2ನೇ ಪಿಯುಸಿ 2013 ಫಲಿತಾಂಶ ಪ್ರಕಟ

6.5 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದರು. ಈ ಪೈಕಿ 3.19 ಲಕ್ಷ ವಿದ್ಯಾರ್ಥಿಗಳು ಹಾಗೂ 2.93 ಲಕ್ಷ ವಿದ್ಯಾರ್ಥಿನಿಯರು. ಈ ಪೈಕಿ ಶೇ 59.36 ರಷ್ಟು ಅಥವಾ 3,63,057 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಈ ಬಾರಿಯೂ ವಿದ್ಯಾರ್ಥಿನಿಯರೂ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿರುವುದು ವಿಶೇಷ.
ಫಲಿತಾಂಶ ಮುಖ್ಯಾಂಶಗಳು:
* ಒಟ್ಟಾರೆ ರಾಜ್ಯದ ಫಲಿತಾಂಶ : ಶೇ 59.36
* 22 ಸಾವಿರ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ಪಾಸಾಗಿದ್ದಾರೆ.
* ಒಟ್ಟಾರೆ ಶೇ 66.51 ರಷ್ಟು ವಿದ್ಯಾರ್ಥಿನಿಯರು ಹಾಗೂ ಶೇ 52.72 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.
* ಕಳೆದ ವರ್ಷದ ಫಲಿತಾಂಶಕ್ಕೆ ಹೋಲಿಸಿದರೆ ಶೇ 2 ರಷ್ಟು ಹೆಚ್ಚಿನ ಫಲಿತಾಂಶ ಈ ಬಾರಿ ಕಂಡು ಬಂದಿದೆ.
* ಉಡುಪಿ ಶೈಕ್ಷಣಿಕ ಜಿಲ್ಲೆ ಶೇ 92.72 ಪ್ರಮಾಣದೊಂದಿಗೆ ಪ್ರಥಮ ಸ್ಥಾನ ಗಳಿಸಿದೆ.
* ದಕ್ಷಿಣ ಕನ್ನಡ ಶೇ 91.76 ರಷ್ಟು ಫಲಿತಾಂಶದೊಂದಿಗೆ ದ್ವಿತೀಯ
* ಉತ್ತರ ಕನ್ನಡ ಶೇ 82.97 ರಷ್ಟು ಪಾಸ್ ಪ್ರಮಾಣದೊಂದಿಗೆ ಮೂರನೇ ಸ್ಥಾನ. ಯಾದಗಿರಿ ಕೊನೆ ಸ್ಥಾನ ಪಡೆದಿದೆ.
ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಕಲಾ ವಿಭಾಗದಲ್ಲಿ ಶೇ.51.76, ವಾಣಿಜ್ಯ ವಿಭಾಗದಲ್ಲಿ ಶೇ.67.86 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.61.46ರಷ್ಟು ಫಲಿತಾಂಶ ಬಂದಿದೆ. ಇನ್ನು ಉಳಿದಂತೆ ಸರ್ಕಾರಿ ಕಾಲೇಜುಗಳಲ್ಲಿ ಶೇ.65.80ರಷ್ಟು, ಅನುದಾನ ರಹಿತ ಕಾಲೇಜುಗಳಲ್ಲಿ ಶೇ.72.49 ಹಾಗೂ ಅನುದಾನಿತ ಕಾಲೇಜುಗಳಲ್ಲಿ ಶೇ.67.66ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಒಟ್ಟು 3 ಲಕ್ಷ 63 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ರಾಜ್ಯಾದ್ಯಂತ ಒಟ್ಟು 961 ಪರೀಕ್ಷಾ ಕೇಂದ್ರ ಮಾ.13ರಿಂದ ಪಿಯುಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಕಲಾ ವಿಭಾಗದಲ್ಲಿ 2.57 ಲಕ್ಷ ವಿದ್ಯಾರ್ಥಿಗಳು, ವಿಜ್ಞಾನ ವಿಷಯದಲ್ಲಿ 1.78 ಲಕ್ಷ ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1.81 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪಿಯು ಮಂಡಳಿ ವೆಬ್ ಸೈಟ್ ನಲ್ಲಿ ಪರೀಕ್ಷೆ ಫಲಿತಾಂಶ ಪ್ರಕಟಿಸುವ ಜೊತೆಗೆ ಆಯಾ ಕಾಲೇಜುಗಳಲ್ಲಿ ಫಲಿತಾಂಶ ಸೂಕ್ತ ಸಮಯಕ್ಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ.
Karnataka 2 PU results news, highlights : 22k students get distinction. Total # students appeared 6.14,139 #examresults
— Oneindia Kannada (@OneindiaKannada) May 6, 2013












Click it and Unblock the Notifications