• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿತ್ರಗಳಲ್ಲಿ : ಹಗರಣ, ಫಲಿತಾಂಶ, ಸಂಭ್ರಮ

By Mahesh
|

ಬೆಂಗಳೂರು, ಮೇ. 7: ಕೇಂದ್ರ ಕಾನೂನು ಸಚಿವರ ಆದೇಶದ ಮೇರೆಗೆ ಕಲ್ಲಿದ್ದಲು ಹಗರಣದ ತನಿಖೆಯ ವರದಿಯಲ್ಲಿ ಬದಲಾವಣೆ ಮಾಡಲಾಯಿತು. ಹೀಗೆಂದು ಸಿಬಿಐ ಮುಖ್ಯಸ್ಥ ರಂಜಿತ್ ಸಿನ್ಹಾ ಸೋಮವಾರ ಸುಪ್ರೀಂಕೋರ್ಟಿಗೆ ಹೊಸತಾಗಿ ಅಫಿಡವಿಟ್ ಸಲ್ಲಿಸಿದ್ದಾರೆ. ಈ ನಡುವೆ ಲಂಚ ಪ್ರಕರಣದ ರುವಾರಿ ಕೇಂದ್ರ ರೈಲ್ವೇ ಸಚಿವ ಬನ್ಸಾಲ್ ಅಳಿಯ ಮಹೇಶ್ ಕುಮಾರ್ ಅವರನ್ನು ಕೋರ್ಟಿಗೆ ಹಾಜರುಪಡಿಸಲಾಗಿದೆ.

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳುರು ತಂಡದ ದೈತ್ಯ ಕ್ರಿಸ್ ಗೇಲ್ ಗೆ ಸಾಟಿಯಾಗಬಲ್ಲ ಶೂರ ಹುಟ್ಟಿಕೊಂಡಿದ್ದಾನೆ. ಡೇವಿಡ್ ಮಿಲ್ಲರ್ ಆರ್ಭಟಕ್ಕೆ ಆರ್ ಸಿಬಿ ತತ್ತರಿಸಿದೆ. ಕರ್ನಾಟಕ ವಿಧಾನಸಭಾ ಚುನಾವಣಾ ಮತದಾನ ಬಹುತೇಕ ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಮೇ .8 ರಂದು ಫಲಿತಾಂಶಕ್ಕಾಗಿ ಎಲ್ಲಾ ಪಕ್ಷಗಳು ಕಾದಿವೆ. ಸೋಮವಾರ(ಮೇ.6), ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಟಾಪ್ ಸ್ಥಾನ ಗಳಿಸಿದ ವಿದ್ಯಾರ್ಥಿಗಳು ಇಲ್ಲಿದೆ.

ಅಕ್ಷರಗಳು ಹೇಳದ ಕಥೆಯನ್ನು ಚಿತ್ರಗಳ ಮೂಲಕ ಹೇಳ ಹೊರಟಿರುವ ಪ್ರಯತ್ನ ನಮ್ಮದು. ಮಾಮೂಲಿ ರಾಜಕೀಯ ಸಮಾರಂಭ ಚಿತ್ರಗಳು, ಸಿನಿಮಾ ಸುದ್ದಿಗಳ ನಡುವೆ ಮಿಸ್ ಆಗುವ ವಿಷಯಗಳನ್ನು ಆಯ್ದು ಕೊಡಲಾಗಿದೆ. ಕಳೆದ ಎರಡು ದಿನಗಳ ಪ್ರಮುಖ ಹಾಗೂ ಕುತೂಹಲ ಭರಿತ ಚಿತ್ರಗಳನ್ನು ನೀವು ನೋಡಬಹುದು.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಬಿಗಿ ಭದ್ರತೆ ನಡುವೆ ಕರ್ನಾಟಕದ ವಿಧಾನಸಭೆ ಚುನಾವಣೆ ಮತದಾನ ಭಾನುವಾರ(ಮೇ.5) ಮುಕ್ತಾಯವಾಗಿದೆ. ಎಲ್ಲೆಡೆ ಫಲಿತಾಂಶದ ಬಗ್ಗೆ ಕುತೂಹಲ ಮನೆ ಮಾಡಿದೆ.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಬೆಂಗಳೂರು: ವಿಧಾನಸಭೆ ಚುನಾವಣೆ ಮತದಾನದ ನಂತರ ಎವಿಎಂ ಬಾಕ್ಸ್ ಗಳನ್ನು ಸುರಕ್ಷಿತವಾಗಿ ಕೊಂಡೊಯ್ಯುತ್ತಿರುವ ಚುನಾವಣಾಧಿಕಾರಿಗಳು. ಮೇ.8ರಂದು ಮತಎಣಿಕೆ ನಡೆದು ಫಲಿತಾಂಶ ಹೊರ ಬೀಳಲಿದೆ.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಕೆಲಸಕಾಗಿ ಲಂಚ: ಅಮಾನತುಗೊಂಡಿರುವ ರೈಲ್ವೇ ಬೋರ್ಡ್ ಸದಸ್ಯ, ರೈಲ್ವೇ ಸಚಿವ ಪಿ.ಕೆ ಬನ್ಸಾಲ್ ಅವರ ಅಳಿಯ ಮಹೇಶ್ ಕುಮಾರ್ ಅವರನ್ನು ಸಿಬಿಐ ತಂಡ ಪಟಿಯಾಲಾ ಕೋರ್ಟಿಗೆ ಹಾಜರುಪಡಿಸಿದರು. Photo by Kamal Singh

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಮಲೇಷ್ಯಾ : ಕಳೆದ 56 ವರ್ಷಗಳಿಂದ ಅಧಿಕಾರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿರುವ ಆಡಳಿತಾರೂಢ ಮೈತ್ರಿಕೂಟ ನ್ಯಾಷನಲ್ ಫ್ರಂಟ್, ಸಂಸದೀಯ ಚುನಾವಣೆಯಲ್ಲಿ ಸರಳ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆಯನ್ನು ತನ್ನ ಬಳಿ ಉಳಿಸಿಕೊಂಡಿದೆ.

ಚಿತ್ರದಲ್ಲಿ ಮಲೇಷ್ಯಾದ ರಾಜ ಟ್ವಾಂಕು ಅಬ್ದುಲ್ ಹಲಿಂ ಹಾಗೂ ಪ್ರಧಾನಿ ನಜೀಬ್ ರಜಾಕ್

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಅಸ್ಸಾಂ: ಆರ್ಥಿಕವಾಗಿ ಹಿಂದುಳಿದ ವರ್ಗದ ಹಿಂದೂ ವಧು ವರರು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡರು. ಸುಮಾರು 30 ಜೋಡಿಗಳು ವಿವಾಹ ಬಂಧನಕ್ಕೆ ಒಳಪಟ್ಟರು.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಸಂಜಯ್ ದತ್ ಕುಟುಂಬ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಕಲ್ಲಿದ್ದಲು ಹಗರಣದ ವಿರುದ್ಧ ಬಿಜೆಪಿ ರಾಜ್ಯಸಭಾ ಸದಸ್ಯ ವೆಂಕಯ್ಯ ನಾಯ್ಡು ನೇತೃತ್ವದಲ್ಲಿ ಪ್ರತಿಭಟನೆ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಶ್ರೀನಗರ: ಕಾಶ್ಮೀರದ ರಸ್ತೆಗಳಲ್ಲೂ ಈಗ ಕ್ರಿಕೆಟ್ ಕ್ರೇಜ್ ಶುರುವಾಗಿದೆ.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಆರ್ ಸಿಬಿ ಕನಸು ನುಚ್ಚುಚೂರು ಮಾಡಿ 38 ಎಸೆತದಲ್ಲಿ ಶತಕ ಬಾರಿಸಿ ಕಿಂಗ್ಸ್ XI ಪಂಜಾಬ್ ಗೆ ಗೆಲುವು ತಂದಿತ್ತ ಡೇವಿಡ್ ಮಿಲ್ಲರ್

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ವಿಶ್ವ ಚೆಸ್ ಚಾಂಪಿಯನ್ ಭಾರತದ ವಿಶ್ವನಾಥ್ ಆನಂದ್ ನಾರ್ವೆ ವಿಮಾನ ನಿಲ್ದಾಣಕ್ಕೆ ಬಂದಾಗ ಕಾಣಿಸಿದ್ದು ಹೀಗೆ.. ನಾರ್ವೆಯಲ್ಲಿ ಟೂರ್ನಿಮೆಂಟ್ ಆಡಲು ಆನಂದ್ ಬಂದಿದ್ದಾರೆ.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಸಿಖ್ ಹತ್ಯಾಕಾಂಡದ ಆರೋಪಿ ಸಜ್ಜನ್ ಕುಮಾರ್ ಖುಲಾಸೆ ವಿರುದ್ಧ ಸಿಖ್ ಸಮುದಾಯದ ಆಕ್ರೋಶ ಇನ್ನೂ ತಗ್ಗಿಲ್ಲ.

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರಗಳಲ್ಲಿ : ಇತ್ತೀಚಿನ ಪ್ರಮುಖ ಸುದ್ದಿ

ಚಿತ್ರದಲ್ಲಿ: 2013 ಶೈಕ್ಷಣಿಕ ವರ್ಷದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು photo ಸುದ್ದಿಗಳುView All

English summary
Todays News Stories in Pics May 7, 2013 : Poll officials carry EVM to deposit after polling for the Karnataka assembly elections in Karnataka and Many more

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more