ಅಪ್ರಾಪ್ತ ವಿದ್ಯಾರ್ಥಿನಿ ಜೊತೆ ಸೆಕ್ಸ್ ಗೆ ಶಿಕ್ಷೆ

Indian teacher jailed for sex with 14-year-old girl student
ಸಿಂಗಾಪುರ,ಏ.26: ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಪರ್ಕ ನಡೆಸಿದ ಆರೋಪದ ಮೇಲೆ ಭಾರತೀಯ ಮೂಲದ ಭಾರತೀಯ ಶಿಕ್ಷಕರೊಬ್ಬರಿಗೆ ಸಿಂಗಾಪುರ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.

ಅರವಿಂದ್ ಎಸ್. ಮೆನನ್ ಎಂಬ 25ರ ಹರೆಯದ ಭಾರತೀಯ ಮೂಲದ ಶಿಕ್ಷಕ 2009ರ ಮೇ ಹಾಗೂ ಜುಲೈ ನಡುವಿನ ಅವಧಿಯಲ್ಲಿ ಹದಿನಾಲ್ಕರ ಹರೆಯದ ವಿದ್ಯಾರ್ಥಿನಿಯೊಂದಿಗೆ ಆಕೆಯ ಒಪ್ಪಿಗೆಯ ಮೇರೆಗೆ ಲೈಂಗಿಕ ಸಂಪರ್ಕ ಬೆಳೆಸಿದ್ದ ಆರೋಪ ಹೊರಿಸಲಾಗಿದೆ. ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ ಎಂದು ಚಾನೆಲ್ ನ್ಯೂಸ್ ಏಷ್ಯಾ ವರದಿ ಮಾಡಿದೆ.

ಅರವಿಂದ್ ಮೆನನ್ ವಿದ್ಯಾರ್ಥಿನಿಗೆ ಶಿಕ್ಷಕನಾಗಿದ್ದ ಸಂದರ್ಭದಲ್ಲಿ ಆಕೆಯ ಸ್ನೇಹ ಸಂಪಾದಿಸಿ ದೈಹಿಕ ಸಂಪರ್ಕ ನಡೆಸಿದ್ದು, ಬಳಿಕ ಆಕೆ ನಿರಾಕರಿಸಿದಾಗ, ಈ ಹಿಂದೆ ನಡೆಸಿರುವ ಕೃತ್ಯದ ವೀಡಿಯೊ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದು ಬಂದಿದೆ.

ಇಷ್ಟೇ ಅಲ್ಲದೆ ಅತಿ ಎತ್ತರದ ಸಾರ್ವಜನಿಕ ಹೌಸಿಂಗ್ ಅಪಾರ್ಟ್ಮೆಂಟ್ ಕಟ್ಟಡದ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಇದಕ್ಕೆ ನೀನೆ ಕಾರಣ ಎಂದು ಬರೆಯುತ್ತೇನೆ ಎಂದು ಆಕೆಯನ್ನು ಮೆನನ್ ಹೆದರಿಸಿದ್ದಾನೆ.

ವಿದ್ಯಾರ್ಥಿನಿಯು ಅಪ್ರಾಪ್ತ ವಯಸ್ಕಳಾಗಿದ್ದು, ಶಿಕ್ಷಕರ ಮೇಲಿನ ನಂಬಿಕೆಯನ್ನು ಅರವಿಂದ್ ಮೆನನ್ ದುರುಪಯೋಗ ಪಡಿಸಿಕೊಂಡಿದ್ದಾರೆ. ಸೆಕ್ಸ್ ಅನ್ನು ವಿಡಿಯೋ ಮಾಡಿ ಬೆದರಿಸಿರುವುದು ಗುರುತರ ಅಪರಾಧವಾಗಿದೆ. ಇದು ಅವರ ಮೊದಲ ಕ್ರೈಂ ಆಗಿದೆ ಹೀಗಾಗಿ ಶಿಕ್ಷೆ ಪ್ರಮಾಣದಲ್ಲಿ ಹೆಚ್ಚಿನ ಅವಧಿ ನೀಡಲಾಗಿಲ್ಲ ಎಂದು ತೀರ್ಪು ಪ್ರಕಟಿಸಿರುವ ಇಲ್ಲಿನ ಜಿಲ್ಲಾ ನ್ಯಾಯಾಧೀಶ ಶಿವ ಷಣ್ಮುಗಂ ಹೇಳಿದ್ದಾರೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+