ನರೇಂದ್ರ ಮೋದಿ, ಬಿಜೆಪಿ ವಿರುದ್ಧ ಕಪಿಲ್ ಲೇವಡಿ

In Karnataka, Sibal indulges in ‘black humour’ against BJP
ಬೆಂಗಳೂರು, ಮೇ 3: ಬಿಜೆಪಿ ಕರ್ನಾಟಕವನ್ನು ಭ್ರಷ್ಟಾಚಾರದ ಪ್ರಯೋಗಾಲಯವನ್ನಾಗಿ ಮಾಡಿ ಕೊಂಡು ಘನತೆ-ಗೌರವವನ್ನು ಹಾಳು ಮಾಡಿದೆ. ನರೇಂದ್ರ ಮೋದಿ ಮಾಧ್ಯಮಗಳ ಹೀರೋ ಅಷ್ಟೇ, ಜನರ ಹೀರೋ ಅಲ್ಲ ಎಂದು ಕೇಂದ್ರ ಸಚಿವ ಕಪಿಲ್ ಸಿಬಲ್ ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ(ಮೇ.3) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ಕರ್ನಾಟಕ ಆರ್ಥಿಕವಾಗಿ ಕೈಗಾರಿಕಾ ಕ್ಷೇತ್ರದಲ್ಲಿ ತೀರ ಹಿಂದುಳಿದಿದೆ. ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ.

ಗ್ರೀನ್ ಸಿಟಿ ಎಂದು ಹೆಸರು ಪಡೆದುಕೊಂಡಿದ್ದ ಬೆಂಗಳೂರು ನಗರ ಈಗ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಗೊಂಡು ಬೆಂಗಳೂರು ಎಂದರೆ ಈಗ ಮೂಗು ಮುಚ್ಚಿಕೊಳ್ಳಬೇಕಾದಂಥ ಪರಿಸ್ಥಿತಿಗೆ ಬಿಜೆಪಿ ತಂದಿಟ್ಟಿದೆ ಎಂದು ಹಿಗ್ಗಾಮುಗ್ಗಾ ಕಿಚಾಯಿಸಿದರು.

ಹಾಸ್ಯ, ಅಣಕು ಮತ್ತು ವ್ಯಂಗ್ಯಭರಿತ ಮಾತು ಗಳಿಂದ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಸಿಬಲ್, ಎಲ್ ಓಸಿ ಎಂದರೆ ಲಿಬರ್ಟಿ ಆಫ್ ಕರಪ್ಷನ್, ಸಿಎಂಇಗೆ Corruption Made Easy, corruption ಬದಲಿಗೆ Yeddyurruption ಮುಂತಾದ ಹೊಸ ಪದಗುಚ್ಛಗಳನ್ನು ಹೇಳಿದರು.

ಗಾಂಧೀಜಿಯವರು ತಮ್ಮ ಜೀವನದ ಅನುಭವ ಕುರಿತು ಎಕ್ಸಪರಿಮೆಂಟ್ ವಿತ್ ಮೈ ಟ್ರೂತ್ ಎಂಬ ಪುಸ್ತಕ ಬರೆದಿದ್ದರೆ ಬಿಜೆಪಿ ಮಾಜಿ ಅಧ್ಯಕ್ಷ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಕ್ಸಪೀರಿಯನ್ಸ್ ವಿತ್ ಕರಪ್ಷನ್ ಎಂಬ ಪುಸ್ತಕ ಬರೆದರೆ ದಾಖಲೆ ರೀತಿಯಲ್ಲಿ ಮಾರಾಟವಾಗಬಹುದು ಎಂದು ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಈಗ 30 ಲಕ್ಷಕ್ಕೂ ಹೆಚ್ಚು ಜನ ನಿರುದ್ಯೋಗಿಗಳಿದ್ದಾರೆ. ಜನಸಂಖ್ಯೆಯ ಶೇ.4ರಷ್ಟು ಜನ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕರ್ನಾಟಕ ರಾಜ್ಯ 12ನೆ ಸ್ಥಾನದಲ್ಲಿದೆ. ಕೇರಳ, ಆಂಧ್ರ ಪ್ರದೇಶಕ್ಕಿಂತಲೂ ಹಿಂದುಳಿದಿದೆ. ಅಪೌಷ್ಟಿಕ ಮಕ್ಕಳ ವಿಚಾರ ತೆಗೆದುಕೊಂಡರೆ ಕರ್ನಾಟಕವೇ ನಂ.1 ಸ್ಥಾನದಲ್ಲಿದೆ ಎಂದು ಅಂಕಿ-ಅಂಶಗಳ ವಿವರಣೆ ನೀಡಿದರು.

2005ರಲ್ಲಿ ಕರ್ನಾಟಕದ ಸಾಲದ ಪ್ರಮಾಣ 49,000 ಕೋಟಿ ರು ಇತ್ತು. ಈಗ ಸಾಲದ ಪ್ರಮಾಣ 1.2 ಲಕ್ಷ ಕೋಟಿ ರು (ಬಜೆಟ್ ಗಾತ್ರಕ್ಕಿಂತ ಹೆಚ್ಚು) ದಾಟಿದೆ. ಇದೇ ಬಿಜೆಪಿ ಸಾಧನೆ ಎಂದರು. ಕಡೆಗೆ ಜೆಡಿಎಸ್ ಪಕ್ಷವನ್ನು ಬಿಡದೆ JD(secular) ಅಲ್ಲ Janata Dal (Saffron) ಎಂದರು. ಮತ್ತೊಮ್ಮೆ ಬಿಜೆಪಿ ಜೊತೆ ಮೈತ್ರಿ ಸರ್ಕಾರದ ಕನಸು ಕಾಣುವ ಜೆಡಿಎಸ್ ಗೆ ಬದ್ಧತೆ ಇಲ್ಲ ಎಂದರು.

ಏನೇ ಆಗಲಿ ರಾಜ್ಯದಲ್ಲಿ ನಮಗೆ ಬಹುಮತ ಬರುತ್ತೆ. ಯಾರೊಂದಿಗೂ ಸೇರಿ ಸರ್ಕಾರ ಮಾಡುವಂತಹ ಪ್ರಶ್ನೆ ಬರೋದಿಲ್ಲ. ಜೆಡಿಎಸ್ ಮುಖನೇ ಬೇರೆ, ಮುಖವಾಡವೇ ಬೇರೆ. ಆ ಪಕ್ಷವನ್ನು ನಂಬಲು ಸಾಧ್ಯವಿಲ್ಲ. ಅದರೊಂದಿಗೆ ಹೊಂದಾಣಿಕೆ ಮತ್ತು ಮೈತ್ರಿ ಸಾಧ್ಯವೇ ಇಲ್ಲ. ಹಿಂದಿನ ಕಹಿ ಅನುಭವಗಳಿಂದ ನಾವು ಪಾಠ ಕಲಿತಿದ್ದೇವೆ ಎಂದರು.

ಗುಜರಾತಿನಲ್ಲಿಮೋದಿ ಮಾಡಿದ್ದು ಏನೂ ಇಲ್ಲ, ಅವರು ಅಧಿಕಾರಕ್ಕೆ ಬರುವ ಮುನ್ನವೇ ಗುಜರಾತ್ ಅಭಿವೃದ್ಧಿಯಾಗಿತ್ತು. ಮೋದಿಯವರು ಮಾಧ್ಯಮಗಳ ಹೀರೋನೆ ಹೊರತು ಜನರ ಹೀರೋ ಆಗಿಲ್ಲ ಎಂದರು. ಸರಬ್ಜಿತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳ ಮಾತುಕತೆ, ಸಂಧಾನ ಪ್ರಕ್ರಿಯೆಯನ್ನು ನಿಲ್ಲಿಸುವುದು ಒಳ್ಳೆಯದಲ್ಲ. ಅದು ಮುಂದುವರಿಯಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+