• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಸ್ಸೆಸ್ಸೆಲ್ಸಿ, ಪಿಯುಸಿ 2013 ಟಾಪರ್ ಗಳು

By Mahesh
|

ಬೆಂಗಳೂರು, ಮೇ.7: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಫಲಿತಾಂಶಗಳು ಒಂದೇ ದಿನ ಪ್ರಕಟವಾಗಿದ್ದು, ಮತ್ತೊಮ್ಮೆ ಬಾಲಕಿಯರು ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಗ್ರಾಮೀಣ ವಿಭಾಗದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಹೊರ ಹಾಕಿರುವುದು ವಿಶೇಷ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶ್ರೇಯಾಂಕ ಪದ್ಧತಿ ಮಾಯವಾದ ಮೇಲೆ ಅತಿ ಹೆಚ್ಚು ಅಂಕಗಳಿಸಿ 'ಟಾಪರ್' ಎನಿಸಿಕೊಂಡ ವಿದ್ಯಾರ್ಥಿಗಳ ವಿವರ ಇಲ್ಲಿದೆ.

ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಶೇ 77.47 ರಷ್ಟು ಫಲಿತಾಂಶ ಸಿಕ್ಕಿದ್ದರೆ, ಪಿಯುಸಿಯಲ್ಲಿ 59.36 ರಷ್ಟು ಫಲಿತಾಂಶ ಹೊರಬಂದಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ 8,36,342 ವಿದ್ಯಾರ್ಥಿಗಳ ಪೈಕಿ 6,47,951 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಇದೇ ರೀತಿ ದ್ವಿತೀಯ ಪಿಯು ಪರೀಕ್ಷೆ ಬರೆದ 6,11,569 ವಿದ್ಯಾರ್ಥಿಗಳ ಪೈಕಿ 3,63,057 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

Toppers of Karnataka SSLC & Second PUC results 2013

ಎಸ್ಸೆಸ್ಸೆಲ್ಸಿ ಟಾಪರ್ : ಬೆಂಗಳೂರಿನ ವಿಜಯ ಹೈಸ್ಕೂಲ್ ವಿದ್ಯಾರ್ಥಿ ಎಂ.ಎಸ್ ಸುಧೀಂದ್ರ 625 ಕ್ಕೆ 622 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ಎನಿಸಿದ್ದಾನೆ.ಎರಡನೇ ಶ್ರೇಯಾಂಕ ಮೂವರು ವಿದ್ಯಾರ್ಥಿಗಳ ಪಾಲಾಗಿದೆ. ಎಲ್ಲರೂ 625 ಅಂಕಗಳಿಗೆ 621 ಅಂಕ ಗಳಿಸಿದ್ದಾರೆ.
* ರಾಜ್ಯಕ್ಕೆ ಪ್ರಥಮ ಎಂ.ಎಸ್ ಸುಧೀಂದ್ರ, ವಿಜಯ ಹೈಸ್ಕೂಲ್ ಬೆಂಗಳೂರು

* ನಾಗಾರ್ಜುನ ಕೆ, ಹೋಲಿ ಚೈಲ್ಡ್ ಇಂಗ್ಲೀಷ್ ಶಾಲೆ, ಬೆಂಗಳೂರು
* ಮಾನ್ವಿತ ಕೆ. ವಿಶ್ವಮಂಗಲ ಇಂಗ್ಲೀಷ್ ಶಾಲೆ, ಕೊಣಾಜೆ, ದಕ್ಷಿಣ ಕನ್ನಡ ಜಿಲ್ಲೆ
* ರಕ್ಷಿತಾ ವಿ.ಎಚ್, ನಿವೇದಿತಾ ಹೈಸ್ಕೂಲ್, ಬೆಂಗಳೂರು

* ಹುಬ್ಬಳ್ಳಿಯ ಅಂಧ ವಿದ್ಯಾರ್ಥಿ ವಿದ್ಯಾರ್ಥಿ ಪ್ರಣವ್ ಈಶ್ವರಪ್ಪ ಎಸ್ಸೆಸ್ಸೆಲ್ಸಿಯಲ್ಲಿ ಶೇ 94.73 ರಷ್ಟು ಅಂಕ ಗಳಿಸಿ ಸಾಧನೆ ಮಾಡಿದ್ದಾನೆ.
* ನೂರಕ್ಕೆ ನೂರು ಅಂಕ ಗಳಿಸಿದವರ ಸಂಖ್ಯೆ ಪಠ್ಯಕ್ರಮ ಅನುಗುಣವಾಗಿ ಗಣಿತ 643 ವಿದ್ಯಾರ್ಥಿಗಳು, ಸಮಾಜ ವಿಜ್ಞಾನ 593, ಪ್ರಥಮ ಭಾಷೆ 364, ತೃತೀಯ ಭಾಷೆ 202, ದ್ವಿತೀಯ ಭಾಷೆ 157 ಹಾಗೂ ವಿಜ್ಞಾನ 34

ದ್ವಿತೀಯ ಪಿಯು ಟಾಪರ್ಸ್ : ಮಂಗಳೂರಿನ ಕೆನರಾ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ಕೆ ಅಕ್ಷಯ್ ಕಾಮತ್ ಪ್ರಥಮ ಶ್ರೇಯಾಂಕ ಗಳಿಸಿದ್ದಾನೆ. ಭೌತಶಾಸ್ತ್ರ, ಗಣಿತ, ಎಲೆಕ್ಟ್ರಾನಿಕ್ಸ್ ಹಾಗೂ ಸಂಸ್ಕೃತ ವಿಷಯದಲ್ಲಿ ಶತಕ ಬಾರಿಸಿದ್ದಾನೆ. ಇಂಗ್ಲೀಷ್ ನಲ್ಲಿ 94 ಅಂಕ ಗಳಿಸಿ ಒಟ್ಟಾರೆ 600ಕ್ಕೆ 594 ಅಂಕ ಗಳಿಸಿದ್ದಾನೆ.

* ಮೂಡಬಿದರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿ ಬಿ. ಸೂರಜ್ ಹೆಗಡೆ ಕಾಮರ್ಸ್ ವಿಭಾಗದಲ್ಲಿ ಪ್ರಥಮ ಶ್ರೇಯಾಂಕ ಗಳಿಸಿದ್ದಾನೆ. ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಸ್ಟಾಟಿಸ್ಟಿಕ್ಸ್ ಹಾಗೂ ಬೇಸಿಕ್ ಮ್ಯಾಥ್ಸ್ ವಿಷಯಗಳಲ್ಲಿ ನೂರು ಅಂಕ ಗಳಿಸಿದ್ದು, ಸಂಸ್ಕೃತದಲ್ಲಿ 98 ಹಾಗೂ ಇಂಗ್ಲೀಷ್ ನಲ್ಲಿ 95 ಅಂಕ ಗಳಿಸಿದ್ದಾನೆ. ಒಟ್ಟಾರೆ 600ಕ್ಕೆ 593 ಅಂಕ ಗಳಿಸಿದ್ದಾರೆ.

* ಬಾಗಲಕೋಟೆಯ ವಿಎಂಎಸ್ ಆರ್ ವಿ ಪದವಿಪೂರ್ವ ಕಾಲೇಜಿನ ಪ್ರದೀಪ್ ಬಿ.ಜಿ ಕಲಾ ವಿಭಾಗದಲ್ಲಿ ಶೇ 95 ರಷ್ಟು ಅಂಕ ಗಳಿಸಿದ್ದಾನೆ. 625ಕ್ಕೆ 574 ಅಂಕ ಬಂದಿದೆ.

* ಅಂಧ ವಿದ್ಯಾರ್ಥಿಗಳ ಪೈಕಿ ಕಲಾ ವಿಭಾಗದಲ್ಲಿ ಸುರಾನಾ ಪಿಯು ಕಾಲೇಜಿನ ಸುರೇಶ್ ಸಿಎನ್ ಶೇ 92, ಭರತ್ ಎಂ ಶೇ 90, ನಾಗರಾಜ್ ಜಿ ಶೇ 89, ಪ್ರಿಯಾಂಕಾ ಶೇ 86 ಹಾಗೂ ತೇಜಶ್ರೀ ಶೇ 88 ಅಂಕ ಗಳಿಸಿದ್ದಾರೆ.

* ದ್ವಿತೀಯ ಪಿಯುಸಿಯಲ್ಲಿ ನೂರಕ್ಕೆ ನೂರು ಅಂಕ ಗಳಿಸಿದವರ ಸಂಖ್ಯೆ ವಿವರ ಅಕೌಂಟೆನ್ಸಿ(944 ಜನ), ಸ್ಟಾಟಿಟಿಕ್ಸ್ 779, ಭೌತಶಾಸ್ತ್ರ 710, ರಸಾಯನಶಾಸ್ತ್ರ 479 ಹಾಗೂ ಕಂಪ್ಯೂಟರ್ ಸೈನ್ಸ್ 585, ಕರ್ನಾಟಕ ಸಂಗೀತ ವಿಷಯದಲ್ಲಿ ನೂರಕ್ಕೆ ನೂರು ಫಲಿತಾಂಶ ಹೊರ ಬಿದ್ದಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು sslc ಸುದ್ದಿಗಳುView All

English summary
The results of Karnataka SSLC & Second PUC results 2013 were announced on Monday with an overall pass percentage of 77.47 in SSLC and 59.36% in Second PUC. Student from Vijaya High School, MS Sudhindra topped in SSLC and Scores 622 out of 625 marks. K Akshay Kamath from Canara PU College, Mangalore topped the Second PUC Science stream

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more