ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆಯ ಕೆಲವು ಅಂಕಿ-ಸಂಖ್ಯೆಗಳು

|
Google Oneindia Kannada News

Voting
ಬೆಂಗಳೂರು, ಮೇ 5 : ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ಪ್ರಾರಂಭವಾಗಿದ್ದು, ವಿವಿಧ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಭವಿಷ್ಯವನ್ನು ಮತದಾರ ಬರೆಯಲಿದ್ದಾನೆ. ಮತದಾನ ಮಾಡಲು ಜನರು ಸಾಲುಗಟ್ಟಿ ನಿಂತಿದ್ದು, ತಮ್ಮ ಹಕ್ಕು ಚಲಾಯಿಸಲು ಸಿದ್ದರಾಗಿದ್ದಾರೆ. ಮತದಾನದ ಅವಧಿಯನ್ನು ಒಂದು ಗಂಟೆ ವಿಸ್ತರಿದ್ದು, ಬಿಸಿಲ ನಾಡಿನ ಜಿಲ್ಲೆಗಳ ಜನರಿಗೆ ಕೊಂಚ ಸಮಾಧಾನ ನೀಡಿದೆ.

ಮತದಾನ ಸರಿಯಾಗಿ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾಗಿದೆ. ಸಂಜೆ 6 ಗಂಟೆ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

* ಒಟ್ಟು ಮತಗಟ್ಟೆಗಳು 52,034

* ಒಟ್ಟು ಅಭ್ಯರ್ಥಿಗಳು 2940

* ಪುರುಷ ಅಭ್ಯರ್ಥಿಗಳು 2770, ಮಹಿಳಾ ಅಭ್ಯರ್ಥಿಗಳು 170

* ಒಟ್ಟು ಮತದಾರರು : 4,36,14,881

* ಪುರುಷರು : 2,22,73,618

* ಮಹಿಳೆಯರು : 2,13,38,344

* ಲೈಂಗಿಕ ಅಲ್ಪ ಸಂಖ್ಯಾತರು : 2919

* ಹೆಚ್ಚು ಮತದಾರರು ಬೆಂಗಳೂರು ದಕ್ಷಿಣ ಕ್ಷೇತ್ರ 4,47,914

* ಕಡಿಮೆ ಮತದಾರರು 1,49,980 ಶೃಂಗೇರಿ ಕ್ಷೇತ್ರ

ಮತ ಕೇಂದ್ರಗಳ ಬಳಿಯ ನಿಬಂಧನೆಗಳು

* ರಾಜಕೀಯ ಪಕ್ಷದವರು ವಾಹನದಲ್ಲಿ ಮತದಾರರನ್ನು ಕರೆ ತರುವಂತಿಲ್ಲ

* ಮತದಾರರಿಗೆ ಊಟ ನೀಡುವಂತಿಲ್ಲ

* ರಾಜಕೀಯ ಪಕ್ಷಗಳು 200 ಮೀ. ದೂರದಲ್ಲಿ ಬೂತ್ ಏಜೆಂಟರ ನೇಮಿಸಬಹುದು

* ನಾಯಕರು ಮತ ಹಾಕಿದ ನಂತರ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ

* ನೀವು ನಿಮ್ಮ ಕುಟುಂಬದವರ ಜತೆ ಮಾತ್ರ ಖಾಸಗಿ ವಾಹನದಲ್ಲಿ ಬರಬಹುದು

* ವಿಕಲ ಚೇತನರ ಜತೆ ಕೇವಲ ಒಬ್ಬರು ಸಹಾಯಕರು ಮಾತ್ರ ತೆರಳಬಹುದು

* ಎರಡು ಕಡೆ ಮತದಾರರ ಪಟ್ಟಿಯಲ್ಲಿದ್ದರೆ ಒಂದು ಕಡೆ ಮಾತ್ರ ಮತ ಚಲಾಯಿಸಿ

* ಯಾವ ಅಭ್ಯರ್ಥಿಯೂ ಸರಿಯಿಲ್ಲ ಎಂಬ ಭಾವನೆ ಬಂದರೆ ಮತಗಟ್ಟೆಯಲ್ಲಿ ಸಿಗುವ ಸಂಬಂಧಪಟ್ಟ ಫಾರ್ಮ್ ಭರ್ತಿ ಮಾಡಿ ಪೆಟ್ಟಿಗೆಯೊಳಗೆ ಹಾಕಿ ಬನ್ನಿ

English summary
After weeks of hectic campaigning, In the State Voting began with amid tight security at 7 am. It will continue till 6 pm. Over 4 core voters will cast their votes. totally 2940 candidates in the fray.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X