• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ವಯಂ-ಸುಪಾರಿ ಕೊಡುತ್ತಿರುವ ಕಾಂಗ್ರೆಸ್ಸಿಗರು

By Srinath
|
ಕೋಲಾರ, ಏ.29: ರಾಜ್ಯ ಕಾಂಗ್ರೆಸ್ಸಿನಲ್ಲಿ ಏನಾಗುತ್ತಿದೆ? 'ಕೈ'ಗೆ ಬಂದ ತುತ್ತನ್ನು ಬಾಯಿಗೆ ಹಾಕಿಕೊಳ್ಳುವಲ್ಲಿ ಕಾಂಗ್ರೆಸ್ಸಿಗರು ವಿಫಲರಾಗುತ್ತಿದ್ದಾರಾ? ಸ್ಥಳೀಯ ಸಂಸ್ಥೆ ಚುನಾವಣೆ ಸಮಯದಲ್ಲಿ ಗಾಢ ನಿದ್ರೆಯಲ್ಲಿದ್ದ ಪಕ್ಷವನ್ನು ಜಯದ ಹೊಸ್ತಿಲಿಗೆ ತಳ್ಳಲ್ಪಟ್ಟರೂ ಅದನ್ನು ಬಂಡವಾಳ ಮಾಡಿಕೊಳ್ಳುವಲ್ಲಿ ಆ ಪಕ್ಷ ಎಡವುತ್ತಿದೆಯಾ? ಎಂಬ ಆತಂಕದ ಪ್ರಶ್ನೆಗಳು ರಾಜ್ಯದ ಬಹಳಷ್ಟು ಕ್ಷೇತ್ರಗಳಿಂದ ಕೇಳಿಬರುತ್ತಿದೆ.

ಯಾಕೆ ಹೀಗೆ ಎಂದು ಕೇಳುವುದಕ್ಕೆ ಮುಂಚೆ ಇದಕ್ಕೆ ಕಾರಣಕರ್ತರು ಯಾರು ಅಂತ ನೋಡಿದರೆ ಪಕ್ಷದ ಘಟಾನುಘಟಿ, ಹಿರಿಯ ನಾಯಕರೇ ಎದುರಿಗೆ ಕಾಣಸಿಗುತ್ತಾರೆ. ಅದರಲ್ಲೂ ಒಬ್ಬ ಕೃಷ್ಣ ಅವರು ನೀಡಿರುವ ಪೆಟ್ಟೇ ಸಾಕು, ಕಾಂಗ್ರೆಸ್ಸಿಗೆ ಭಾರಿ ಹೊಡೆತ ನೀಡಲು.

ಚುನಾವಣೆಗೂ ಮುನ್ನವೇ ತಮ್ಮ 'ಕೈ'ಚಳಕ ತೋರಗೊಡುತ್ತಿದ್ದ ಕೃಷ್ಣ ಸಾಹೇಬರು ಆನಂತರ, ಚುನಾವಣೆ ಹೊಸ್ತಿಲಲ್ಲಿ ಅರಳುಮರಳು ಎಂಬಂತೆ ಮೇಲಿಂದ ಮೇಲೆ ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆಗಳನ್ನೇ ನೀಡುತ್ತಾ ಬರುತ್ತಿದ್ದಾರೆ. ಇದು ಪಕ್ಷದ ಕಾರ್ಯಕರ್ತರನ್ನು ಅಧೀರನ್ನಾಗಿಸಿದೆ.

ಇನ್ನು ಕೆಲವು ನಾಯಕರು ನಾನಾ ಲೆಕ್ಕಾಚಾರಗಳ ಬಳಿಕ, ತಮ್ಮದೇ ಪಕ್ಷದ ಅಭ್ಯರ್ಥಿಗಳ ಸೋಲಿಗೆ ಸುಪಾರಿ ನೀಡಿರುವುದು/ಪಡೆದಿರುವುದು ಸುಳ್ಳಲ್ಲ.

ಈ ಮಧ್ಯೆ, ಕೇಂದ್ರ ಕೈಗಾರಿಕಾ ಸಚಿವ ಕೆಎಚ್ ಮುನಿಯಪ್ಪ ಅವರದು ವಿಚಿತ್ರ ಪರಿಸ್ಥಿತಿ. ದಶಕಗಳ ಕಾಲದ ತಮ್ಮ ಅಖಂಡ ನಿಷ್ಠೆಯನ್ನು ಪಕ್ಷದ ಪಾದ ತಲದಲ್ಲಿಟ್ಟು, ಪಕ್ಷಕ್ಕಾಗಿ ನಾನೂ ದುಡಿದಿದ್ದೇನೆ. ನನ್ನ ಮಗಳಿಗೂ ಟಿಕೆಟ್ ಕೊಡಿ ಎಂದು ತಮ್ಮ ಪುತ್ರಿ ರೂಪಾ ಶಶಿಧರ್ ಅವರ ಪರವಾಗಿ ಮೇಡಂ ಸೋನಿಯಾರ ಮುಂದೆ ಟಿಕೆಟಿಗೆ ಬೇಡಿಕೆಯಿಟ್ಟಿದ್ದರು.

ಆದರೆ ಮಗಳನ್ನು ಕೆಜಿಎಫ್ ಕ್ಷೇತ್ರದ ಶಾಸಕಿಯನ್ನಾಗಿಸಲು ಶ್ರಮಿಸುತ್ತಿದ್ದ ಸಚಿವ ಮುನಿಯಪ್ಪಗೆ ಟಾಂಗ್ ಕೊಟ್ಟ ಕಾಂಗ್ರೆಸ್ ಯಾಕೋ ರೂಪಾಗೆ ಟಿಕೆಟ್ ನೀಡದೆ ವಿ ಶಂಕರ್ ಅವರನ್ನು ಕಣಕ್ಕಿಳಿಸಿಬಿಟ್ಟಿತು. ಇದೇ ವೇಳೆ ಮುನಿಯಪ್ಪ ಅವರಷ್ಟೇ ಅಖಂಡ ನಿಷ್ಠೆ ಹೊಂದಿದ್ದ ಧರಂ ಸಿಂಗ್, ಖರ್ಗೆ ಪುತ್ರರಿಗೆ ಟಿಕೆಟ್ ನೀಡಿದ್ದು ಮುನಿಯಪ್ಪ ಅವರನ್ನು ಮತ್ತಷ್ಟು ನಿರಾಶೆಗೊಳಿಸಿತ್ತು.

ಇದರಿಂದ ಬೇಸತ್ತ ಮುನಿಯಪ್ಪ ಈಗ ಮಗಳಿಗೆ ಟಿಕೆಟ್ ಸಿಗದ ಬೇಸರದಲ್ಲಿ ಶಂಕರ್ ಪರ ಪ್ರಚಾರವನ್ನೇ ನಡೆಸುತ್ತಿಲ್ಲವಂತೆ. ಸ್ವತಂ ಶಂಕರ್ ಅವರೇ ಈ ಬಗ್ಗೆ ಸೋನಿಯಾ ಮೇಡಂಗೆ ದಿಢೀರ್ ಫ್ಯಾಕ್ಸ್ ಮಾಡಿ, ಮುನಿಯಪ್ಪಾ ಪ್ರಚಾರಕ್ಕೆ ಬರುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ. ಜತೆಗೆ ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿಗೆ ಮಾರಕವಾಗಿರುವುದೇ ಅಲ್ಲದೆ ಜೆಡಿಎಸ್ ಅಭ್ಯರ್ಥಿಯ ಗೆಲುವುಗೇ ಒಳಗೊಳಗೇ ಸಂಚು ರೂಪಿಸಿದ್ದಾರೆ ಎಂಬುದು ಶಂಕರ್ ಅಳಲು.

ಸತತವಾಗಿ 6 ಬಾರಿ ಕೋಲಾರದಿಂದ ಸಂಸದರಾಗಿ ಆಯ್ಕೆಯಾಗಿ, ಕಾಂಗ್ರೆಸ್ಸಿನಲ್ಲಿ ತಳವೂರಿರುವ 65 ವರ್ಷದ ಕೆಎಚ್ ಮುನಿಯಪ್ಪ ಅವರಿಗೆ ಹೀಗಾಬಾರದಿತ್ತು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು kgf ಸುದ್ದಿಗಳುView All

English summary
KGF Congress Candidate V Shankar complaints about KH Muniyappa to Sonia as Muniyappa fails to turn up for the election canvass. The Congress Union Minister KH Muniyappa was keen on paving way for the entry of his daughter, Roopaa Shashidhar, into politics from KGF, he missed the bus.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more