ಅಕ್ಷಯ ತದಿಗೆ : ಆಭರಣ ಖರೀದಿ ಭರಾಟೆ ಹೇಗಿದೆ?

ಬೆಂಗಳೂರು, ಮೇ.12: ಅಕ್ಷಯ ತದಿಗೆ ದಿನದಂದು ಚಿನ್ನದಾಭರಣ ಖರೀದಿಸಿದಂತೆ ಐಶ್ವರ್ಯ, ಸಂಪತ್ತು ವೃದ್ಧಿಸುವಂತೆ ಎಂಬ ನಂಬಿಕೆ ಬೆಳೆದಿದೆ. ಇದರ ಸಂಪೂರ್ಣ ಲಾಭವನ್ನು ಪಡೆಯಲು ದೇಶದಾದ್ಯಂತ ಚಿನ್ನಾಭರಣ ಅಂಗಡಿಗಳು ಕಾದಿವೆ.

ಚಿನ್ನದ ಬೆಳೆ ಪಾತಾಳ ಕಂಡಿರುವ ಸಂದರ್ಭದಲ್ಲೇ ಅಕ್ಷಯ ತದಿಗೆ ಬಂದಿದೆ. ದೇಶದ ಬಹುತೇಕ ಎಲ್ಲೆಡೆ ಸ್ಥಳೀಯ ತೆರಿಗೆ(local body tax) ವಿರೋಧಿಸಿ ಚಿನ್ನದ ವರ್ತಕರು ಅಂಗಡಿಗಳನ್ನು ಬಂದ್ ಮಾಡಿದ್ದಾರೆ.

ಆದರೆ, ಸೋಮವಾರ ಮತ್ತು ಮಂಗಳವಾರ ಚಿನಿವಾರ ಪೇಟೆಯಲ್ಲಿ ಬಿಡುವಿಲ್ಲದ ಸಂಭ್ರಮ ಮನೆ ಮಾಡಲಿದೆ. ವಾರಾಂತ್ಯದಿಂದಲೇ ಚಿನ್ನದ ಖರೀದಿ ಜೋರಾಗಿ ನಡೆದಿದೆ. ಹಬ್ಬದ ಸಂದರ್ಭದಲ್ಲಿ ಶೇ 15 ರಿಂದ 30 ರಷ್ಟು ಚಿನ್ನ ಮಾರಾಟ ಹೆಚ್ಚಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಚಿನ್ನದ ಮೇಲಿನ ಅಡ್ವಾನ್ಸ್ ಬುಕ್ಕಿಂಗ್ ಈ ಬಾರಿ ಶೇ 10-30 ರಷ್ಟು ಹೆಚ್ಚಳ ಕಂಡು ಬಂದಿದೆ.

Jewellers to cash in on Akshaya Tritiya

ಅದರೆ, ಈ ಬಾರಿ ಚಿನ್ನದ ಆಭರಣ, ಚಿನ್ನ ಲೇಪಿತ ಸಾಮಾಗ್ರಿ ಖರೀದಿಗಿಂತ ಚಿನ್ನದ ನಾಣ್ಯ, ಬಾರ್ ಗಳ ಖರೀದಿ ಹೆಚ್ಚಾಗಿದೆ. ಮಾರುಕಟ್ಟೆ ನಿಪುಣರು, ಚಿನ್ನದ ಮೇಲೆ ಬಂಡವಾಳ ಹೂಡಿಕೆ ಬಗ್ಗೆ ಆಸಕ್ತಿವುಳ್ಳ ಗ್ರಾಹಕರಿಗೆ ಹೂಡಿಕೆಗೆ ಇದು ಸಕಾಲವಲ್ಲ ಎಂದು ತಜ್ಞರು ಕೊಟ್ಟಿರುವ ಆದೇಶವೇ ಇದಕ್ಕೆ ಕಾರಣ ಎನ್ನಲಾಗಿದೆ.

ಸಾಮಾನ್ಯವಾಗಿ ಆಭರಣ ಖರೀದಿ ಶೇ 90 ರಷ್ಟಿದ್ದರೆ ನಾಣ್ಯ ಖರೀದಿ ಶೇ 10ರಷ್ಟಿರುತ್ತಿತ್ತು, ಈ ಬಾರಿ ನಾಣ್ಯಗಳ ಖರೀದಿ ಶೇ 50 ರಷ್ಟು ಹೆಚ್ಚಳ ಕಾಣುವ ನಿರೀಕ್ಷೆಯಿದೆ ಎಂದು ಪಿಸಿ ಜ್ಯುವೆಲ್ಲರಿ ಸಂಸ್ಥೆ ಸಿಒಒ ರಮೇಶ್ ಕುಮಾರ್ ಶರ್ಮ ಹೇಳಿದ್ದಾರೆ.

ಅಂದ ಹಾಗೆ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ದರ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಅದೇ ರೀತಿ ಇಂದಿನ ಬೆಳ್ಳಿ ದರ ತಿಳಿಯಲಿ ಇಲ್ಲಿ ಕ್ಲಿಕ್ ಮಾಡಿ

ವಹಿವಾಟು ಅವಧಿ ವಿಸ್ತರಣೆ:ಅಕ್ಷಯ ತದಿಗೆ ಅಂಗವಾಗಿ ಮಂಗಳವಾರ ಎನ್ ಎಸ್ ಇ ಹಾಗೂ ಬಿಎಸ್ ಇ ಗೋಲ್ಡ್ ಇಟಿಎಫ್ ಖರೀದಿಯನ್ನು ಸಂಜೆ 7 ಗಂಟೆ ತನಕ ವಿಸ್ತರಿಸಲಾಗಿದೆ. ಸಾಮಾನ್ಯವಾಗಿ ಸಂಜೆ 3.30ಕ್ಕೆ ಷೇರು ಮಾರುಕಟ್ಟೆ ಹಾಗೂ ಚಿನಿವಾರ ಪೇಟೆ ಬಂದ್ ಮಾಡಲಾಗುತ್ತದೆ. ಸೋಮವಾರ ಹಾಗೂ ಮಂಗಳವಾರ ವಿಶೇಷ ವಹಿವಾಟು ನಡೆಯಲಿದ್ದು, ಗ್ರಾಹಕರ ಅನುಕೂಲಕ್ಕಾಗಿ ಅವಧಿ ವಿಸ್ತರಿಸಲಾಗಿದೆ ಎಂದು ಬಿಎಸ್ ಇ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+