49 ಒ ಮತ ಚಲಾವಣೆಗೆ ಆಡ್ಡಿ ಆತಂಕ

Section 49-O of our Constitution
ಬೆಂಗಳೂರು, ಮೇ 5: ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಯಾರೂ ಸಮರ್ಥ ಅಭ್ಯರ್ಥಿ ಇಲ್ಲ ಎಂದು ಕಂಡು ಬಂದಲ್ಲಿ 49 ಒ ನಿಯಮ ಬಳಸಿ ಯಾವ ಅಭ್ಯರ್ಥಿಯೂ ಅರ್ಹನಲ್ಲ ಎಂದು ಮತದಾನ ಮಾಡಬಹುದು ಎಂಬ ಅವಕಾಶವನ್ನು ಚುನಾವಣಾ ಆಯೋಗ ಈ ಬಾರಿ ಮತದಾರರಿಗೆ ನೀಡಿತ್ತು.

ಆದರೆ, ಅನೇಕ ಕಡೆ ಫಾರ್ಮ್ ಸಿಗಲೇ ಇಲ್ಲ. ಇನ್ನು ಕೆಲವೇ ಈ ನಿಯಮದ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲ, ಒಟ್ಟಾರೆ ಮಿಶ್ರ ಪ್ರತಿಕ್ರಿಯೆಯೊಂದಿಗೆ 49 ಒ ನಿಯಮ ಬಳಕೆಯಾಗಿದೆ.

ಈ ಮತದಾನ ಮಾಡಬೇಕಾದರೆ ಯಾವ ಕಾರಣಕ್ಕಾಗಿ ಯಾವ ಅಭ್ಯರ್ಥಿಯೂ ಹಿಡಿಸಿಲ್ಲ ಎಂದು ನಮೂದಿಸಬೇಕು ಮತದಾರನ ಹೆಸರು ವಿಳಾಸವನ್ನು ಚುನಾವಣಾ ಆಯೋಗ ಗುಪ್ತವಾಗಿರಿಸುತ್ತದೆ. ಒಂದು ವೇಳೆ ಫಾರ್ಮ್ 49 ಬಳಸಿ ಶೇ.40ಕ್ಕಿಂತ ಅಧಿಕ ಮತ ಬಿದ್ದರೆ ಮರು ಚುನಾವಣೆ ಮಾಡಬೇಕಾಗುತ್ತದೆ.

ಹೊಸಬೆಟ್ಟಿನ 12 ಮತದಾರರು ಫಾರ್ಮ್ 49 ಬಳಸಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ್ದಾರೆ. ಕಡಬದ 102ನೆ ನೆಕ್ಕಿಲಾಡಿ ಗ್ರಾಮದ ವ್ಯಕ್ತಿಯೋರ್ವರು ನೋಟ ಓಟ್ ಚಲಾಯಿಸಿದರು. ಕರ್ಮಾಯಿ ಸ.ಹಿ.ಪ್ರಾ.ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 94ರಲ್ಲಿ ಮರ್ದಾಳ ಗ್ರಾಮ ಪಂಚಾಯತ್ ಮಾಜಿ ಸದಸ್ಯೆಯ ಪುತ್ರ ರಾಮಕೃಷ್ಣ ಎಂಬವರು ಅರ್ಜಿ-49ನ್ನು ಭರ್ತಿ ಮಾಡಿ ಮತದಾನ ಕೇಂದ್ರದ ಅಧಿಕಾರಿಗಳಿಗೆ ನೀಡಿದರು.

ಮಾಹಿತಿ ಕೊರತೆ: ಉಪ್ಪಿನಂಗಡಿ ಸಮೀಪದ ಪುಳಿತ್ತಡಿ ಶಾಲೆಯಲ್ಲಿರುವ 43ನೆ ಮತದಾನ ಕೇಂದ್ರದಲ್ಲಿ ಮತದಾರ ದೀಪಕ್ ರೈ ಎಂಬವರು ಅಧಿಕಾರಿಗಳನ್ನು 49 ಒ ಬಗ್ಗೆ ಪ್ರಶ್ನಿಸಿ ವಿಫಲರಾದರು.ಈ ನಿಯಮ' ನೋಟ ಓಟು' ಸಂಬಂಧಿಸಿದ ಪಾರಂ 17ನ್ನು ಅಧಿಕಾರಿಗಳು ಹುಡುಕಾಟ ನಡೆಸಲು ಆರಂಭಿಸಿದರು.

ಇದರಿಂದಾಗಿ ಸುಮಾರು ಅರ್ಧ ಗಂಟೆಯಷ್ಟು ಹೊತ್ತು ಈ ಕೇಂದ್ರದಲ್ಲಿ ಮತದಾನವೇ ಸ್ಥಗಿತ ಗೊಂಡಿತು. ಇವರು ಮತ ಹಾಕದ್ದರಿಂದ ಉಳಿದ ವರು ಹೊರಗೆ ಸರತಿ ಸಾಲಿನಲ್ಲಿ ಕಾಯುವಂತಾಯಿತು. ಎರಡು ಗಂಟೆಯಷ್ಟು ಕಾಲ ಮತಗಟ್ಟೆಯೊಳಗೆ ಕಾದು ಸುಸ್ತಾದ ದೀಪಕ್ ರೈ ಕೊನೆಗೆ ಅಧಿಕಾರಿಗಳಿಂದ ಯಾವುದೇ ಸಹಕಾರ ಸಿಗದ ಕಾರಣ ಬೇಸರಗೊಂಡು ಮತ ಚಲಾಯಿಸಿ ಹೊರ ನಡೆದರು. ಈ ರೀತಿ ಪ್ರಕರಣ ರಾಜ್ಯದ ಕೆಲವೆಡೆ ಆಗಿದ್ದು, 49 ಒ ಹಕ್ಕು ಚಲಾಯಿಸಲು ಆಗದ ಕಾರಣ ಮತದಾರರು ಗರಂ ಆದ ಘಟನೆಗಳು ನಡೆದಿದೆ.

ಬೆಂಗಳೂರಿನ ವಿಜಯನಗರ ಕ್ಷೇತ್ರದಲ್ಲಿ ರಾಜೇಶ್ ಎಂಬ ಮತದಾರ ಅವರಿಗೂ ಇದೇ ರೀತಿ ಸಮಸ್ಯೆ ಎದುರಾಯಿತಂತೆ. ಮತದಾನ ತಿರಸ್ಕಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ, ಈ ರೀತಿ ಮಾಡಿದರೆ 49 ಒ ಹಕ್ಕು ಚಲಾವಣೆ ಗೌಪ್ಯತೆ ಮಾಯವಾಗುತ್ತದೆ. ಮತ ಕೂಡಾ ಗಣನೆಗೆ ಬರುವುದಿಲ್ಲ. ಒಟ್ಟಾರೆ 2011 ರಲ್ಲೇ 49 ಒ ಹಕ್ಕು ಚಲಾವಣೆಗೆ ಅವಕಾಶ ಕಲ್ಪಿಸಿದರೂ 2013 ರಲ್ಲೂ ಇನ್ನೂ ಗೊಂದಲ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+