ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿಲನಾಡು ಕೈವಶ, ಬಿಜೆಪಿಗೆ ಮುಖಭಂಗ

|
Google Oneindia Kannada News

 Yadgir
ಯಾದಗಿರಿ, ಮೇ 10 : ಬಿಸಿಲನಾಡು ಯಾದಗಿರಿ ಜಿಲ್ಲೆಯಲ್ಲಿ ಕಮಲ ಅರಳುವಲ್ಲಿ ವಿಫಲವಾಗಿದೆ. ನಾಲ್ಕು ಕ್ಷೇತ್ರಗಳನ್ನು ಹೊಂದಿರುವ ಜಿಲ್ಲೆಯಲ್ಲಿ ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿದ್ದು, ಕೆಜೆಪಿ ಒಂದು ಸ್ಥಾನ ಪಡೆದು ಬಿಜೆಪಿ ಪಕ್ಷಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.

ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸುರಪುರ ಕ್ಷೇತ್ರದಿಂದ ಗೆದ್ದು ಸಚಿವ ಸ್ಥಾನ ಪಡದಿದ್ದ ರಾಜೂಗೌಡ, ಕಾಂಗ್ರೆಸ್ ಸೇರುವ ವಿಫಲ ಯತ್ನ ನಡೆಸಿ ಕೊನೆಗೆ ಜೆಡಿಎಸ್ ಸೇರಿ ಚುನಾವಣೆಗೆ ಸ್ಪರ್ಧಿಸಿದ್ದರು. ಪ್ರತಿ ಚುನಾವಣೆಗೆ ಒಂದು ಪಕ್ಷ ಸೇರುವ ಅವರಿಗೆ ಜನರು ಸೋಲಿನ ರುಚಿ ತೋರಿಸಿದ್ದಾರೆ.

ಗುರುಮಠಕಲ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಗಿರೀಶ್ ಮಟ್ಟಣ್ಣನವರ್ ಕಾಂಗ್ರೆಸ್ ನ ಬಾಬುರಾವ್ ಚಿಂನಸೂರು ಅವರ ವಿರುದ್ಧ ಸೋಲು ಅನುಭವಿಸಿದ್ದಾರೆ.

2008ರ ಚುನಾವಣೆಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಒಂದು ಸ್ಥಾನಗಳಿಸಿತ್ತು. ಕಾಂಗ್ರೆಸ್ ಮೂರು ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಕಾಂಗ್ರೆಸ್ ನಷ್ಟ ಅನುಭವಿಸಿಲ್ಲ. ಆದರೆ, ಬಿಜೆಪಿ ತನ್ನ ಒಂದು ಸ್ಥಾನವನ್ನು ಕೆಜೆಪಿಗೆ ಬಿಟ್ಟುಕೊಟ್ಟಿದೆ. ಬಿಎಸ್ಆರ್ ಕಾಂಗ್ರೆಸ್ ಜಿಲ್ಲೆಯಲ್ಲಿ ಅಸ್ತಿತ್ವ ತೋರಿಸುವಲ್ಲಿ ವಿಫಲವಾಗಿದೆ.


ಯಾದಗಿರಿ ಜಿಲ್ಲೆ ವಿಧಾನಸಭಾ ಕ್ಷೇತ್ರಗಳಲ್ಲಿ : ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಪಡೆದ ಮತಗಳು ಸೋತವರು ಪಕ್ಷ ಪಡೆದ ಮತಗಳು
ಯಾದಗಿರಿ ಡಾ.ಎ.ಬಿ.ಮಾಲಕರೆಡ್ಡಿ ಕಾಂಗ್ರೆಸ್ 40,434 ಡಾ.ವೀರಬಸವಂತ ರೆಡ್ಡಿ
ಕೆಜೆಪಿ
31,330
ಗುರುಮಠಕಲ್
ಬಾಬುರಾವ್ ಚಿಂನಸೂರು ಕಾಂಗ್ರೆಸ್ 36,051 ನಾಗಣಗೌಡ ಕಂದಕೂರ
ಜೆಡಿಎಸ್
34,401
ಸುರಪುರ
ರಾಜಾ ವೆಂಕಟಪ್ಪ ನಾಯಕ್ ಕಾಂಗ್ರೆಸ್ 65,033 ರಾಜುಗೌಡ
ಜೆಡಿಎಸ್
60,958
ಶಹಾಪುರ
ಗುರು ಪಾಟೀಲ್ ಸಿರವಾಳ ಕೆಜೆಪಿ 54,924 ಶರಣಪ್ಪ ದರ್ಶನಾಪುರ
ಕಾಂಗ್ರೆಸ್
49,128
English summary
Karnataka assembly Election Results. Here is complete information about winners and losers with their constituencies and party of Yadgir district. BJP did not get single seat in Yadgir district. in Four constituencies Congress get Three seats and KJP won single seat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X