Get Updates
Get notified of breaking news, exclusive insights, and must-see stories!

ನರೇಂದ್ರ ಮೋದಿ ಮುಂದೆ, ರಾಜನಾಥ್ ಹಿಂದೆ!

ಬೆಂಗಳೂರು, ಏ. 24 : ಭಾರತೀಯ ಜನತಾ ಪಕ್ಷದ ಸರ್ವೋಚ್ಚ ನಾಯಕ ಯಾರು? ಬೆಂಗಳೂರಿನ ವಿಧಾನಸಭೆ ಕ್ಷೇತ್ರದಲ್ಲಿನ ಅಭ್ಯರ್ಥಿಗಳು ಯಾವ ಹಿರಿಯ ನಾಯಕನ ಹೆಸರನ್ನು ಮುಂದಿಟ್ಟುಕೊಂಡು ಪ್ರಚಾರ ಮುಂದುವರಿಸಿದ್ದಾರೆ? ಯಾವ ನಾಯಕನ ಚಿತ್ರವನ್ನು ಬಿಂಬಿಸಿದರೆ ತಾವು ಗೆಲ್ಲಬಹುದೆಂದು ಅನೇಕ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ?

ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅಂತ ನೀವು ಊಹಿಸಿದ್ದರೆ, ನಿಮ್ಮ ಊಹೆ ತಪ್ಪು. ರಾಜನಾಥ್ ಸಿಂಗ್ ಅವರ ಹೆಸರನ್ನು ಹಿಂದೆ ಹಾಕಿ, ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಎಂದೇ ಬಹುಪಾಲು ನಾಯಕರಿಂದ ಬಿಂಬಿತವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಭಿತ್ತಿಪತ್ರಗಳಲ್ಲಿ ರಾರಾಜಿಸುತ್ತಿದ್ದಾರೆ.

ಇದು ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಮತ್ತು ಅವರ ವರ್ಚಸ್ಸಿಗೆ ಹಿಡಿದ ಕನ್ನಡಿ ಎಂದರೂ ತಪ್ಪಾಗಲಾರದು. ಪ್ರತಿಷ್ಠಿತ ಕ್ಷೇತ್ರವಾಗಿರುವ ಪದ್ಮನಾಭನಗರದಲ್ಲಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮತ್ತು ಶಿವಾಜಿನಗರದ ಬಿಜೆಪಿ ಅಭ್ಯರ್ಥಿ ನಿರ್ಮಲ್ ಸುರಾನಾ ಅವರು ಭಿತ್ತಿಪತ್ರದಲ್ಲಿ ನರೇಂದ್ರ ಮೋದಿ ಅವರಿಗೆ ಅಗ್ರಸ್ಥಾನ ನೀಡಿರುವುದು ಅಚ್ಚರಿ ಮೂಡಿಸುವುದರ ಜೊತೆ, ಮೋದಿ ಅವರನ್ನೇ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ.

Narendra Modi ahead of Rajnath Singh

'ಪದ್ಮನಾಭನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗಾಗಿ ಈ ಬಾರಿ ನಿಮ್ಮ ಆಯ್ಕೆ ಬಿಜೆಪಿ ಅಭ್ಯರ್ಥಿಯಾದ ಆರ್ ಅಶೋಕ್ ಅವರಿಗೆ' ಎಂದು ಬರೆಸಲಾದ ಭಿತ್ತಿಪತ್ರದಲ್ಲಿ ಅತ್ಯುನ್ನತ ನಾಯಕರಾಗಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ಕರ್ನಾಟಕದ ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ ಅವರವರೆಗೆ ಅನೇಕ ನಾಯಕರ ಚಿತ್ರವನ್ನು ಮುದ್ರಿಸಲಾಗಿದೆ.

ಅದರಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅಡ್ವಾಣಿ ಅವರ ನಂತರದ ಸ್ಥಾನವನ್ನು ನರೇಂದ್ರ ಮೋದಿ ಅವರಿಗೆ ನೀಡಲಾಗಿದೆ. ಅವರ ಕೆಳಗಿನ ಸ್ಥಾನ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ಅಲಂಕರಿಸಿದ್ದಾರೆ. ನಿರ್ಮಲ್ ಸುರಾನಾ ಅವರು ಮುದ್ರಿಸಿರುವ ಭಿತ್ತಿಪತ್ರದಲ್ಲಿ ಕೇವಲ ನರೇಂದ್ರ ಮೋದಿ ಅವರು ಮಾತ್ರ ಸ್ಥಾನ ಪಡೆದಿದ್ದಾರೆ. ರಾಷ್ಟ್ರೀಯ ನಾಯಕರಿರಲಿ ರಾಜ್ಯದ ಉಳಿದ ನಾಯಕರನ್ನೂ ಅದರಲ್ಲಿ ಪರಿಗಣಿಸಲಾಗಿಲ್ಲ.

ನರೇಂದ್ರ ಮೋದಿ ಅವರು ಪ್ರಧಾನಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಬಿಂಬಿತವಾಗುತ್ತಾರಾ ಇಲ್ಲವಾ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಈ ಕುರಿತಂತೆ ಬಿಜೆಪಿ ಭಾರೀ ಜಿಜ್ಞಾಸೆಯಲ್ಲಿ ತೊಡಗಿದೆ. ಕೆಲವರು ಮೋದಿ ಅವರನ್ನು ಬಹಿರಂಗವಾಗಿ ಬೆಂಬಲಿಸುತ್ತಿದ್ದರೆ, ಕೆಲ ನಾಯಕರು ಅಡ್ವಾಣಿ ಅವರನ್ನು ಮುಂದಿಟ್ಟುಕೊಂಡಿದ್ದಾರೆ. ಈ ಜಟಾಪಟಿ ಇನ್ನೂ ಕೆಲ ಕಾಲ ಮುಂದುವರಿಯಬಹುದು.

ಈ ನಡುವೆ, ನರೇಂದ್ರ ಮೋದಿ ಅವರು ಒಂದು ದಿನದ ಮಟ್ಟಿಗೆ ರಾಜ್ಯದಲ್ಲಿ ಪ್ರಚಾರ ಮಾಡುವುದು ನಿಗದಿಯಾಗಿದೆ. ಮೋದಿ ಅವರು ಏ.28ರಂದು, ಭಾನುವಾರ ಬೆಂಗಳೂರಿನಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಏ.28ರಂದು ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮೋದಿ ಅವರು ಬೃಹತ್ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉಳಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಅವರು ಪ್ರಚಾರ ಕೈಗೊಳ್ಳುತ್ತಿದ್ದಾರೆ.

ಪದ್ಮನಾಭನಗರ ಕ್ಷೇತ್ರದ ವಾರ್ಡುಗಳು : ಪದ್ಮನಾಭನಗರ, ಹೊಸಕೆರೆಹಳ್ಳಿ, ಗಣೇಶ್ ಮಂದಿರ ವಾರ್ಡ್, ಕರಿಸಂದ್ರ, ಯಡಿಯೂರು, ಬನಶಂಕರಿ ದೇವಸ್ಥಾನ ವಾರ್ಡ್, ಕುಮಾರಸ್ವಾಮಿ ಲೇಔಟ್, ಚಿಕ್ಕಲಸಂದ್ರ.

ಶಿವಾಜಿನಗರ ಕ್ಷೇತ್ರದ ವಾರ್ಡುಗಳು : ಶಿವಾಜಿನಗರ, ರಾಮಸ್ವಾಮಿ ಪಾಳ್ಯ, ಜಯಮಹಲ್, ಹಲಸೂರು, ಭಾರತಿನಗರ, ವಸಂತ ನಗರ, ಸಂಪಂಗಿರಾಮ ನಗರ

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+