ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಯು ವಿದ್ಯಾರ್ಥಿಗಳಿಗೆ 9 ಗ್ರೇಸ್ ಅಂಕ : ಕೋರ್ಟ್ ಆದೇಶ

|
Google Oneindia Kannada News

High Court of Karnataka
ಬೆಂಗಳೂರು, ಏ. 25 : ದ್ವಿತೀಯ ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಆರು ಪಠ್ಯೇತರ ಪ್ರಶ್ನೆಗಳನ್ನು ತಪ್ಪಾಗಿ ಮುದ್ರಿಸಿ ದ್ದ ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ವಿದ್ಯಾರ್ಥಿಗಳಿಗೆ 9 ಗ್ರೇಸ್ ಅಂಕಗಳನ್ನು ನೀಡುವಂತೆ ಆದೇಶ ನೀಡಿದೆ.

ಪಿಯುಸಿ ಗಣಿತ ಪ್ರಶ್ನೆ ಪತ್ರಿಕೆಯಲ್ಲಿ ಆರು ಪ್ರಶ್ನೆಗಳನ್ನು ತಪ್ಪಾಗಿ ಮುದ್ರಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಕ್ರಮ ಪ್ರಶ್ನಿಸಿ ಎಚ್.ಎಂ.ಕೌಶಿಕ್ ಎಂಬುವವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಗುರುವಾರ ಪ್ರಕರಣ ತೀರ್ಪು ನೀಡಿದ ನ್ಯಾಯಾಲಯ ಗ್ರೇಸ್ ಅಂಕ ನೀಡುವಂತೆ ಆದೇಶಿಸಿದೆ.

ಗ್ರೇಸ್ ಅಂಕ ನೀಡುವುದರಿಂದ ಮರು ಪರೀಕ್ಷೇ ನಡೆಸುವ ಅಗತ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ್ದು, ಪ್ರಶ್ನೆ ಪತ್ರಿಕೆ ತಯಾರಿಸುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಇಲಾಖೆಗೆ ಕಠಿಣ ಎಚ್ಚರಿಕೆ ನೀಡಿದೆ. ಪಠ್ಯೇತರ ಪ್ರಶ್ನೆಗಳ ಬಗ್ಗೆ ವರದಿ ನೀಡಲು ಇಲಾಖೆ ರಚಿಸಿದ್ದ ಸ್ಕೀಮ್ ಆಫ್ ವಾಲ್ಯುಯೇಷನ್ ಕಮಿಟಿ ಸಹ ಗ್ರೇಸ್ ಅಂಕ ನೀಡಲು ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಹೈಕೋರ್ಟ್ ಅದೇಶದಿಂದಾಗಿ ಪಿಯು ವಿದ್ಯಾರ್ಥಿಗಳು ಕೊಂಚ ನಿರಾಳರಾಗಬಹುದು. ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯ ನಡೆಯುತ್ತಿದ್ದು, ಮೇ 3ರೊಳಗೆ ಫಲಿತಾಂಶ ಪ್ರಕಗೊಳ್ಳುವ ನಿರೀಕ್ಷೆ ಇದೆ. ಒನ್ಇಂಡಿಯಾ ಈ ಬಾರಿಯೂ ದ್ವಿತೀಯ ಪಿಯುಸಿ ಫಲಿತಾಂಶವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಿದೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
High Court of Karnataka has passed an order to grant 9 grace marks for Mathematics paper. Mathematics paper had 6 questions out of syllabus, which students found difficult to answer. Court has also directed PUC Examination Board to be careful while framing questions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X