ಆಸ್ಪತ್ರೆಯಲ್ಲಿ ಅತ್ಯಾಚಾರ ಮಾಡಿದ ವೈದ್ಯ ಪರಾರಿ

ಠಾಣೆ ಜಿಲ್ಲೆಯ ದಿವಾ ಟೌನ್ ಷಿಪ್ ನಲ್ಲಿರುವ ಡಾ. ವಿಲಿಯಂ ಜಾಕಬ್ ಕಳೆದ ತಿಂಗಳು ಚಿಕಿತ್ಸೆಗೆಂದು ಬಂದ 24 ವರ್ಷ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಮುಂಬ್ರಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಬಾಧಿತ ಯುವತಿ ದೂರು ನೀಡಿದ್ದಾರೆ. 'ಏಪ್ರಿಲ್ 24ರಂದು ಚಿಕಿತ್ಸೆಗಾಗಿ ಡಾ. ವಿಲಿಯಂ ಆಸ್ಪತ್ರೆಗೆ ದಾಖಲಾಗಿದ್ದೆ. ಆಗ ಚಿಕಿತ್ಸೆಯ ನೆಪದಲ್ಲಿ ನನಗೆ ನಿದ್ದೆ ಔಷಧ ಮಿಶ್ರಿತ ಸಲೈನ್ ನೀಡಿದರು. ಇದರಿಂದ ನಾನು ಪ್ರಜ್ಞಾಶೂನ್ಯಳಾದೆ. ಆ ಸಂದರ್ಭದಲ್ಲಿ ಆರೋಪಿ ತನ್ನ ಮಾನಭಂಗ ಮಾಡಿದ್ದಾನೆ' ಎಂದು ದೂರಿನಲ್ಲಿ ಯುವತಿ ವಿವರಿಸಿದ್ದಾರೆ.
ಈ ದೂರಿನನ್ವಯ ಪೊಲೀಸರು ಡಾ. ವಿಲಿಯಂ ಜಾಕಬ್ ವಿರುದ್ಧ ನಿನ್ನೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಆರೋಪಿ ಪರಾರಿಯಾಗಿದ್ದಾನೆ.












Click it and Unblock the Notifications