ಅಧಿಕಾರಕ್ಕೆ ಬಂದ ಕಾಂಗ್ರೆಸ್ ಷೋ ಎಲ್ಲಿಯವರೆಗೆ?

ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಗೆದ್ದಿರುವವರ ಪಟ್ಟಿ ನೋಡಿದರೆ ಒಬ್ಬರಿಗಿಂತ ಒಬ್ಬರು ಘಟಾನುಘಟಿಗಳೇ. ಒಂಎದಷ್ಟು ಮಂದಿ ನೇರವಾಗಿ ಮುಖ್ಯಮಂತ್ರಿ ಕುರ್ಚಿಯ ಮೇಲೆ ಟವಲ್ ಹಾಕುವಂತವಹವರಿದ್ದರೆ ಅನೇಕಾನೇಕ ಮಂದಿ ಮಂತ್ರಿಗಳಾಗಬಯಸುವವರೂ ಇದ್ದಾರೆ.
ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಷೋ ಎಲ್ಲಿಯವರೆಗೆ ಎಂಬುದೇ ಪ್ರಶ್ನೆ.
ಏಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಎಸ್ಎಂ ಕೃಷ್ಣ ಸೇರಿದಂತೆ ಅನೇಕ ಸೀಸನ್ಡ್ ನಾಯಕರೇ ಬಂಡಾಯವೆದ್ದಿದ್ದರು. ಸಾಕಷ್ಟು ಮಾತನಾಡುವುದಿದೆ. ಮೇ 8ರಂದು ಎಲ್ಲಾ ಹೇಳ್ತೇನೆ ಎಂದಿದ್ದರು. ಆದರೆ ಮತದಾರ ಈಗ ಅವರ ಬಾಯ್ಮುಚ್ಚಿಸಿದ್ದಾನೆ. ಆದರೂ ಅವರು ತೆರೆ ಮರೆಯಲ್ಲಿ ತೊಗಲು ಬೊಂಬೆಗಳನ್ನು ಆಡಿಸುವುದರಲ್ಲಿ ಮಗ್ನರಾಗುವುದು ಖಚಿತ.
ಈಗಾಗಲೇ ಅವರ ಶಿಷ್ಯರೊಬ್ಬರು ಫಲಿತಾಂಶಕ್ಕೆ ಮುನ್ನಾ ದಿನ ದೆಹಲಿಯವರೆಗೂ ಹೋಗಿ ಬಂದಿದ್ದಾರೆ. ನೇರವಾಗಿ ಸಿಎಂ ಪಟ್ಟಕ್ಕೇ ಅವರು ಲಗ್ಗೆಯಿಟ್ಟಿದ್ದಾರೆ. ಅವರನ್ನು ಕೃಷ್ಣ ಹುರಿದುಂಬಿಸುವುದು ಖಚಿತ. ಈಗಾಗಲೇ ಸಿಎಂ ರೇಸಿನಲ್ಲಿ ಅನೇಕರು ನಾಮುಂದು ತಾಮುಂದು ಎನ್ನುತ್ತಿರುವಾಗ ಸಿಎಂ ಆಯ್ಕೆಯಲ್ಲೇ ಪಕ್ಷ ಮುಗ್ಗರಿಸಿದರೆ ಹೇಗೆ?
ಹಾಗೆ ನೋಡಿದರೆ ಉತ್ತರ ಕರ್ನಾಟಕದ ಮಂದಿ ತಮ್ಮ ಭಾಗದಿಂದಲೇ ಹೆಚ್ಚು ಶಾಸಕರನ್ನು ಆರಿಸಿಕಳಿಸಿದ್ದಾರೆ. ಅಲ್ಲಿನ ಸಂಪ್ರದಾಯ ಮುಂದುವರಿಯುವ ಹಾಗಿದ್ದರೆ ಆ ಭಾಗದವರೇ ಮುಖ್ಯಮಂತ್ರಿ ಆಗಬೇಕು. ಅಂದರೆ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಪಟ್ಟ ಗಟ್ಟಿ. ಆದರೆ ಪಕ್ಷಕ್ಕೆ ಇತ್ತ ದಕ್ಷಿಣದ ದಾಕ್ಷಿಣ್ಯ ಇದೆಯಲ್ಲಾ? ಮಾಜಿ ಜೆಡಿಎಸ್ ಸಿದ್ದರಾಮಯ್ಯಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕಾಗುವುದಲ್ಲ. ಆಗೇನು ಮಾಡುವುದು. ಇವರಿಬ್ಬರೇ ಅಲ್ಲ. ಇಂತಹವರು ಇನ್ನೂ ಅನೇಕ ಮಂದಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ.
ಆದರೆ ಕಾಂಗ್ರೆಸ್ ಹೈಕಮಾಂಡ್ ಇದಕ್ಕೆ ಅವಕಾಶ ನೀಡದೆ ಲಕೋಟೆ ಮುಖ್ಯಮಂತ್ರಿಯನ್ನು ನೇಮಿಸಿದರೆ ಮುಖ್ಯಮಂತ್ರಿ ಆಕಾಂಕ್ಷಿಗಳು ತಾತ್ಕಾಲಿಕವಾಗಿ ಸುಮ್ಮನಾಗಿರಬಹುದು. ಆದರೆ ಅಷ್ಟೂ ಶಾಸಕರನ್ನು ದೀರ್ಘ ಕಾಲ ಹಿಡಿದಿಡುವುದು ಪಕ್ಷಕ್ಕೆ ಕಷ್ಟದ ಕೆಲಸ.
ಸಾಹಸಪಟ್ಟು ಯಾರೋ ಒಬ್ಬರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸಿದರೂ ಮಂತ್ರಿ ಮಂಡಲ ರಚನೆ ವೇಳೆಗೆ ಎರಡನೆಯ ಸುತ್ತಿನಲ್ಲಿ ಕಂಟಕ ಎದುರಾಗಲಿದೆ. ಏಕೆಂದರೆ ಏಳು ವರ್ಷಗಳಿಂದ ಅಧಿಕಾರವಿಲ್ಲದೆ ಪರಿತಪಿಸುತ್ತಿದ್ದವರು ಕಾಂಗ್ರೆಸ್ಸಿನಲ್ಲಿ ಅನೇಕರಿದ್ದಾರೆ. ಅಧಿಕಾರದಾಹಿಗಳು ಪಕ್ಷಕ್ಕೆ ಮಾರಕವಾಗಬಹುದು.
ಅಬ್ಬಬ್ಬಾ ಅಂದರೆ ಲೋಕಸಭೆ ಚುನಾವಣೆವರೆಗೆ ಅಷ್ಟೇ:
ಆದರೂ ಕಾಂಗ್ರೆಸ್ ಹೇಗೋ ಆ ಘಳಿಗೆಯನ್ನು ಸಂಭಾಳಿಸಿಕೊಂಡು ಹೋದರೆ ಮುಂದಿದೆ ಮಾರಿ ಹಬ್ಬವೆಂಬಂತೆ ಲೋಕಸಭೆ ಚುನಾವಣೆ ಎದುರಾಗುತ್ತದೆ. ಆಗ ನಿಜವಾದ ಆಟ ಶುರುವಾಗುವುದು. ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತವನ್ನು ಒಂದು ಘಟ್ಟಕ್ಕೆ ತಂದುನಿಲ್ಲಿಸಿ, ಅದೇ ಹುಮ್ಮಸ್ಸಿನಲ್ಲಿ ಅವಧಿ ಮುನ್ನ ಲೋಕಸಭೆ ಚುನಾವಣೇ ಎದುರಾದರೆ ಪಕ್ಷದ ಸಂಕಷ್ಟ ಅಷ್ಟೇ ವೇಗವಾಗಿ ಅಮರಿಕೊಳ್ಳುವುದು ನಿಶ್ಚಿತ. ಹಾಗಾಗಿ ಮುಂದಿನ ಲೋಕಸಭೆ ಚುನಾವಣೆವರೆಗೂ ಕರ್ನಾಟಕದಲ್ಲಿ ಕಾಂಗ್ರೆಸ್ ನಾಟಕ ನಡೆಯಲಿದೆ ಎನ್ನಬಹುದು.
-
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications