• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಬ್ಲಿಕ್ ಟಿವಿ ಚುನಾವಣಾ ಸಮೀಕ್ಷೆ ಫಲಿತಾಂಶ

By Srinath
|
public-tv-kannada-ubika-prepoll-survey-results
ಬೆಂಗಳೂರು, ಮೇ 2: ಚುನಾವಣೆಗಿನ್ನು ಮೂರೇ ದಿನ ಇರುವಾಗ ತಾಜಾ ಸಮೀಕ್ಷೆಯೊಂದು ಹೊರಬಿದ್ದಿದೆ. ಪಬ್ಲಿಕ್ ಟಿವಿ - ಯುಬಿಕಾದ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ನೂರರ ಆಸುಪಾಸಿನಲ್ಲಿ ತೇಲಾಡುತ್ತಿದೆ. ಆದರೆ ಬಹುಮತಕ್ಕೆ ಕೆಲ ಸ್ಥಾನಗಳ ಕೊರತೆ ಎದುರಾಗಲಿದೆ ಎನ್ನುವುದು 'ಪಬ್ಲಿಕ್ ಲೆಕ್ಕಾಚಾರ'.

ಒಂದು ತಿಂಗಳ ಹಿಂದೆ ಇದ್ದ ಕಾಂಗ್ರೆಸ್ ಪರ ಜನಾಭಿಪ್ರಾಯ ಈಗ ತುಸು ಕಡಿಮೆಯಾಗಿದ್ದು, 96ರಿಂದ 106 ಸ್ಥಾನಗಳನ್ನು ಗೆಲ್ಲಬಹುದು. ಪರಿಣಾಮವಾಗಿ, ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಯಾಗಬಹುದು. ಈ ಮೊದಲು ಪ್ರಕಟವಾಗಿದ್ದ ಬೇರೆ ಬೇರೆ ಮಾಧ್ಯಮ ಸಂಸ್ಥೆಗಳ ಸಮೀಕ್ಷೆಗಳ ಪ್ರಕಾರ ಕಾಂಗ್ರೆಸ್ಸಿಗೆ ಸರಳ ಬಹುಮತ ಸಿಗಲಿದೆ ಎಂಬ ಅಂದಾಜು ಇತ್ತು.

'ಮತದಾನಕ್ಕೆ ಇನ್ನೂ ಮೂರು ದಿನ ಬಾಕಿ ಇದೆ. ಹಾಗಾಗಿ, ಅಂಕಿಗಳು ಆಚೆ ಈಚೆ ಆಗಬಹುದು. ಅದು ಮತದಾರನ ಕೈಯಲ್ಲಿದೆ' ಎಂದು ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್ ಆರ್ ರಂಗನಾಥ್ ಒನ್ಇಂಡಿಯಾ ಕನ್ನಡಕ್ಕೆ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಗಮನಾರ್ಹವೆಂದರೆ ಸಮೀಕ್ಷೆಯಲ್ಲಿ ಅತ್ಯುತ್ತಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಎಚ್ ಡಿ ಕುಮಾರಸ್ವಾಮಿ ಅವರು ಅಗ್ರಸ್ಥಾನ ಪಡೆದಿದ್ದಾರೆ. ಅವರಿಗೆ ಶೇ. 26ರಷ್ಟು ಅಂಕ ದೊರೆತರೆ ಎರಡನೆಯ ಸ್ಥಾನದಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಶೇ. 23ರಷ್ಟು ಅಂಕಗಳು ದೊರೆತಿವೆ. ಇನ್ನು ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಜಗದೀಶ್ ಶೆಟ್ಟರ್ ಮತ್ತು ಡಾ. ಪರಮೇಶ್ವವರ್ ಅವರಿಗೆ ನಂತರದ ಸ್ಥಾನಗಳು ಸಿಗಲಿವೆ.

ಅಂಕ ಗಣಿತ:224 ಕ್ಷೇತ್ರಗಳ ಕರ್ನಾಟಕದ 14ನೇ ವಿಧಾಸನಭೆಯಲ್ಲಿ ಬಹುಮತಕ್ಕಾಗಿ 113 ಸ್ಥಾನಗಳ ಅಗತ್ಯವಿದೆ. ಈ ಮಧ್ಯೆ, ಪಿರಿಯಾಪಟ್ಟಣದ ಬಿಜೆಪಿ ಅಭ್ಯರ್ಥಿ ಸಾವಿನಿಂದ ಚುನಾವಣೆ ಮೇ 28ಕ್ಕೆ ಮುಂದೂಡಲಾಗಿದೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 34.76ರಷ್ಟು ಮತಗಳನ್ನು ಗಳಿಸಿತ್ತು. ಈ ಬಾರಿ ಶೇ. 37.50ರಷ್ಟು ಮತ ಪಡೆಯಬಹುದು. ಅಂದರೆ ಶೇ. 2.64ರಷ್ಟು ಹೆಚ್ಚು. ಇನ್ನು ಕಳೆದ ಬಾರಿ ಶೇ. 33.86ರಷ್ಟು ಮತ ಗಳಿಸಿದ್ದ ಬಿಜೆಪಿ ಈ ಬಾರಿ ಶೇ. 21.77ರಷ್ಟು ಮತಗಳನ್ನು ಪಡೆಯಲಿದೆ. ಅಂದರೆ ಶೇ. 12.09ರಷ್ಟು ಮತಗಳನ್ನು ಕಳೆದುಕೊಳ್ಳಲಿದೆ. ಕಳೆದ ಬಾರಿ 28 ಸ್ಥಾನಗಳಲ್ಲಿದ್ದ ಜೆಡಿಎಸ್ ಈಗ 40 ರಿಂದ 50 ಸ್ಥಾನ ಪಡೆಯಬಹುದು. ಪಕ್ಷದ ಮತ ಗಳಿಕೆ ಪ್ರಮಾಣ ಶೇ. 1.57ರಷ್ಟು ಏರಿಕೆಯಾಗಲಿದೆ.

ಫಲಿತಾಂಶದಿಂದ ಹೊರಹೊಮ್ಮಿರುವ ದಿಕ್ಸೂಚಿ:

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ : 96-106
ಭಾರತೀಯ ಜನತಾ ಪಕ್ಷ : 45-55
ಜಾತ್ಯಾತೀತ ಜನತಾ ದಳ : 40-50
ಕರ್ನಾಟಕ ಜನತಾ ಪಕ್ಷ :15-20
ಬಡವರು ಶ್ರಮಿಕರು ರೈತರ ಕಾಂಗ್ರೆಸ್ ಪಕ್ಷ : 2-3
ಇತರರು : 6-7

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly election 2013. Karnataka Votes : Congress ahead of its immediate competitors in the pre-poll survey for the Assembly Elections 2013 by @PublicTVNews in association with UBIKA Research & Analytics Pvt Ltd. The pointers - @KtakaCongress 96-106, @bjpkarnataka 45-55, JDS 40-50, @KJPKarnataka 15-20, BSR 2-3, others- 6.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more