ಪ್ರಬಲ ಜಾತಿಗಳಿಗೆ ಟಿಕೆಟ್ : ಪಕ್ಷಗಳ ಜಾತಿ ಲೆಕ್ಕಾಚಾರ

ಈ ಬಾರಿಯ ಚುನಾವಣೆಯು ಜಾತಿ ಲೆಕ್ಕಾಚಾರಗಳಿಂದ ಹೊರತಾಗಿಲ್ಲ. ಪ್ರಮುಖ ಪಕ್ಷಗಳು ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದು ಲಿಂಗಾಯತ ಸಮುದಾಯಕ್ಕೆ. ಸಾಮಾಜಿಕ ನ್ಯಾಯದ ಬಗ್ಗೆ ಗಂಟೆ ಗಟ್ಟೆಲೆ ನಿರರ್ಗಳವಾಗಿ ಮಾತನಾಡುವ ಪಕ್ಷದ ಮುಖಂಡರು ಟಿಕೆಟ್ ಕೇಳಿದರೆ ಮೊದಲು ಯಾವ ಜಾತಿಯವರು ಎಂದು ನೋಡುತ್ತಾರೆ.
ಲಿಂಗಾಯತರು, ಒಕ್ಕಲಿಗರಿಗೆ ಪ್ರಮುಖ ಪಕ್ಷಗಳು ಹೆಚ್ಚಿನ ಪ್ರಾತಿನಿಧ್ಯ ನೀಡಿದ್ದರೆ, 51 ಕ್ಷೇತ್ರಗಳು ಮೀಸಲಾಗಿದ್ದವು ಎಂಬ ಕಾರಣಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಆದ್ಯತೆ ದೊರಕಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ, ಕೆಜೆಪಿ ಪಕ್ಷಗಳಿಂದ ಒಟ್ಟು 266 ಲಿಂಗಾಯತ ಅಭ್ಯರ್ಥಿಗಳು ಕಣದಲ್ಲಿದ್ದು ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಮೊದಲ ಸ್ಥಾನ ದೊರಕಿದೆ.
ಐದು ಪಕ್ಷಗಳಿಂದ 194 ಒಕ್ಕಲಿಗರು ಚುನಾವಣೆ ಕಣದಲ್ಲಿದ್ದು, ಇವರು ಎರಡನೇ ಸ್ಥಾನ ಪಡೆದಿದ್ದಾರೆ. ಮುಸ್ಲಿಂ ಅಭ್ಯರ್ಥಿಗಳಿಗೆ ಜೆಡಿಎಸ್ ಹೆಚ್ಚಿನ ಒತ್ತು ನೀಡಿದೆ. 20 ಮುಸ್ಲಿಂ ಅಭ್ಯರ್ಥಿಗಳು ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಧುಮುಕಿದ್ದಾರೆ. ಕಾಂಗ್ರೆಸ್ 19 ಮತ್ತು ಕೆಜೆಪಿ 11 ಮುಸ್ಲಿಂ ಅಭ್ಯರ್ಥಿಗಳಿಗೆ ಅವಕಾಶ ನೀಡಿದೆ.
ಪ್ರಮುಖ ಪಕ್ಷಗಳ ಜಾತಿವಾರು ಲೆಕ್ಕಾಚಾರ ಹೀಗಿದೆ.
ಕಾಂಗ್ರೆಸ್
ಲಿಂಗಾಯತರು - 61
ಒಕ್ಕಲಿಗರು - 39
ಎಸ್ ಸಿ - 35
ಎಸ್ ಟಿ - 17
ಒಬಿಸಿ - 48
ಮುಸ್ಲಿಂ - 19
ಇತರೆ - 5
ಒಟ್ಟು - 224
ಬಿಜೆಪಿ
ಲಿಂಗಾಯತರು - 60
ಒಕ್ಕಲಿಗರು - 51
ಎಸ್ ಸಿ - 33
ಎಸ್ ಟಿ - 18
ಒಬಿಸಿ - 32
ಮುಸ್ಲಿಂ - 0
ಇತರೆ - 29
ಒಟ್ಟು - 223
ಜೆಡಿಎಸ್
ಲಿಂಗಾಯತರು - 44
ಒಕ್ಕಲಿಗರು - 56
ಎಸ್ ಸಿ - 40
ಎಸ್ ಟಿ - 21
ಒಬಿಸಿ - 13
ಮುಸ್ಲಿಂ - 20
ಇತರೆ - 28
ಒಟ್ಟು - 222
ಕೆಜೆಪಿ
ಲಿಂಗಾಯತರು - 71
ಒಕ್ಕಲಿಗರು - 38
ಎಸ್ ಸಿ - 40
ಎಸ್ ಟಿ - 16
ಒಬಿಸಿ - 20
ಮುಸ್ಲಿಂ - 11
ಇತರೆ - 9
ಒಟ್ಟು - 205
ಬಿಎಸ್ಆರ್ ಕಾಂಗ್ರೆಸ್
ಲಿಂಗಾಯತರು - 30
ಒಕ್ಕಲಿಗರು - 10
ಎಸ್ ಸಿ - 33
ಎಸ್ ಟಿ - 15
ಒಬಿಸಿ - 20
ಇತರೆ - 23
ಒಟ್ಟು - 131
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications