ಪತ್ನಿಗೆ ಕಂಟಕರಾಗಿದ್ದ ಅಪ್ಪ-ಅಮ್ಮನ ಕೊಂದ ಪೇದೆ

new-delhi-frustrated-young-cop-stabs-parents-to-death
ನವದೆಹಲಿ, ಏ.22: ಹೆತ್ತಮ್ಮ ಅಪ್ಪನ ಬಗ್ಗೆ ಆ ಯುವಕನಿಗೆ ಅದೆಷ್ಟು ಸಿಟ್ಟು ಇತ್ತೋ ಒಂದೇ ಸಮನೆ ಅವರಿಬ್ಬರನ್ನೂ ಇರಿದಿರಿದು ಕೊಂದು ಬಿಸಾಕಿದ್ದಾನೆ. 25 ವರ್ಷದ ಪೊಲೀಸ್ ಪೇದೆ ನೀರಜ್ ಯಾದವ್ ಈ ಕಥಾನಕದ ಆರೋಪಿ. ಆದರೆ ಯಾದವ್ ಹೇಳುವ ಕಥೆಯೇ ಬೇರೆ.

ಅಪ್ಪ ಧರಂ ಸಿಂಗ್ ಯಾದವ್ (49) ಮತ್ತು ಕಮಲೇಶ್ ಯಾದವ್ (45) ನನ್ನೊಂದಿಗೆ ಸದಾ ಜಗಳವಾಡುತ್ತಿದ್ದರು. ಅಷ್ಟೇ ಅಲ್ಲ. ನನ್ನ ಹೆಂಡತಿಯ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದರು ಎಂದು ಆರೋಪಿ ಕಿಡಿಕಾರಿದ್ದಾನೆ. ಚಾವ್ಲಾದ ಪಪರಾವತ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಶನಿವಾರ ರಾತ್ರಿ ತನ್ನ ಮಾತಾಪಿತೃಗಳನ್ನು ಇಹಲೋಕಕ್ಕೆ ಕಳಿಸಿದ ಯಾದವ್ ಅವರ ಶವಗಳನ್ನು ಸಮೀಪದ ಪಕ್ಕದ ಕಟ್ಟಡದೊಳಕ್ಕೆ ಎಳೆದೊಯ್ದು, ಹಸುಗಳ ಕೋಣೆಯೊಳಕ್ಕೆ ಹಾಕಿಬಂದಿದ್ದಾನೆ.

ಭಾನುವಾರ ಬೆಳಗ್ಗೆ ತನ್ನ ಮನೆಯಲ್ಲಿ 2 ಹೆಣಗಳನ್ನು ನೋಡಿದ ಆ ಕಟ್ಟಡದ ಮಾಲೀಕ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಲಾಗಿ, ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿದ್ದಾರೆ. ಬಳಿಕ, ಆರೋಪಿ ತಮ್ಮದೇ ಇಲಾಖೆಯ ಪೇದೆ ನೀರಜ್ ಎಂಬುದನ್ನು ಪತ್ತೆ ಮಾಡಿ. ಆತನನ್ನು ಬಂಧಿಸಿದ್ದಾರೆ. ಪೇದೆ ನೀರಜ್ ಯಾದವನನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಮೊದಲು ರಾಡ್ ನಿಂದ ಅಪ್ಪನಿಗೆ ಬಲವಾಗಿ ಬೀಸಿದ್ದಾನೆ. ನಂತರ, ಸತತವಾಗಿ ಇರಿದಿದ್ದಾನೆ. ಆ ವೇಳೆ ಆತನ ತಾಯಿ ಕಮಲೇಶ್ ಯಾದವ್ ಮಧ್ಯ ಪ್ರವೇಶಿಸಿದ್ದಾರೆ. ಆಗ ತಾಯಿಗೂ ಚೂರಿ ಹಾಕಿದ್ದಾನೆ. ನಂತರ ಇಬ್ಬರ ಹೆಣಗಳನ್ನು ಮೊದಲ ಮಹಡಿಗೆ ಎಳೆದೊಯ್ದು ಅಲ್ಲಿಂದ ಪಕ್ಕದ ಕಟ್ಟಡದೊಳಕ್ಕೆ ಬಿಸಾಕಿದ್ದಾನೆ. ಮತ್ತೆ ಕೆಳಗಿಳಿದುಬಂದು, ಪಕ್ಕದ ಕಟ್ಟಡಕ್ಕೆ ತೆರಳಿ, ಹಸುಗಳ ಕೊಠಡಿಯಲ್ಲಿ ಶವಗಳನ್ನು ಮುಚ್ಚಿಟ್ಟುಬಂದಿದ್ದ.

ಮನೆಯಲ್ಲಿ ಅಪ್ಪ-ಅಮ್ಮ ಮತ್ತು ಮಗ ನೀರಜ್ ಮಧ್ಯೆ ಸದಾ ಜಗಳಗಳು ಆಗುತ್ತಿದ್ದವು. ಇದರಿಂದ ಬೇಸತ್ತು ನೀರಜ್ ನ ಮೊದಲ ಪತ್ನಿ ಮನೆ ಬಿಟ್ಟು ಹೋಗಿದ್ದಳು. 2008ರಲ್ಲಿ ದೆಹಲಿ ಪೊಲೀಸ್ ಇಲಾಖೆಗೆ ಸೇರಿದ್ದ ನೀರಜ್, ಪಟಿಯಾಲಾ ಹೌಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ನೀರಜ್ ಅಪ್ಪ ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+