿಗೆ ಒಮ್ಮೆಗೆ ಎಲ್ಲರನ್ನು ಆಯ್ಕೆ ಮಾಡುವ ಹಿತವಾದ ನೋವನ್ನು ಸಿದ್ದರಾಮಯ್ಯ ಅನುಭವಿಸುತ್ತಿದ್ದಾರೆ.
ಸಚಿವ ಸಂಪುಟ ಸ್ಥಾನಕ್ಕೆ ಪೈಪೋಟಿ ತೀವ್ರವಾಗಿದ್ದರೂ ಪ್ರಬಲ ಆಕಾಂಕ್ಷಿಗಳಿಗೆ ಸ್ಥಾನ ಸಿಗುವ ಭರವಸೆ ಈಗಾಗಲೇ ಸಿಕ್ಕಿದೆ. ನಿಯೋಜಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರ ಜೊತೆ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಮುಗಿಸಿದ್ದಾರೆ ಎಂಬ ಸುದ್ದಿ ಇದೆ. ಪಟ್ಟಿ ಅಂತಿಮಗೊಳಿಸಲು ಸಿದ್ದರಾಮಯ್ಯ ಅವರಿಗೆ ಪರಮೇಶ್ವರ್ ಅವರ ಸಹಕಾರ ಬೇಕೇ ಬೇಕು. ಆದರೂ, ಅಂತಿಮ ನಿರ್ಣಯ ಹೈಕಮಾಂಡ್ ನಾಯಕರದ್ದು ಎಂಬುದನ್ನು ಮರೆಯುವಂತಿಲ್ಲ.
ತೀವ್ರ ಲಾಬಿ: ಈ ಬಾರಿ 121 ಸ್ಥಾನ ಗೆದ್ದಿರುವ ಕಾಂಗ್ರೆಸ್ ಪಕ್ಷದಲ್ಲಿ 3 ರಿಂದ 6 ಬಾರಿ ಗೆದ್ದವರು, 30ಕ್ಕೂ ಅಧಿಕ ಮಂದಿ ಮಾಜಿ ಸಚಿವರು. ಮಾಜಿ ಸ್ಪೀಕರ್ ರಮೇಶ್ ಕುಮಾರ್, ಕೇಂದ್ರ ಮಾಜಿ ಸಚಿವ ಶ್ರೀನಿವಾಸ ಪ್ರಸಾದ್ ಜೊತೆಗೆ ಸಿಎಂ ರೇಸ್ ನಲ್ಲಿ ಸೋತ ಆರ್.ವಿ. ದೇಶಪಾಂಡೆ, ಎಚ್.ಕೆ. ಪಾಟೀಲ್, ಡಿ.ಕೆ. ಶಿವಕುಮಾರ್ ಹಾಗೂ ಪರಮೇಶ್ವರ್ ಅವರಿಗೆ ಪ್ರಮುಖ ಖಾತೆ ಭರವಸೆ ಸಿಕ್ಕಿದೆಯಂತೆ. ಜೊತೆಗೆ ರಾಹುಲ್ ಗಾಂಧಿ ಅವರ ಅಣತಿಯಂತೆ ಯುವಕರಿಗೂ ಆದ್ಯತೆ ನೀಡಲಾಗಿದೆಯಂತೆ.

ಒಟ್ಟಾರೆ ಸೋಮವಾರ(ಮೇ.13) ಬೆಳಗ್ಗೆ 11.50ರ ಸುಮಾರಿಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕಾರ ಸ್ವೀಕರಿಸಲಿದ್ದಾರೆ. ನಂತರ ಸಂಜೆ ಅಥವಾ ರಾತ್ರಿ ವೇಳೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಅವರು ಈ ಕೆಳಕಂಡ 40 ಜನರ ಪಟ್ಟಿಯನ್ನು ತೆಗೆದುಕೊಂಡು ದೆಹಲಿಗೆ ತೆರಳಲಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ತ್ರಿ ಸೇರಿದಂತೆ ಇತರೆ ಪ್ರಮುಖ ನಾಯಕರು ಅಂತಿಮ ನಿರ್ಧಾರವುಳ್ಳ ಪಟ್ಟಿಯನ್ನು ಲಕೋಟೆಯಲ್ಲಿ ಹಾಕಿ ರಾಜ್ಯದ ನಾಯಕರಿಗೆ ತಲುಪಿಸಲಿದ್ದಾರೆ. ಅಲ್ಲಿ ತನಕ ಸಂಭಾವ್ಯ ಶಾಸಕರ ಪಟ್ಟಿ ನೋಡಿ...
ವಿಧಾನ ಪರಿಷತ್ ಸದಸ್ಯರು :
1. ಮೋಟಮ್ಮ
2. ಎಸ್.ಆರ್. ಪಾಟೀಲ್
3. ಟಿ.ಜಾನ್
ಸಚಿವಾಕಾಂಕ್ಷಿ ಶಾಸಕರು:
1. ಎಚ್.ಕೆ.ಪಾಟೀಲ್- ಗದಗ
2. ಆರ್.ವಿ.ದೇಶಪಾಂಡೆ- ಹಳಿಯಾಳ
3. ಟಿ.ಬಿ.ಜಯಚಂದ್ರ- ಶಿರಾ
4. ಅಂಬರೀಷ್- ಮಂಡ್ಯ
5. ರಮೇಶ್ ಕುಮಾರ್- ಶ್ರೀನಿವಾಸಪುರ
6. ಡಿ.ಕೆ. ಶಿವಕುಮಾರ್- ಕನಕಪುರ
7. ಪ್ರಕಾಶ್ ಹುಕ್ಕೇರಿ- ಚಿಕ್ಕೋಡಿ-ಸದಲಗಾ
8. ಸತೀಶ್ ಜಾರಕಿಹೊಳಿ- ಯಮಕನಮರಡಿ
9. ರಾಮಲಿಂಗಾರೆಡ್ಡಿ- ಬಿಟಿಎಂ ಲೇಔಟ್
10. ಕೆ.ಜೆ. ಜಾರ್ಜ್- ಸರ್ವಜ್ಞನಗರ
11. ರೋಷನ್ ಬೇಗ್- ಶಿವಾಜಿನಗರ
12. ದಿನೇಶ್ ಗುಂಡೂರಾವ್- ಗಾಂಧಿನಗರ
13. ಕೃಷ್ಣಬೈರೇಗೌಡ- ಬ್ಯಾಟರಾಯನಪುರ
14. ಡಿ.ಬಿ. ಇನಾಂದಾರ್- ಕಿತ್ತೂರು
15. ಮಾಲಿಕಯ್ಯ ಗುತ್ತೇದಾರ್- ಅಫಜಲ್ಪುರ
16. ಖಮರುಲ್ ಇಸ್ಲಾಂ- ಗುಲ್ಬರ್ಗಾ ಉತ್ತರ
17. ಡಾ. ಶರಣಪ್ರಕಾಶ್ ಪಾಟೀಲ್- ಸೇಡಂ
18. ರಮಾನಾಥ ರೈ- ಬಂಟ್ವಾಳ
19. ವಿನಯಕುಮಾರ್ ಸೊರಕೆ- ಕಾಪು
20. ಅಭಯಚಂದ್ರ ಜೈನ್- ಮೂಡಬಿದರೆ
21. ಬಿ.ಬಿ. ಚಿಮ್ಮನಕಟ್ಟಿ- ಬದಾಮಿ
22. ಉಮಾಶ್ರೀ- ತೇರದಾಳ
23. ಸಿದ್ದನ್ಯಾಮಗೌಡ- ಜಮಖಂಡಿ
24. ಎಚ್.ವೈ.ಮೇಟಿ- ಬಾಗಲಕೋಟೆ
25. ಎಚ್.ಎಸ್. ಮಹದೇವಪ್ರಸಾದ್- ಗುಂಡ್ಲುಪೇಟೆ
26. ವಿ. ಶ್ರೀನಿವಾಸಪ್ರಸಾದ್- ನಂಜನಗೂಡು
27.ತನ್ವೀರ್ ಸೇಠ್- ನರಸಿಂಹರಾಜ
28. ಡಾ.ಎಚ್.ಸಿ. ಮಹದೇವಪ್ಪ- ಟಿ. ನರಸೀಪುರ
29. ಸಂತೋಷ್ ಲಾಡ್- ಕಲಘಟಗಿ
30.ಡಾ.ಎ.ಬಿ. ಮಾಲಕರೆಡ್ಡಿ- ಯಾದಗಿರಿ
31. ಕಾಗೋಡು ತಿಮ್ಮಪ್ಪ- ಸಾಗರ
32. ಶಾಮನೂರು ಶಿವಶಂಕರಪ್ಪ- ದಾವಣಗೆರೆ ದಕ್ಷಿಣ
33. ವಿನಯ್ ಕುಲಕರ್ಣಿ- ಧಾರವಾಡ
34. ಬಸವರಾಜ ರಾಯರೆಡ್ಡಿ- ಯಲಬುರ್ಗಾ
35. ಎ. ಮಂಜು- ಅರಕಲಗೂಡು
36. ಕಿಮ್ಮನೆ ರತ್ನಾಕರ- ತೀರ್ಥಹಳ್ಳಿ
37. ಅನಿಲ್‌ಲಾಡ್-ಬಳ್ಳಾರಿ
38. ಶಿವರಾಜ ತಂಗಡಗಿ- ಕನಕಗಿರಿ
39. ಸಿ.ಎಸ್. ನಾಡಗೌಡ- ಮುದ್ದೇಬಿಹಾಳ
40. ಎಂ.ಬಿ. ಪಾಟೀಲ್- ಬಬಲೇಶ್ವರ












Click it and Unblock the Notifications